ಪವರ್ ಸ್ಟಾರ್ ಹಾಡಿರೋ ಫಸ್ಟ್ Rap ಸಾಂಗ್ ಫೆ.8ಕ್ಕೆ ರಿಲೀಸ್
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ, ಬದುಕಿನಿಂದ ತುಂಬಾ ಜನರಿಗೆ ಇನ್ಸ್‌ಪೈರ್ ಮಾಡಿದ್ರೆ ತಮ್ಮ ಹಾಡುಗಳಿಂದ ಇವತ್ತಿಗೂ, ಮುಂದಿಗೂ ರಂಜಿಸ್ತಾರೆ. ಎಲ್ಲಾ ಸ್ಟೈಲ್‌ನ ಹಾಡುಗಳೊಗೆ ಧ್ವನಿಯಾಗಿದ್ದ ಅಪ್ಪು ಫಸ್ಟ್ ಟೈಮ್ ಒಂದು ರ್ಯಾಪ್ ಸಾಂಗ್ ಗೆ ಧ್ವನಿಯಾಗಿದ್ದಾರೆ. ಈ ಹಾಡು ಇದೇ ಫೆ.8ರಂದು ಬೆಳಗ್ಗೆ 11.06ಕ್ಕೆ ರಿಲೀಸ್ ಆಗ್ತಾ ಇದೆ. ಪ್ರದೀಪ್ ಅಭಿನಯದ ಥ್ರಿಲ್ಲರ್ ಸಿನಿಮಾ ʻಎಲ್ಲೋ ಬೋರ್ಡ್ʼ ಸಿನಿಮಾಕ್ಕಾಗಿ ಅಪ್ಪು ಹಾಡಿರೋ ಈ ರ್ಯಾಪ್ ಸಾಂಗ್, ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗ್ತಾ ಇದೆ.
ಅದ್ವಿಕ್ ಮ್ಯೂಸಿಕ್ ಕಂಪೋಸ್ ಮಾಡಿರೋ ʻಹತ್ರೋ ಎಲ್ಲೋ ಬೋರ್ಡು…..ʼ ಹಾಡಿಗೆ ಪವರ್ ಸ್ಟಾರ್ ಧ್ವನಿಯಾಗಿದ್ದಾರೆ. ಇದೇ ಮಾರ್ಚ್ 4ಕ್ಕೆ ತೆರೆಗೆ ಬರ್ತಾ ಇರೋ ಎಲ್ಲೋ ಬೋರ್ಡ್ ಸಿನಿಮಾವನ್ನ ಥ್ರಿಲೋಕ್ ರೆಡ್ಡಿ ನಿರ್ದೇಶಣ ಮಾಡ್ತಿದ್ದು, ವಿಂಟೇಜ್ ಫಿಲಮ್ಸ್ ನಿರ್ಮಾಣ ಮಾಡ್ತಾ ಇದೆ.
