‘ಸಲಾರ್’ನಲ್ಲಿ ಮತ್ತೊಮ್ಮೆ ಶಿವಗಾಮಿ-ಬಾಹುಬಲಿ!

ಬಾಹುಬಲಿ.. ಮಾತೃ ವಾತ್ಸಲ್ಯ, ಧರ್ಮ ನಿಷ್ಠೆ, ಶೌರ್ಯತ್ವಕ್ಕೆ ಹಿಡಿದ ಕೈಗನ್ನಡಿ.. ಎಪಿಕ್ ಆ್ಯಕ್ಷನ್ ಸಿನಿಮಾ ಆಗಿ ಭಾರತೀಯ ಸಿನಿರಂಗದಲ್ಲಿ ಸಾಧನೆಗಳ ಸೀಲು ಹೊಡೆದಿದೆ. ಇಡೀ ಬಾಹುಬಲಿ ಚಿತ್ರವೇ ಕಣ್ಣಿಗೆ ಹಬ್ಬ ಇದ್ದಂತೆ ನಿರ್ದೇಶಕ ರಾಜಮೌಳಿ ಅಚ್ಚುಕಟ್ಟಾಗಿ ಸಿನಿಮಾ ಕಟ್ಟಿಕೊಟ್ಟಿದ್ರು.. ಕೋಟಿ ಕೋಟಿ ವೆಚ್ಚದಲ್ಲಿ ಗ್ರಾಫಿಕ್ಸ್ ಲೋಕವನ್ನೇ ರಾಜಮೌಳಿ ಸೃಷ್ಟಿಸಿದ್ರು..

ಇದೆಲ್ಲದಕ್ಕಿಂತಲೂ ಹೆಚ್ಚಾಗಿ ಕಾಡೋದು ಸಿನಿಮಾದ ಪಾತ್ರಗಳು… ಅಮರೇಂದ್ರ ಬಾಹುಬಲಿ, ಬಲ್ಲಾಳದೇವ, ದೇವಸೇನಾ, ಆವಂತಿಕಾ, ಶಿವಗಾಮಿ, ಕಟ್ಟಪ್ಪಾ, ಬಿಜ್ಜಳದೇವ… ಒಂದ ಎರಡಾ.. ಎಲ್ಲಾ ಪಾತ್ರಗಳೂ ಭಿನ್ನ ವಿಭಿನ್ನ… ಈ ಪಾತ್ರಗಳಲ್ಲಿ ಪ್ರೇಕ್ಷಕರ ಮನಕಲಕ್ಕಿದ್ದು ಅಮ್ಮ- ಮಗನ ವಾತ್ಸಲ್ಯ.. ಅಮರೇಂದ್ರ ಬಾಹುಬಲಿ ಆಗಿ ಪ್ರಭಾಸ್… ಶಿವಗಾಮಿ ಆಗಿ ರಮ್ಯಾಕೃಷ್ಣ ಮೋಡಿ ಮಾಡಿದ್ರು.. ಅಮ್ಮ – ಮಗ ಅಂದ್ರೆ ಹೀಗಿರಬೇಕು ಅನ್ನುವಂತಿತ್ತು ಅವರ ಬಾಂಧವ್ಯ.. ಇದೇ ಸಿನಿಮಾಗೆ ಮೇಜರ್ ಪ್ಲಸ್ ಪಾಯಿಂಟ್ ಆಗಿದ್ವು…

ಅಂದ್ಹಾಗೆ ಈಗ್ಯಾಕೆ ಬಾಹುಬಲಿ ಸಿನಿಮಾ ಬಗ್ಗೆ ಮಾತಾಡ್ತಿದ್ದೀನಿ ಅಂದುಕೊಂಡ್ರಾ.. ಅಲ್ಲೇ ಇರೋದು ಇಂಟರೆಸ್ಟಿಂಗ್ ವಿಚಾರ. ಬಾಹುಬಲಿ ನಂತರ ಪ್ರಭಾಸ್ – ರಮ್ಯಾಕೃಷ್ಣ ಮತ್ತೊಮ್ಮೆ ಒಟ್ಟಿಗೆ ನಟಿಸಲು ಅನ್ನೋ ಸಿನಿಪ್ರೇಮಿಗಳ ಆಸೆ ಆಗಿತ್ತು.. ಆ ದಿನವೀಗ ಹತ್ತಿರದಲ್ಲಿದೆ.. ಯಾಕೆಂದ್ರೆ ಎಗೇನ್ ಪ್ರಭಾಸ್ – ರಮ್ಯಾ ಕೃಷ್ಣ ಒಟ್ಟಿಗೆ ನಟಿಸ್ತಿದ್ದಾರೆ.. ಅಷ್ಟಕ್ಕೂ ಆ ಸಿನಿಮಾ ಯಾವುದು ಅಂದುಕೊಂಡ್ರಾ.. ನ್ಯಾಷನಲ್ ಸೆನ್ಷೇಷನಲ್ ಡೈರೆಕ್ಟರ್ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್..

ಯೆಸ್.. ಸಲಾರ್ ಈಗಾಗಲೇ ಒಂದು ಶೆಡ್ಯೂಲ್ ಶೂಟಿಂಗ್ ಮುಗಿಸಿ.. ಮುಂದಿನ ಶೂಟಿಂಗ್ಗೆ ಪ್ಲಾನ್ ಮಾಡಿಕೊಳ್ತಿದೆ. ಇದ್ರ ಮಧ್ಯೆ ಮತ್ತೊಂದು ಎಕ್ಸೈಟಿಂಗ್ ವಿಚಾರ ಹರಿದಾಡ್ತಿದೆ.. ‘ಸಲಾರ್’ನ ಪ್ರಮುಖ ಪಾತ್ರವೊಂದರಲ್ಲಿ ರಮ್ಯಾಕೃಷ್ಣ ನಟಿಸ್ತಿದ್ದಾರೆ. ಮೂಲಗಳ ಪ್ರಕಾರ ಪ್ರಭಾಸ್ ಅಕ್ಕನ ಪಾತ್ರದಲ್ಲಿ ರಮ್ಯಾಕೃಷ್ಣ ನಟಿಸ್ತಿದ್ದಾರೆ.. ಇವರಿಬ್ಬರ ಕಾಂಬಿನೇಷನ್ ತುಂಬಾ ಎಮೋಷನಲ್ ಆಗಿ ಮೂಡಿ ಬರಲಿದೆ. ಪ್ರಶಾಂತ್ ನೀಲ್ಗೂ ಬಾಹುಬಲಿ ತುಂಬಾ ಇಷ್ಟದ ಸಿನಿಮಾ.. ಶಿವಗಾಮಿ ಮತ್ತು ಅಮರೇಂದ್ರ ಬಾಹುಬಲಿಯ ಕಾಂಬಿನೇಷನ್ ಇಷ್ಟ ಆಗಿತ್ತು.. ಇದೇ ಕಾರಣಕ್ಕೆ ಪ್ರಭಾಸ್ ಅಕ್ಕನ ಪಾತ್ರವನ್ನು ರಮ್ಯಾಕೃಷ್ಣಗೆ ಪ್ರಶಾಂತ್ ಪ್ಲಾನ್ ಮಾಡಿದ್ದಾರೆ. ಪ್ರಭಾಸ್ – ರಮ್ಯಾಕೃಷ್ಣ ಒಟ್ಟಿಗೆ ನಟಿಸಿರೋ ನಾಲ್ಕು ಸಿನಿಮಾಗಳೂ ದೊಡ್ಡ ಸಕ್ಸಸ್ ಕಂಡಿವೆ.. ಅದೇ ರೀತಿ ಸಲಾರ್ ಸಿನಿಮಾವೂ ದೊಡ್ಡ ಹಿಟ್ ಆಗ್ಲಿ ಅಂತಾ.. ಈ ಸುದ್ದಿ ಕೇಳಿದ ಅಭಿಮಾನಿಗಳು ಹಾರೈಸ್ತಿದ್ದಾರೆ..