News

‘ಮಾದಪ್ಪನ’ ಹಾಡು ‘ಅಪ್ಪು ಸರ್ ಕನಸು’: ಗಾಯಕ ನವೀನ್ ಸಜ್ಜು

‘ಮಾದಪ್ಪನ’ ಹಾಡು ‘ಅಪ್ಪು ಸರ್ ಕನಸು’: ಗಾಯಕ ನವೀನ್ ಸಜ್ಜು
  • PublishedNovember 18, 2021

ಕರುನಾಡು ಕಂಡ ಅಸಮಾನ್ಯ ಪ್ರತಿಭೆ, ತಾನು ಬೆಳೆಯುವುದರ ಜೊತೆ ಜೊತೆಗೆ ತನ್ನ ಸುತ್ತಲಿರುವವರನ್ನು ಬೆಳಸಬೇಕೆನ್ನುವ ಹಂಬಲ, ತುಡಿತ, ಇದ್ದಂತ ಮೇರು ನಟ ‘ಪುನೀತ್ ರಾಜಕುಮಾರ್’, ಅವರು ಇಂದು ನಮ್ಮೊಂದಿಗಿಲ್ಲಾ ಆದರೆ ಅವರು ಬಿತ್ತಿರುವ ಬೀಜಗಳು ಒಂದೊಂದಾಗಿ ಮೊಳಕೆಯೊಡೆದು ಅವರು ಕನ್ನಡ ಚಿತ್ರರಂಗ ಮತ್ತು ಸಮಾಜಕ್ಕೆಂದು ಕಟ್ಟಿಕೊಂಡಿದ್ದ ಕನಸುಗಳು ಒಂದೊಂದೇ ಅನಾವರಣಗೊಳ್ಳುತ್ತಿವೆ.  ಒಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಮಾಡಲಾಗದ ಕೆಲಸವನ್ನು ತಮ್ಮ ಗಿದ್ದ ಅಲ್ಪಾಯಸ್ಸಿನಲ್ಲೆ (46 ವರ್ಷದಲ್ಲೆ) ಮಾಡಿಹೋಗಿದ್ದಾರೆ ಪುನೀತ್ ರಾಜಕುಮಾರ್. ಇಷ್ಟು ಚಿಕ್ಕ ವಯಸ್ಸಿನಲ್ಲೆ ಇಷ್ಟೆಲ್ಲಾ ಕೆಲಸಗಳನ್ನು ಮಾಡಿರುವ ಅಪ್ಪುವನ್ನು ಕಳೆದುಕೊಂಡಿರುವ ಅಭಿಮಾನಿಗಳು ಅವರ ಸರಳತೆ ಮತ್ತು ಮುಗ್ದತೆಯನ್ನು ತಮ್ಮ ತಮ್ಮ ಮನಸ್ಸಿನಲ್ಲೆ ನೆಲೆಗೊಳಿಸಿ ಅಭಿಮಾನ ತೋರುತ್ತಿದ್ದಾರೆ.

ನಟ ಪುನೀತ್ ರಾಜ್​ಕುಮಾರ್ ನಾಡು- ನುಡಿಯ ಬಗ್ಗೆ ಅಪಾರ ಪ್ರೀತಿ ಇದ್ದ ಕಲಾವಿದರಾಗಿದ್ದರು. ಸದಾ ಹೊಸದೇನನ್ನೋ ಮಾಡಬೇಕು ಎಂಬ ತುಡಿತ ಹೊಂದಿದ್ದ ಅವರು, ಇದಕ್ಕೆ ಸಂಬಂಧಪಟ್ಟಂತೆ ಹಲವು ಪ್ರಾಜೆಕ್ಟ್​​ಗಳ ತಯಾರಿಯಲ್ಲಿದ್ದರು. ಕರ್ನಾಟಕ ವನ್ಯಜೀವಿ ಸಂಪತ್ತಿನ ಹಿರಿಮೆ ಸಾರುವ ‘ಗಂಧದ ಗುಡಿ’ಯ ಬಿಡುಗಡೆಗೆ ಸಿದ್ಧತೆಯೂ ನಡೆದಿತ್ತು. ಇದೀಗ ಪುನೀತ್ ಕಂಡಿದ್ದ ಮತ್ತೊಂದು ಅಪರೂಪದ ಕನಸು,ಏನು ಆ ಕನಸ್ಸನ್ನು ಸಾಕಾರಗೊಳಿಸಿ ಅಪ್ಪು ಅವರಿಗೆ ಅರ್ಪಿಸಲು ಮುಂದಾಗಿದ್ದಾರೆ ಸ್ಯಾಂಡಲ್ ವುಡ್ ಗಾಯಕ ನವೀನ್ ಸಜ್ಜು.

ಖ್ಯಾತ ಗಾಯಕ ನವೀನ್ ಸಜ್ಜು ಕನ್ನಡ ಪಿಚ್ಚರ್ ಜೊತೆ ಮಾತನಾಡಿದ್ದು, ಅದರಲ್ಲಿ ಅವರು ಪುನೀತ್ ಮಲೆ ಮಹದೇಶ್ವರನ ಬಗ್ಗೆ ಹಾಡೊಂದನ್ನು ಹೊರ ತರುವ ಪ್ರಯತ್ನ ನಡೆಸಿದ್ದರ ಬಗ್ಗೆ ವಿವರಿಸಿದ್ದಾರೆ. ಪುನೀತ್ ರಾಜ್​ಕುಮಾರ್ ಅವರು ಮಲೆ ಮಹದೇಶ್ವರನ ಕುರಿತ ಹಾಡೊಂದನ್ನು ಹೊರತರಲು ಉದ್ದೇಶಿಸಿದ್ದರು. ಅದಕ್ಕೆ ಪಿಆರ್​ಕೆ ಬ್ಯಾನರ್​ನಲ್ಲಿ ಅವಕಾಶವನ್ನೂ ಮಾಡಿಕೊಟ್ಟಿದ್ದರು. ವಿಶೇಷವೆಂದರೆ, ಮಲೆ ಮಹದೇಶ್ವರನ ಹಾಡು ಹಾಡಿ, ಹೆಜ್ಜೆ ಹಾಕಲು ಕೂಡ ಅಪ್ಪು ರೆಡಿ ಆಗಿದ್ದರು ಎಂದು ನವೀನ್ ಸಜ್ಜು ನುಡಿದಿದ್ದಾರೆ.

Written By
Kannadapichhar

Leave a Reply

Your email address will not be published. Required fields are marked *