ಅಪ್ಪು ಅಭಿಮಾನಿಗಳಿಂದ ಅಭಿಮಾನದ ಪಾದಯಾತ್ರೆ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಂದ ಅಭಿಮನದ ಪಾದಯಾತ್ರೆ ಕಾರ್ಯಕ್ರಮ ಇಂದು ಬೆಂಗಲೂರಿನಲ್ಲಿ ನಡೆಯುತ್ತಿದೆ. ಸಚಿವ ವಿ ಸೋಮಣ್ಣ, ಗೋಪಾಲಯ್ಯ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಅಭಿಮಾನಿಗಳೇ ಮಾಡ್ತಾ ಇರೋ ಈ ಕಾರ್ಯಕ್ರಮಕ್ಕೆ’ಕಟ್ಟಾಭಿಮಾನಿಗಳಿಂದ ಕಾಲ್ನಡಿಗೆಯ ನಮನ’ ಅಂತ ಹೆಸರಿಡಲಾಗಿದೆ.
ಈ ಪಾದಯಾತ್ರೆಯ್ಲಿ ಅಭಿಮಾನಿಗಳು ಬರಿಗಾಲಿನಲ್ಲಿ ಮಾಗಡಿ ಮುಖ್ಯರಸ್ತೆಯಿಂದ ಕಂಠೀರವ ಸ್ಟುಡಿಯೋ ವರೆಗೆ ಪಾದಯಾತ್ರೆ ಮಾಡ್ತಾ ಇದ್ದಾರೆ. ಇಂದು ಬೆಳಗ್ಗೆ ಮಾಗಡಿ ಮುಖ್ಯ ರಸ್ತೆಯ ಹೌಸಿಂಗ್ ಬೋರ್ಡ್ ನಿಂದ ಶುರುವಾಗ್ತಿರುವ ಪಾದಯಾತ್ರೆಯಲ್ಲಿ ನೂರಾರು ಜನ ಅಭಿಮಾನಿಗಳು ಪಾಲ್ಗೊಂಡಿದ್ದಾರೆ. ಬೆಂಗಳೂರು ಮಾತ್ರವಲ್ಲದೆ ದೂರದ ಊರುಗಳಿಂದ ಬಂದ ಅಭಿಮಾನಿಗಳು ಈ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ.