News

ಎಲ್ಲೆಲ್ಲೂ ಪ್ರೇಮಂ ಪೂಜ್ಯಂ..!

ಎಲ್ಲೆಲ್ಲೂ ಪ್ರೇಮಂ ಪೂಜ್ಯಂ..!
  • PublishedOctober 27, 2021

ಲವ್ಲಿ ಸ್ಟಾರ್ ಪ್ರೇಮ್ ಅವರ ಬಹು ನಿರೀಕ್ಷೆಯ ಚಿತ್ರ ‘ಪ್ರೇಮಂ ಪೂಜ್ಯಂ’ ನವೆಂಬರ್ 12 ರಂದು ರಾಜ್ಯದಲ್ಲಿ ಮಾತ್ರವಲ್ಲದೆ ಹೊರ ರಾಜ್ಯದಲ್ಲೂ, ಜೊತೆಗೆ ವಿದೇಶಗಳಲ್ಲೂ ರಲೀಸ್ ಆಗುತ್ತಿದೆ, ಈಗಾಗಲೆ ಚಿತ್ರ ಸೆನ್ಸಾರ್ ಆಗಿದ್ದು, ನಿರ್ದೇಶಕರಾದ ಡಾ ರಾಘವೇಂದ್ರ ಅವರು ಸಿನಿಮಾದ ಪ್ರಚಾರಕ್ಕಾಗಿ ರಾಜ್ಯದ ಶಾಲಾ ಕಾಲೇಜುಗಳಿಗೆ ಬೇಟಿ ನೀಡಲು ತಯಾರಿ ಮಾಡಿಕೊಂಡಿದ್ದಾರೆ.

‘ಪ್ರೇಮಂ ಪೂಜ್ಯಂ’ ಚಿತ್ರವನ್ನು ವಿದೇಶಗಳಲ್ಲೂ ರಿಲೀಸ್‌ ಮಾಡಲು ಸಿದ್ಧತೆ ನಡೆದಿದೆ. ಈಗ ಕರ್ನಾಟಕದಲ್ಲಿ ಪ್ರಚಾರಕ್ಕಾಗಿ ಮೊದಲು ಉತ್ತರ ಕರ್ನಾಟಕದ ಕಡೆ ಹೋಗುತ್ತಿದ್ದೇವೆ. ಹುಬ್ಬಳ್ಳಿ, ಗದಗ್‌, ಧಾರವಾಡ, ಬೆಳಗಾವಿ ಮತ್ತಿತರ ಊರುಗಳ ಕಾಲೇಜುಗಳಿಗೆ ನಾನು, ಪ್ರೇಮ್‌ ಸೇರಿ ಇಡೀ ಚಿತ್ರತಂಡ ಭೇಟಿ ನೀಡಲಿದ್ದೇವೆ. ನಂತರ ಮೈಸೂರು, ಹಾಸನ, ಮಂಡ್ಯ ಮತ್ತಿತರ ಕಡೆ ಹೋಗುತ್ತೇವೆ’ ಎಂದಿದ್ದಾರೆ ಡಾ.ರಾಘವೇಂದ್ರ.

ಲವ್‌ ಸ್ಟೋರಿಯಲ್ಲಿ ಹಿಂಸೆ, ದ್ವೇಷ ಇರೋದನ್ನೂ ನೋಡಿದ್ದೇವೆ. ಆದರೆ, ನಮ್ಮ ಸಿನಿಮಾದಲ್ಲಿ ಹಾಗಿಲ್ಲ. ನಾಯಕ ತನ್ನ ಪ್ರೀತಿಯನ್ನು ಹೇಗೆ ಕಾಪಾಡಿಕೊಂಡು ಹೋಗ್ತಾನೆ ಅಂತ ಇದೆ. ಹೀಗೂ ಪ್ರೀತಿಸಬಹುದಾ ಎನ್ನಿಸುವಂತೆ ಇದೆ. ಇದು ಒಂದು ಸಂಗತಿಯಾದರೆ ಹೀಗೆ ಪ್ರೀತಿಸಬೇಕು ಎಂದೂ ಅನ್ನಿಸುತ್ತದೆ. ಇಷ್ಟು ಪ್ರೀತಿಯಲ್ಲಿ ಶೇ.1ರಷ್ಟು ಪ್ರೀತಿಸಿದರೂ ಸಾಕು, ಸಾಂಸಾರಿಕ, ವೈವಾಹಿಕ, ಪ್ರೇಮದ ಜೀವನ ಚೆನ್ನಾಗಿರುತ್ತೆ. ನಿಷ್ಕಲ್ಮಶವಾಗಿ, ಏನನ್ನೂ ನಿರೀಕ್ಷಿಸದೆ ಪ್ರೀತಿಸಿದರೆ ಜೀವನ ತುಂಬಾ ಚೆನ್ನಾಗಿರುತ್ತದೆ ಎಂಬುದು ಚಿತ್ರದಲ್ಲಿದೆ. ಈ ಪ್ರೀತಿ ಸ್ನೇಹಿತರ ನಡುವೆ ಇರಬಹುದು, ಅಪ್ಪ, ಅಮ್ಮನ ಜತೆ ಇರಬಹುದು, ಹೆಂಡತಿಯಾಗಿರಬಹುದು. ಹೀಗೆ ಯಾವ ಬಂಧದಲ್ಲಿಎಂಥ ಪ್ರೀತಿ ಇರಬೇಕು ಎಂಬ ಅರಿವನ್ನು ಈ ಚಿತ್ರ ಮೂಡಿಸುತ್ತದೆ’ ಎಂದಿದ್ದಾರೆ ರಾಘವೇಂದ್ರ.

ಸಿನಿಮಾದಲ್ಲಿ ನವನಟಿ ಬೃಂದಾ ಆಚಾರ್ಯ, ಐಂದ್ರಿತಾ ರೇ ಮುಖ್ಯಪಾತ್ರಗಳಲ್ಲಿದ್ದಾರೆ. ತ್ರಿಕೋನ ಪ್ರೇಮಕಥೆ ಸಿನಿಮಾದಲ್ಲಿದೆ, ರಾಘವೇಂದ್ರ ಅವರೆ ಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ12 ಹಾಡುಗಳಿದ್ದು, ಈಗಾಗಲೇ 10 ಸಾಂಗ್ಸ್‌ ರಿಲೀಸ್‌ ಆಗಿವೆ.

****

Written By
Kannadapichhar

Leave a Reply

Your email address will not be published. Required fields are marked *