ಪುನೀತ್ ಅಭಿಮಾನಿಗಳಿಗೆ ನಿರಾಸೆ
ದೇಶದಾದ್ಯಂತ ನಾಳೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ.. ಈಗಾಗಲೇ ಅಭಿಮಾನಿಗಳು ಪುನೀತ್ ಸಿನಿಮಾವನ್ನ ಬರಮಾಡಿಕೊಳ್ಳಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ ..
ಪ್ರತಿ ಥಿಯೇಟರ್ ನಲ್ಲಿ ಈಗಾಗಲೇ ಅಪ್ಪು ಕಟೌಟ್ ಗಳು ರಾರಾಜಿಸುತ್ತಿದ್ದು ಅದಕ್ಕೆ ಹೂವಿನ ಅಭಿಷೇಕ ಹಾಲಿನ ಅಭಿಷೇಕ ಮಾಡಿ ಫ್ಯಾನ್ಸ್ ಸಂಭ್ರಮಿಸುತ್ತಿದ್ದಾರೆ… ಜೇಮ್ಸ್ ಸಿನಿಮಾ ಮೂಲಕ ಹೊಸ ದಾಖಲೆಯನ್ನು ಸೃಷ್ಟಿಸಬೇಕು ಎಂದು ಅಭಿಮಾನಿಗಳು ಸಿದ್ದಾರಾಗಿದ್ದರು…
ಆದರೆ ಜೇಮ್ಸ್ ಅಭಿಮಾನಿಗಳ ಆಸೆ ನಿರಾಸೆಯಾಗಿದೆ ಜೇಮ್ಸ್ ಸಂಭ್ರಮಕ್ಕೆ ನ್ಯಾಯಲಯ ಬ್ರೇಕ್ ಹಾಕಿದೆ ರಾಜ್ಯದಲ್ಲಿ ಸೆಕ್ಷನ್ 144 ಜಾರಿಯಿರುವ ಕಾರಣ ಯಾವುದೇ ಸಂಭ್ರಮಾಚರಣೆ ಹಾಗೂ ರ್ಯಾಲಿಗಳನ್ನು ಮಾಡಲು ಅವಕಾಶವಿಲ್ಲ ಎಂದು ಕೋರ್ಟ್ ತಿಳಿಸಿದೆ..ರ್ಯಾಲಿ ಮಾತ್ರವಲ್ಲದೆ ಹೆಲಿಕಾಪ್ಟರ್ ಮೂಲಕ ಬೆಂಗಳೂರಿನ 3ಥಿಯೇಟರ್ ನಲ್ಲಿ ಅಪ್ಪು ಕಟೌಟ್ ಗೆ ಪುಷ್ಪಾರ್ಚನೆ ಮಾಡಲು ಫ್ಯಾನ್ಸ್ ನಿರ್ಧಾರ ಮಾಡಿದ್ದರು ಆದರೆ ಅದಕ್ಕೂ ಕೂಡ ನ್ಯಾಯಲಯ ಬ್ರೇಕ್ ಹಾಕಿದೆ
..ಯುವರತ್ನ ರಿಲೀಸ್ ವೇಳೆಗೂ ಇಂಥದ್ದೆ ಸಮಸ್ಯೆ ಎದುರಾಗಿತ್ತು…ಕೊರೊನಾ ಕಾರಣದಿಂದ ಯುವರತ್ನ ಪ್ರದರ್ಶನಕ್ಕೆ ತೊಡಕು ಉಂಟಾಗಿತ್ತು..ಇದೀಗ ಜೇಮ್ಸ್ ಸಿನಿಮಾ ಸಂಭ್ರಮದಲ್ಲಿದ್ದ ಅಭಿಮಾನಿಗಳಿಗೆ ನಿರಾಸೆ ಉಂಟಾಗಿದೆ..