News

ಪಿಆರ್ ಕೆ ಪ್ರೊಡಕ್ಷನ್ಸ್ ನಲ್ಲಿ ಪುನೀತ್ ರಾಜಕುಮಾರ್ ಮತ್ತೊಂದು ಚಿತ್ರ

ಪಿಆರ್ ಕೆ ಪ್ರೊಡಕ್ಷನ್ಸ್ ನಲ್ಲಿ ಪುನೀತ್ ರಾಜಕುಮಾರ್ ಮತ್ತೊಂದು ಚಿತ್ರ
  • PublishedOctober 28, 2021

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇತ್ತೀಚೆಗೆ ಮಾಡಿದ ಟ್ವೀಟ್ ವೊಂದು ಬಾರಿ ಕುತೂಹಲ ಮೂಡಿಸಿದೆ. ತಮ್ಮ ಹೋಮ್ ಬ್ಯಾನರ್ ಪಿಆರ್ ಕೆ ಪ್ರೊಡಕ್ಷನ್ ನಲ್ಲಿ ಮುಂದಿನ ಸಿನಿಮಾ ತಯಾರಾಗಲಿದೆ.

“ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ” ಎಂದು ಟ್ವೀಟ್ ನಲ್ಲಿ ಬರೆದಿದ್ದಾರೆ

ಮಡ್ ಸ್ಕಿಪ್ಪರ್ ಸಹಯೋಗದೊಂದಿಗೆ ಪಿಆರ್ ಕೆ ಪ್ರೊಡಕ್ಷನ್ ಸಿನಿಮಾ ನಿರ್ಮಿಸಲಿದೆ, ಪುನೀತ್ ಮುಂದಿನ ಸಿನಿಮಾ ಸಾಹಸ ಕುರಿತದ್ದಾಗಿದೆ, ವನ್ಯಜೀವಿ ಛಾಯಾಗ್ರಾಹಕ ಅಮೋಘ ವರ್ಷ ಪುನೀತ್ ಜೊತೆಯಾಗಲಿದ್ದಾರೆ. ಕೆಲವು ತಿಂಗಳ ಹಿಂದೆ ಪವರ್ ಸ್ಟಾರ್ ಪುನೀತ್ ಕರಾವಳಿ ಪ್ರದೇಶದಲ್ಲಿ ವ್ಯಾಪಕವಾಗಿ ಪ್ರಯಾಣಿಸಿದ್ದರು ಎಂದು ವರದಿಯಾಗಿತ್ತು. ಈ ಪ್ರವಾಸದ ಕೆಲವು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಆಗಿದ್ದವು.

ಚಿತ್ರಕ್ಕೆ ಗಂಧದ ಗುಡಿ ಅಥವಾ ಒಂದು ಮುತ್ತಿನ ಕಥೆ ಎಂದು ಹೆಸರಿಡಬಹುದು, ಇವೆರಡೂ ಡಾ ರಾಜ್‌ಕುಮಾರ್ ಅಭಿನಯದ ಕ್ಲಾಸಿಕ್‌ ಸಿನಿಮಾಗಳಾಗಿವೆ. ನವೆಂಬರ್ 1 ರ ಕನ್ನಡ ರಾಜ್ಯೋತ್ಸವದಂದು ಯೋಜನೆಯ ಅಧಿಕೃತ ಘೋಷಣೆಯಾಗಲಿದೆ.

Written By
Kannadapichhar

Leave a Reply

Your email address will not be published. Required fields are marked *