News

ಅಪ್ಪು ಸಮಾಧಿಗೆ 550 ಕಿಮೀ ಕಾಲ್ನಡಿಗೆಯಲ್ಲಿ ಬಂದ ಮಹಿಳೆ! Live

ಅಪ್ಪು ಸಮಾಧಿಗೆ 550 ಕಿಮೀ ಕಾಲ್ನಡಿಗೆಯಲ್ಲಿ ಬಂದ ಮಹಿಳೆ! Live
  • PublishedDecember 14, 2021

ಪುನೀತ್ ರಾಜಕುಮಾರ್ ತೀರಿಕೊಂಡಾಗಿನಿಂದಲೂ ಅವರ ಪುಣ್ಯಭೂಮಿಗೆ ಭೇಟಿ ನೀಡುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಬದುಕಿದ್ದಾಗಲಂತೂ ಅವರನ್ನು ನೋಡಲಾಗಲಿಲ್ಲಾ, ಈಗಲಾದರೂ ಅವರ ಸಮಾಧಿಗೆ ನಮಿಸಬೇಕೆಂಬ ಹಂಬಲ ಹಲವರಲ್ಲಿ ಇದ್ದು,ದೂರದ ಊರುಗಳಿಂದ ಬಂದು ಪುನೀತ್ ಸಮಾಧಿಗೆ ನಮಿಸುತ್ತಿದ್ದಾರೆ. ದಾಕ್ಷಾಯಿಣಿ  ಎಂಬ ಮಹಿಳೆಯೊಬ್ಬರು ಅಪ್ಪು ಅವರ ಪುಣ್ಯಭೂಮಿಗೆ ಕಾಲ್ನಡಿಗೆಯಲ್ಲಿ ಧಾರವಾಡದಿಂದ ಅಣ್ಣಾವ್ರ ಪುಣ್ಯಕ್ಷೇತ್ರದ ವರೆಗೂ ನಡೆದುಕೊಂಡು ಬಂದು ಮಧ್ಯಾಹ್ನ 1 ಗಂಟೆಗೆ ಅಣ್ಣಾವ್ರ ಸ್ಮಾರಕ ತಲುಪಿದ್ದಾರೆ.

ಧಾರವಾಡದಿಂದ ಓಡುತ್ತ ಬಂದ ದಾಕ್ಷಾಯಿಣಿಯನ್ನು ದೊಡ್ಮನೆ ಯುವ ರಾಜ್‍ಕುಮಾರ್ ಸ್ವಾಗತಿಸಿದ್ದಾರೆ. ಧಾರವಾಡ ಬಳಿಯ ಮನಗುಂಡಿ ಗ್ರಾಮದ ದಾಕ್ಷಾಯಿಣಿ.. ಓಡುತ್ತಲೇ ಬೆಂಗಳೂರಿಗೆ ಆಗಮಿಸಿರುವ ಅಭಿಮಾನಿ 500 ಕಿ.ಮೀ ದೂರವನ್ನು ಕ್ರಮಿಸಿ ಪುನೀತ್ ಪುಣ್ಯಭೂಮಿಯನ್ನು ತಲುಪಿದ್ದಾರೆ

ಮನಗುಂಡಿಯ ಉಮೇಶ್ ಪಾಟೀಲ್ ಕುಟುಂಬದ ಎಲ್ಲರೂ ಅಪ್ಪು ಅವರ ಅಪ್ಪಟ ಅಭಿಮಾನಿಗಳು, ಇಂದು 1 ಘಂಟೆ ಸುಮಾರಿಗೆ ಸಮಾಧಿ ತಲುಪಿದ ದಾಕ್ಷಾಯಿಣಿ ಅಪ್ಪು ಅವರ ಸಮಾಧಿಗೆ ಬಂದು ದರ್ಶನ‌ ಪಡೆದಿದ್ದಾರೆ ಕಳೆದ 14 ದಿನಗಳ ಹಿಂದೆ ಓಟ ಆರಂಭ ಮಾಡಿದ್ದ ದಾಕ್ಷಾಯಿಣಿ ಮೂರು ಮಕ್ಕಳ ತಾಯಿಯಾದ್ರೂ ಇಂತ ಸಾಹಸಕ್ಕೆ ಕೈ ಹಾಕಿ ಅಭಿಮಾನ‌ ಮೆರೆದಿದ್ದಾರೆ,

ಪುನೀತ್ ರಾಜಕುಮಾರ್ ಅವರ ಅಕಾಲಿಕ ಸಾವು ನಾಡಿನ ಕೋಟ್ಯಾಂತರ ಜನರನ್ನ ನ್ನು ಕಾಡುತ್ತಲೇ ಇದೆ. ಪುನೀತ್ ರಾಜಕುಮಾರ್ ಅವರು ಬದುಕಿದಷ್ಟು ಕಾಲ ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ, ಆದರೆ ಅದ್ಯಾವುದು ಇತರರಿಗೆ ತಿಳಿಯದಂತೆ ಈ ಕಾರ್ಯಗಳನೆಲ್ಲಾ ಮಾಡಿದ್ದರು. ಈಗ ಅವರ ಮರಣಾನಂತರ ಪುನೀತ್ ಮಾಡಿದ್ದ ಸಹಾಯ ಮತ್ತದನ್ನು ಪಡೆದುಕೊಂಡವರು ಪುನೀತ್ ರಾಜಕುಮಾರ್ ಅವರನ್ನು ಸ್ಮರಿಸುತ್ತಲೇ ಇದ್ದಾರೆ ಮತ್ತು ತಮ್ಮ ಮನೆಯ ಬ್ಬ ಸದಸ್ಯನನ್ನು ಕಳೆದುಕೊಂಡಷ್ಟೆ ಸಂಕಟ ಪಡುತ್ತಿದ್ದಾರೆ.

****

Written By
Kannadapichhar

Leave a Reply

Your email address will not be published. Required fields are marked *