News

ನಟಿ ಹರಿಪ್ರಿಯಾ ಸಹೋದರ ಕೀರ್ತಿ ಚಂದ್ರರಿಂದ ಯುವತಿಗೆ ವಂಚನೆ ಆರೋಪ

ನಟಿ ಹರಿಪ್ರಿಯಾ ಸಹೋದರ ಕೀರ್ತಿ ಚಂದ್ರರಿಂದ ಯುವತಿಗೆ ವಂಚನೆ ಆರೋಪ
  • PublishedMarch 16, 2022

ಸಿನಿಮಾ ಸ್ಟಾರ್ ಗಳ ಹೆಸರು ಹೇಳಿಕೊಂಡು ವಂಚನೆ ಮಾಡುವುದು ಕನ್ನಡ ಚಿತ್ರರಂಗದಲ್ಲಿ ಹೊಸದೇನಲ್ಲ.. ಆದರೆ ಈಗ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ನಟಿಯ ಸಹೋದರ ತನ್ನ ಸಹೋದರಿಯ ಹೆಸರು ಬಳಸಿಕೊಂಡು ಹುಡುಗಿಯೊಬ್ಬಳಿಗೆ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ ….

ಸ್ಯಾಂಡಲ್ ವುಡ್ ನ ನಟಿ ಹರಿಪ್ರಿಯಾ ಸಹೋದರ ಕೀರ್ತಿಚಂದ್ರ ವಿರುದ್ಧ ವಂಚನೆ ಆರೋಪ ಕೇಳಿ ಬರುತ್ತಿದೆ…ಖ್ಯಾತ ನಟಿ ನನ್ನ ತಂಗಿ ಫೇಮಸ್ ಸಿನಿತಾರೆ ಎಂದು ಹೇಳಿಕೊಂಡು ಮಹಿಳೆಗೆ ವಂಚನೆ ಮಾಡಿದ್ದಾರೆ ಎಂದು ಮಹಿಳೆಯೊಬ್ಬರು ಬಸವನಗುಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ…

ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ದೂರು ದಾಖಲಾಗಿದ್ದು …ದೂರಿನಲ್ಲಿ ಬಲವಂತವಾಗಿ ಅತ್ಯಾಚಾರ ಮಾಡಿರುವ ಆರೋಪ ಮಾಡಿದ್ದಾರೆ…ಮ್ಯಾಟ್ರಿಮೊನಿ ವೆಬ್ ಸೈಟ್ ನ Shaadi.com ನಲ್ಲಿ ಯುವತಿ ಸ್ವವಿವರ ಹಾಕಿದ್ರು.ಆ ಮೂಲಕ 2021 ರ ಮೇನಲ್ಲಿ ಕೀರ್ತಿ ಚಂದ್ರ@ವಿರಾಜ್ ಪರಿಚಯವಾಗಿತ್ತು.ನಾನು ಪ್ರತಿಷ್ಠಿತ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದೇನೆ .ನನ್ನ ತಂಗಿ ಫೇಮಸ್ ಸಿನಿ ತಾರೆ ಎಂದು ಪರಿಚಯ ಮಾಡಿಕೊಂಡಿದ್ರಂತೆ…

ಬಳಿಕ ಪರಿಚಯ ಸ್ನೇಹಕ್ಕೆ ಬೆಳೆದು ಚಾಟಿಂಗ್ ಮಾಡಲು ಆರಂಭಿಸಿದದ್ದಾರೆ…ನಂತರ ಮದುವೆಯಾಗುವುದಾಗಿ ನಂಬಿಸಿದ್ದರಂತೆ ಕೀರ್ತಿ ಚಂದ್ರ … ಜನವರಿ 18 ರಂದು ಜಯನಗರದ ಖಾಸಗಿ ಹೊಟೇಲ್ ಗೆ ಬರುವಂತೆ ಹೇಳಿ
ಈ ವೇಳೆ ನನ್ನ ಜೊತೆ ದೈಹಿಕ ಸಂಪರ್ಕ ಬೆಳೆಸುವಂತೆ ಕೇಳಿಕೊಂಡರಂತೆ…ಆದರೆ ಸಂತ್ರಸ್ತೆ ಇದಕ್ಕೆ ನಿರಾಕಿಸಿದಾಗ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದರು ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ‌..

ಸದ್ಯ ಕೀರ್ತಿ ಚಂದ್ರ ಸಂಪರ್ಕಕ್ಕೂ ಸಿಗದೇ ಮದುವೆಯಾಗದೇ ಮೋಸ ಮಾಡಿದ್ದಾರೆ ಎಂದು ಯುವತಿ ಆರೋಪಿಸುತ್ತಿದ್ದಾರೆ‌‌‌‌…ಸದ್ಯ ಎಫ್ ಐಆರ್ ದಾಖಲಿಸಿರುವ ಬಸವನಗುಡಿ ಮಹಿಳಾ ಪೊಲೀಸರು
ಆರೋಪಿ ಬಂಧಿಸದೇ ,ಜಾಮೀನು ಪಡೆಯಲು ಅನುಕೂಲ ಮಾಡಿದ್ದಾರೆ ಎಂಬ ಆರೋಪನ್ನು ಮಾಡಿದ್ದಾರೆ ಸಂತ್ರಸ್ತೆ ಯುವತಿ…

Written By
Kannadapichhar

Leave a Reply

Your email address will not be published. Required fields are marked *