ಪಿಚ್ಚರ್ stories ಪಿಚ್ಚರ್ UPDATE

ಬರ್ತ್​​​ಡೇ ದಿನ ಮನೆಯಲ್ಲಿ ಇರಲ್ಲ; ಫ್ಯಾನ್ಸ್ ಭಾವುಕಗೊಳಿಸಿದ ಅಪ್ಪು ಹಳೆ ವಿಡಿಯೋ..

ಬರ್ತ್​​​ಡೇ ದಿನ ಮನೆಯಲ್ಲಿ ಇರಲ್ಲ; ಫ್ಯಾನ್ಸ್ ಭಾವುಕಗೊಳಿಸಿದ ಅಪ್ಪು ಹಳೆ ವಿಡಿಯೋ..
  • PublishedMarch 9, 2026


ಹೌದು.. ಪುನೀತ್ ರಾಜ್​​​ಕುಮಾರ್ ಇಂದು ದೈಹಿಕವಾಗಿ ನಮ್ಮೊಂದಿಗೆ ಇಲ್ಲ. ಮಾರ್ಚ್ 17 ಅವರ ಹುಟ್ಟಿದ ದಿನ. ಅಪ್ಪು ಇಲ್ಲದೆ ಹುಟ್ಟುಹಬ್ಬ ಆಚರಿಸೋದು ಅಭಿಮಾನಿಗಳ ಪಾಲಿಗೆ ನಿಜಕ್ಕೂ ಕಷ್ಟ. ಈಗ ಪುನೀತ್ ರಾಜ್​​ಕುಮಾರ್ ಅವರ ಹಳೆಯ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಪುನೀತ್ ಅವರು ಈ ಬಾರಿ ನಾನು ಬರ್ತ್​​ಡೇ ದಿನ ಮನೆಯಲ್ಲಿ ಇರಲ್ಲ. ಮನೆ ಬಳಿ ಬರಬೇಡಿ ಎಂದು ಹೇಳಿದ್ರು.. ಈ ವಿಡಿಯೋ ಮತ್ತೆ ವೈರಲ್ ಆಗಿದೆ. ಐದು ವರ್ಷಗಳಿಂದ ಪುನೀತ್ ಇದೇ ಮಾತನ್ನು ಹೇಳುತ್ತಿದ್ದಾರೆ ಎಂದು ಫ್ಯಾನ್ಸ್ ಹೇಳಿಕೊಂಡು ಕಣ್ಣೀರಾಕಿದ್ದಾರೆ..
ಅಪ್ಪು ಹುಟ್ಟಿದ ದಿನವನ್ನು ಫ್ಯಾನ್ಸ್ ಉತ್ಸವದ ರೀತಿ ಸಂಭ್ರಮಿಸುತ್ತಾರೆ.. ಅಷ್ಟೆ ಅಲ್ಲದೆ ಪ್ರೀತಿಯ ಯುವರಾಜನನ್ನು ನೋಡಲು ಕಂಠೀರಲ ಸ್ಟುಡಿಯೋದತ್ತ ಜಮಾಯಿಸ್ತಾರೆ.. ಸೋಶಿಯಲ್ ಮೀಡಿಯಾದಲ್ಲಿ ಪ್ರತಿದಿನ ಅಪ್ಪು ವಿಡಿಯೋಗಳು ವೈರಲ್ ಆಗುತ್ತೆ ಅದೇ ರೀತಿ ಈಗ ಅಪ್ಪು 5 ವರ್ಷದ ಹಿಂದಿನ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ..

Written By
Kannada Picchar

Leave a Reply

Your email address will not be published. Required fields are marked *