ʻಜೇಮ್ಸ್ʼ ಸಿನಿಮಾದಲ್ಲಿ ಅಪ್ಪು ಮೇಜರ್ ಕಮಾಂಡರ್
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹೀರೋ ಆಗಿ ಕಾಣಿಸಿಕೊಂಡಿರೋ ಕಟ್ಟಕಡೆಯ ಸಿನಿಮಾ ಜೇಮ್ಸ್‌ನಲ್ಲಿ, ಅಪ್ಪು ಯಾವ ಪಾತ್ರದಲ್ಲಿ ಕಾಣಿಸಿಕೊಳ್ತಾರೆ ಅನ್ನೋ ಕುತೂಹಲಕ್ಕೆ ಫೈನಲಿ ತೆರೆಬಿದ್ದಂತಾಗಿದೆ.ಬಹದ್ದೂರ್ ಚೇತನ್ ನಿರ್ದೇಶನದ ಜೇಮ್ಸ್ ಸಿನಿಮಾದಲ್ಲಿ ಭಾರತ ಸೇನೆಯ ಮೇಜರ್ ಕಮಾಂಡರ್ ಪಾತ್ರದಲ್ಲಿ ನಟಿಸಿದ್ದಾರೆ. ಇದೇ ಗಣರಾಜ್ಯೋತ್ಸದ ದಿನದಂದು ಜೇಮ್ಸ್ ಸಿನಿಮಾದ ಅಪ್ಪು ಪಾತ್ರವನ್ನ ರಿವೀಲ್ ಮಾಡುವ ಪೋಸ್ಟರ್ ಅನ್ನು ಸಿನಿಮಾ ಟೀಮ್ ರಿಲೀಸ್ ಮಾಡಿತ್ತು.

ಕಿಶೋರ್ ಪತ್ತಿಕೊಂಡ ನಿರ್ಮಾಣದ ಸಿನಿಮಾದಲ್ಲಿ ಅಪ್ಪುಗೆ ನಾಯಕಿಯಾಗಿ ಪ್ರಿಯಾ ಆನಂದ್ ನಟಿಸಿದ್ದು. ಸಿನಿಮಾದಲ್ಲಿ ತೆಲುಗಿನ ಶ್ರೀಕಾಂತ್, ಶರತ್ ಕುಮಾರ್ ಸೇರಿದಂತೆ ದೊಡ್ಡ ಸ್ಟಾರ್ ಕಾಸ್ಟ್ ಇದೆ. ಜೇಮ್ಸ್ ಸಿನಿಮಾಕ್ಕೆ ಟಗರು, ಸಲಗ ಖ್ಯಾತಿಯ ಚರಣ್ ರಾಜ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಚಿತ್ರದ ಅಪ್ಪು ಪಾತ್ರಕ್ಕೆ ಶಿವರಾಜ್‌ಕುಮಾರ್ ಡಬ್ಬಿಂಗ್ ಮಾಡಿದ್ದು, ಇದೇ ಮಾರ್ಚ್ 17ಕ್ಕೆ ಪುನೀತ್ ರಾಜ್‌ಕುಮಾರ್ ಬರ್ತ್‌ಡೇ ದಿನ ಸಿನಿಮಾ ರಿಲೀಸ್ ಮಾಡುವ ತಯಾರಿ ನಡೆದಿದೆ.