new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಪ್ರಿಯಾಂಕ ಮೋಹನ್‌ ಫಸ್ಟ್‌ ಲುಕ್‌ :ಶಿವಣ್ಣ,ಡಾಲಿ ಕಾಂಬೋ

ಪ್ರಿಯಾಂಕ ಮೋಹನ್‌ ಫಸ್ಟ್‌ ಲುಕ್‌ :ಶಿವಣ್ಣ,ಡಾಲಿ ಕಾಂಬೋ
  • PublishedDecember 27, 2025

ಶಿವರಾಜ್‌ ಕುಮಾರ್‌ ಮತ್ತು ಡಾಲಿ ಧನಂಜಯ್‌ ನಟಿಸುತ್ತಿರುವ ʼ666 ಆಪರೇಷನ್‌ ಡ್ರೀಮ್‌ ಥಿಯೇಟರ್ʼ ಸಿನಿಮಾದ ನಾಯಕಿ ಪ್ರಿಯಾಂಕ ಮೋಹನ್‌ ಅವರ ಫಸ್ಟ್‌ ಲುಕ್‌ ಬಿಡುಗಡೆ ಆಗಿದೆ.ಹೇಮಂತ್‌ ಎಮ್‌ ರಾವ್‌ ರಚಿಸಿ ನಿರ್ದೇಶಿಸಿರುವ ಈ ಸಿನಿಮಾವು ಕನ್ನಡ ಹಾಗು ತೆಲುಗು ಎರಡು ಭಾಷೆಗಳಲ್ಲಿ ರಿಲೀಸ್‌ ಆಗಲಿದೆ.

2016‌ ರಲ್ಲಿ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿರುವ ಹೇಮಂತ್‌ ಅವರು ʼಸಪ್ತ ಸಾಗರದಾಚೆ ಎಲ್ಲೋʼ ಎಂದು ಜನರನ್ನು ಕಾಡಿದ್ದರು.ಇದೀಗ ಮತ್ತೆ ತಮ್ಮ ನಿರ್ದೇಶನದ ʼ666 ಆಪರೇಷನ್‌ ಡ್ರೀಮ್‌ ಥಿಯೇಟರ್ʼ ಎಂಬ ಸಿನಿಮಾದ ಮೂಲಕ ಜನರನ್ನು ರಂಜಿಸಲು ರೆಡಿಯಾಗಿದ್ದಾರೆ.

ಟಗರು ಕಾಂಬೋ:
ಟಗರು ಚಿತ್ರದಲ್ಲಿ ಸಖತ್‌ ಸದ್ದು ಮಾಡಿದ್ದು ಟಗರು ಶಿವ ಮತ್ತು ಡಾಲಿ ಕಾಂಬಿನೇಷನ್‌.ಇದೀಗ ಮತ್ತೆ ಇವರಿಬ್ಬರನ್ನು ತೆರೆ ಮೇಲೆ ನೋಡಲು ಸಿನಿ ಅಭಿಮಾನಿಗಳು ಕಾಯುತ್ತಿದ್ದಾರೆ.

ಪ್ರಿಯಾಂಕ ಮೋಹನ್‌:
2019 ರಲ್ಲಿ ಒಂದ್‌ ಕಥೆ ಹೇಳ್ಲಾ ಎನ್ನುವ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ತೆಗೆದುಕೊಂಡ ಪ್ರಿಯಾಂಕ ನಂತರ ತೆಲುಗು,ತಮಿಳು ಚಿತ್ರರಂಗದಲ್ಲಿ ಬ್ಯುಸಿ ಆದ್ರು.ಇದೀಗ ಕನ್ನಡ ಸಿನಿ ರಂಗಕ್ಕೆ ಈ ಸಿನಿಮಾದ ಮೂಲಕ ರಿ ಎಂಟ್ರಿ ಕೊಡಲು ಸಿದ್ದರಾಗಿದ್ದಾರೆ.ಸಿನಿಮಾದ ಫಸ್ಟ್‌ ಲುಕ್ ನಲ್ಲಿ ರೆಟ್ರೋ ಸ್ಟೈಲ್‌ ನಲ್ಲಿ ಕಾಣಿಸಿಕೊಂಡಿರುವ ಪ್ರಿಯಾಂಕ ಅವರ ಪಾತ್ರದ ಬಗ್ಗೆ ಚಿತ್ರತಂಡ ಯಾವುದೇ ಸುಳಿವನ್ನು ಬಿಟ್ಟುಕೊಟ್ಟಿಲ್ಲ.

Written By
Kannada Picchar

Leave a Reply

Your email address will not be published. Required fields are marked *