ಯುದ್ಧದ ಮಾತಾಡಿದ್ರು ಆಗ್ಲಿಲ್ಲ ವರ್ಕ್,ಒಂದೇ ದಿನಕ್ಕೆ ಮಾರ್ಕ್ ಪೈರಸಿ ಲೀಕ್! ತಡ್ಯೋಕೆ ಆಗಲ್ವಾ..?
By Pallavi N Raj
ನಿನ್ನೆ ತಾನೇ ಭರ್ಜರಿಯಾಗಿ ಮಾರ್ಕ್ ಸಿನಿಮಾ ರಿಲೀಸ್ ಆಗಿದೆ. ಕಿಚ್ಚನ ಅಭಿಮಾನಿಗಳು ಹಬ್ಬ ಮಾಡ್ತಿದ್ದಾರೆ. ಆದ್ರೆ, ಇನ್ನೊಂದು ಕಡೆ ಚಿತ್ರತಂಡಕ್ಕೆ ಬಿಗ್ ಶಾಕ್ ಎದುರಾಗಿದೆ. ಸಿನಿಮಾ ರಿಲೀಸ್ ಆದ ಒಂದೇ ದಿನಕ್ಕೆ ಇಡೀ ಸಿನಿಮಾ ಪೈರಸಿ ಆಗಿ ಮೊಬೈಲ್ ಫೋನ್ಗಳಲ್ಲಿ ಹರಿದಾಡ್ತಿದೆ..
ಹೌದು.. ಹುಬ್ಬಳ್ಳಿಯಲ್ಲಿ ನಡೆದ ಮಾರ್ಕ್ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್ ಇವೆಂಟ್ ನಲ್ಲಿ ಕಿಚ್ಚ ಅಬ್ಬರದ ಮಾತನ್ನ ಆಡಿದ್ರು, ಸುದೀಪ್ ಆಡಿದ ಮಾತುಗಳು ದೊಡ್ಡ ಕಿಚ್ಚು ಹೊತ್ತಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ನಾನು ಯುದ್ಧಕ್ಕೆ ಸಿದ್ದ, ನನ್ನ ಮಾತಿಗೆ ಬದ್ಧ ಅಂತ ಸುದೀಪ್ ಆರ್ಭಟಿಸಿದ್ರು. ಇದನ್ನ ಕೇಳಿ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯೇ ನಡೀತು. ದರ್ಶನ್ ಫ್ಯಾನ್ಸ್ ರಿಯಾಕ್ಷನ್ ಕೂಡ ಜೋರಾಗೇ ಇತ್ತು. ಆದ್ರೆ, ಸುದೀಪ್ ನಾನು ಹೇಳಿದ್ದು ಪೈರಸಿ ಬಗ್ಗೆ ಹೊರತು ವ್ಯಕ್ತಿಯ ಬಗ್ಗೆ ಅಲ್ಲ ಅಂತ ಕ್ಲಾರಿಟಿ ಕೊಟ್ರು.
ಇತ್ತ.. ಸುದೀಪ್ ಅವರ ಯುದ್ಧದ ಹೇಳಿಕೆ ವೈರಲ್ ಆಗ್ತಿದ್ದಂಗೆ, ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಸುಮ್ಮನೆ ಕೂರಲಿಲ್ಲ. ದರ್ಶನ್ ಹೊರಗಡೆ ಇದ್ದಾಗ ಕೆಲವರು ಬೆಂಗಳೂರಲ್ಲಿ ಇರ್ತಾರೋ ಇಲ್ವೋ ಅನ್ನೋ ಹಾಗೆ ಇರ್ತಾರೆ. ಆದ್ರೆ ಅವರು ಒಳಗಿದ್ದಾಗ ಏನೇನೋ ಮಾತಾಡ್ತಾರೆ ಅಂತ ಪರೋಕ್ಷವಾಗಿ ಠಕ್ಕರ್ ಕೊಟ್ಟಿದ್ರು
ಸಿನಿಮಾ ರಿಲೀಸ್ ಆದ ಒಂದೇ ದಿನಕ್ಕೆ ಇಡೀ ಸಿನಿಮಾ ಪೈರಸಿ ಆಗಿ ಮೊಬೈಲ್ ಫೋನ್ಗಳಲ್ಲಿ ಹರಿದಾಡ್ತಿದೆ. ಸುದೀಪ್ ಅವರು ಯಾವ ಯುದ್ಧದ ಬಗ್ಗೆ ಮಾತಾಡಿದ್ರೋ, ಆ ಯುದ್ಧದಲ್ಲಿ ಮೊದಲ ದಿನವೇ ಹಿನ್ನಡೆಯಾದ್ರಾ..? ಇದ್ರ ಬಗ್ಗೆ ಯಾಕೆ ಕಿಚ್ಚ ಮಾತಾಡ್ತಿಲ್ಲ ಅಂತ ಫ್ಯಾನ್ಸ್ ವಲಯದಲ್ಲಿ ಕುತೂಹಲ ಹೆಚ್ಚಾಗಿದೆ..
ಬರೀ ಮಾರ್ಕ್ ಸಿನಿಮಾ ಮಾತ್ರವಲ್ಲ, 45 ಸಿನಿಮಾ ಕೂಡ ಪೈರಸಿ ಎಂಬ ಭೂತಕ್ಕೆ ಬಲಿಯಾಗಿದೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ, ವರ್ಷಗಟ್ಟಲೆ ಕಷ್ಟಪಟ್ಟು ಸಿನಿಮಾ ಮಾಡಿದ್ರೆ, ಅದು ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಟೆಲಿಗ್ರಾಂ ಲಿಂಕ್‌ಗಳಲ್ಲಿ ಸಿಕ್ಕಿಬಿಟ್ಟರೆ ಹೇಗೆ? ಇದು ಕನ್ನಡ ಚಿತ್ರರಂಗವನ್ನೇ ಕಾಡ್ತಿರೋ ದೊಡ್ಡ ಪಿಡುಗಾಗಿದೆ..
ಒಟ್ನಲ್ಲಿ.. ಪೈರಸಿ ವಿರುದ್ಧವಾಗಿ ಅಬ್ಬರಿಸಿದ್ದ ಕಿಚ್ಚ ಇಂದು ಯಾಕೆ ಮಾತಾಡ್ತಿಲ್ಲ ಅನ್ನೋ ಚರ್ಚೆ ಜೋರಾಗಿದೆ..