new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಭಾವ ಪಾತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ಬಗ್ಗೆ ಪುಷ್ಪರಾಜ್ ಬೋಳಾರ್ ಏನಂದ್ರು?

ಭಾವ ಪಾತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ಬಗ್ಗೆ ಪುಷ್ಪರಾಜ್ ಬೋಳಾರ್ ಏನಂದ್ರು?
  • PublishedFebruary 4, 2026

ಸಿನಿಮಾ ಅಂದ್ರೇನೆ ಒಂದು ರೀತಿಯ ಕಲರ್ ಫುಲ್ ಲೋಕ. ಎಷ್ಟೋ ಪಾತ್ರಗಳು ಮನಸಿಗೆ ಹತ್ರ ಆಗ್ತವೆ. ಅಂತಹ ಪಾತ್ರಗಳಿಗೆ ನಮ್ಮ ಕನ್ನಡ ಸಿನಿಮಾ ರಂಗದಲ್ಲಿ ಬರವೇ ಇಲ್ಲ. ಮಿಲನ ಸಿನಿಮಾದ ಆಕಾಶ್, ಮುಂಗಾರು ಮಳೆ ಪ್ರೀತಮ್,ಕೆಂಪೇಗೌಡ ಚಿತ್ರದ ಆರುಮುಗಮ್, ಪುಟ್ನಂಜದ ಪುಟ್ಮಲ್ಲಿ ಹೀಗೆ ಅನೇಕ ಪಾತ್ರಗಳಿವೆ.

ಇದೆ ರೀತಿಯ ಪಾತ್ರಗಳ ಪಟ್ಟಿಯಲ್ಲಿ 2025 ರಲ್ಲಿ ಸೇರಿಕೊಂಡ ಪಾತ್ರವೆಂದರೆ ಸು ಫ್ರಮ್ ಸೋ ನ ಭಾವ ಪಾತ್ರ. ಭಾವ ಬಂದರೋ ಅಂದ್ರೆ ನೆನಪಾಗೋದೇ ಅವ್ರು. ಈ ಪಾತ್ರಕ್ಕೆ ಜೀವ ತುಂಬಿದೋರುದು ಪುಷ್ಪರಾಜ್ ಬೋಳಾರ್. ಇದೀಗ ಈ ಪಾತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ಬಗ್ಗೆ ಅವರು ನಮ್ಮ ‘ಕನ್ನಡ ಪಿಚ್ಚರ್’ ನ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

“ಹೋದಲ್ಲೆಲ್ಲಾ ನನ್ನನ್ನು ಗುರ್ತು ಹಿಡಿದು ಮಾತನಾಡಿಸ್ತಾರೆ.ತುಂಬಾ ಪ್ರಾಜೆಕ್ಟ್ ಗಳು ಕೈಗೆ ಬಂದಿದೆ.ಕಾಂತರದಿಂದ ರಿಷಭ್ ಶೆಟ್ಟಿಯವರು ದಾರಿ ಮಾಡಿಕೊಟ್ಟಿದ್ರು. ಆಮೇಲೆ ಅದಕ್ಕೆ ರಾಜ್ ಬಿ ಶೆಟ್ಟಿ ಮತ್ತೆ ಜೆ. ಪಿ ತುಮಿನ್ನಾಡ್ ಕಾಂಕ್ರೀಟ್ ಹಾಕಿ ಕೊಟ್ರು” ಎಂದು ಹೇಳಿಕೊಂಡಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *