new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ರಶ್ಮಿಕಾ ಮದುವೆಲಿ ಮೊಬೈಲ್ ನಿಷೇದ!

ರಶ್ಮಿಕಾ ಮದುವೆಲಿ ಮೊಬೈಲ್ ನಿಷೇದ!
  • PublishedFebruary 18, 2026

ಬಿ ಟೌನ್ ನಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರ ಮದುವೆದ್ದೇ ಮಾತು. ನ್ಯಾಷನಲ್ ಕ್ರಶ್ ಮದುವೆ ನಿಜವಾಗ್ಲೂ ಆಗ್ತಿದ್ದಾರ? ಎಲ್ಲಿ ಮದುವೆ? ವೈರಲ್ ಆಗಿರೋ ಆಮಂತ್ರಣ ಪತ್ರದಲ್ಲಿ ಏನಿದೆ? ಎಲ್ಲದರ ಕಂಪ್ಲೀಟ್ ಮಾಹಿತಿ ಇಲ್ಲಿದೆ.ರಶ್ಮಿಕಾ 2026ರ ಫೆಬ್ರವರಿ ಅಂದು ತಮ್ಮ ಬಹು ಕಾಲದ ಗೆಳೆಯ ನಟ ವಿಜಯ್ ದೇವರಕೊಂಡ ಅವರನ್ನು ವಿವಾಹವಾಗಲಿದ್ದಾರೆ ಎನ್ನುವ ಗಾಸಿಪ್ ಕಳೆದ ವರ್ಷದ ಅಂತ್ಯದಲ್ಲಿ ಶುರುವಾಗಿತ್ತು.ಇದಕ್ಕೆ ಪುಷ್ಟಿ ಕೊಡುವಂತೆ ಇತ್ತು. ಸಿನಿಮಾ ಕಾರ್ಯಕ್ರಮಗಳಲ್ಲಾಗಲಿ, ವಿದೇಶಿ ಪ್ರವಾಸವಾಗಲಿ ಎಲ್ಲದರಲ್ಲೂ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದರು. ಹಾಗಾಗಿ ನೆಟ್ಟಿಗರು ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ. ವಿವಾಹವು ಆಗುತ್ತಾರೆ ಎಂದು ಮಾತನಾಡುತ್ತಿದ್ದರು.

ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಲವ್

ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಲವ್ ಮಾಡುತ್ತಿದ್ದಾರೆ ಎಂದು ಇಬ್ಬರು ‘ಗೀತಾ ಗೋವಿಂದಂ’ ಸಿನಿಮಾ ಮಾಡೋವಾಗಿನಿಂದಲೂ ಕೇಳಿ ಬರುತ್ತಿರುವ ರೂಮರ್. ಆದ್ರೆ ಈ ವಿಚಾರವಾಗಿ ಯಾವತ್ತಿಗೂ ಇಬ್ಬರು ಸ್ಪಷ್ಟನೇ ನೀಡೆ ಇಲ್ಲ.

ಆದ್ರೆ ರಶ್ಮಿಕಾ ಮತ್ತು ವಿಜಯ್ ಅವರ ಆಪ್ತರು ಇಬ್ಬರನ್ನು ಅನೇಕ ಸಂದರ್ಶನದಲ್ಲಿ ಒಬ್ಬೊಬ್ಬರ ಹೆಸರಿನಿಂದ ಟೀಸ್ ಮಾಡುತ್ತಿದ್ದರು. ಉದಾಹರಣೆಗೆ ಅನನ್ಯ ಪಾಂಡೆ ಅವರು ಒಂದು ಸಂದರ್ಶನದಲ್ಲಿ ವಿಜಯ್ ಅವರನ್ನು ಉದ್ದೇಶಿಸಿ “He is always in rush to meet mikha singh “ ಎಂದು ರೇಗಿಸಿದ್ದರು. ಆಗಿನಿಂದ ಈ ರೂಮರ್ ಗೆ ಹೆಚ್ಚು ಬಲ ಬಂತು.

ಇದೀಗ ಬಂದಿರುವ ಮಾಹಿತಿಯ ಪ್ರಕಾರ ಇಬ್ಬರ ಮದುವೆಯ ಯಾವುದೇ ಫೋಟೋ ಅಥವಾ ವಿಡಿಯೋ ಸೋರಿಕೆಯಾಗದಂತೆ ತಡೆಯಲು ಗೆಸ್ಟ್ ಗಳಿಗೆ ಮೊಬೈಲ್ ಬಳಸದಂತೆ ಸೂಚಿಸಲಾಗಿದ್ದು,ಮದುವೆಯೂ ಮನೆಯವರ ಹಾಗೂ ಆಪ್ತರ ಸಮ್ಮುಖದಲ್ಲಿ ನಡೆಯಲಿದ್ದು, ಸದ್ಯಕ್ಕೆ ವಿವಾಹ ಉದಯ್ ಪುರದಲ್ಲಿ ಆಗಲಿದ್ದು, ಜೊತೆಗೆ ಆರತಕ್ಷತೆ ಮಾರ್ಚ್ 4ರಂದು ಹೈದರಾಬಾದ್ ನಲ್ಲಿ ನಡೆಯಲಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ.

Written By
Kannada Picchar

Leave a Reply

Your email address will not be published. Required fields are marked *