new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಪ್ಯಾನ್ ಇಂಡಿಯಾ ಸಿನಿಮಾ ಕರಿಕಾಡ ಟ್ರೈಲರ್ ಔಟ್

ಪ್ಯಾನ್ ಇಂಡಿಯಾ ಸಿನಿಮಾ ಕರಿಕಾಡ ಟ್ರೈಲರ್ ಔಟ್
  • PublishedFebruary 2, 2026

ರಿದ್ಧಿ ಎಂಟರ್‌ ಟೈನರ್ಸ್‌ ನಿರ್ಮಾಣದಲ್ಲಿ ಮೂಡಿಬರುತ್ತಿರುವ, ಕಾಡ ನಟರಾಜ್ ಅಭಿನಯದ ಹಾಗೂ ಕೆ. ವೆಂಕಟೇಶ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಕರಿಕಾಡ ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮ ಬೆಂಗಳೂರಿನ ಜಿಟಿ ಮಾಲ್ ನಲ್ಲಿ ಅದ್ಧೂರಿಯಾಗಿ ನೆರವೇರಿತು..

ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ನಾಯಕ ನಟ ಕಾಡ ನಟರಾಜ್, ನಾಯಕಿ ನಿರೀಕ್ಷಾ ಶೆಟ್ಟಿ, ಪ್ರಮುಖ ಪಾತ್ರದಲ್ಲಿ ಯಶ್ ಶೆಟ್ಟಿ, ವಿಜಯ್ ಚೆಂಡೂರು ಸೇರಿ ಇಡೀ ಚಿತ್ರತಂಡವೇ ಭಾಗವಹಿಸಿತ್ತು.

ಟ್ರೈಲರ್ ಅದ್ಭುತವಾಗಿ ಮೂಡಿ ಬಂದಿದ್ದು, ಹಳ್ಳಿಯ ಹಿನ್ನೆಲೆಯ ಕಥಾವಸ್ತುವನ್ನು ಬಹಳ ವಿಭಿನ್ನ ಶೈಲಿಯಲ್ಲಿ ಹೇಳಲಿದೆ ಸಿನಿಮಾ, ಚಿತ್ರ ಸಸ್ಪೆನ್ಸ್ ನಿಂದ ಕೂಡಿದ್ದು, ಕಾಡ ನಟರಾಜ್ ನಿರೀಕ್ಷ ಶೆಟ್ಟಿ ಬಹಳ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

ಕರಿಕಾಡ ಈಗಾಗಲೇ ಸಿನಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಚಿತ್ರದ ಟ್ರೇಲರ್ ಮೂಲಕ ಕಥೆಯೂ ಯಾವ ರೀತಿ ಸಾಗಿದೆ. ಪಾತ್ರಗಳ ಹೇಗಿದೆ, ಹಾಗೇ ಟೆಕ್ನಿಕಲಿ ಸಿನಿಮಾ ಹೇಗಿದೆ ಎಂಬುವುದನ್ನ ಸಿನಿಮಾ ತಂಡ ತೋರಿಸಿದೆ ಸಿನಿಮಾ ಪ್ಯಾನ್ ಇಂಡಿಯಮಟ್ಟದಲ್ಲಿ ಬಿಡುಗಡೆಗೆ ರೆಡಿಯಿದ್ದು, ತಮಿಳಿನಲ್ಲಿ ಕಾಡ ನಟರಾಜ್ ಹವಾ ಹೆಚ್ಚಿದ್ಯಂತೆ.. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ನಿರ್ದೇಶಕ ವೆಂಕಟೇಶ್ ಸಿನಿಮಾ ಹೊಸತನದಿಂದ ಕೂಡಿದೆಕರಿಕಾಡ ಅಂದರೆ ಅದೊಂದು ಹಬ್ಬದೂಟ ಎಲ್ಲ ಎಲಿಮೆಂಟ್ಸ್ ನಮ್ಮ ಸಿನಿಮಾದಲ್ಲಿದೆ, ಈಗಾಗ್ಲೇ ಸಿನಿಮಾ 3 ಭಾಷೆಯಲ್ಲಿ ರೆಡಿಯಿದೆ..ಥಿಯೇಟರ್ ಕೂಡ ಸಿಕ್ಕಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದ್ರು.. ಇನ್ನು.. ಸಿನಿಮಾದ ಕುರಿತು ಮಾತನಾಡಿದ ಕಾಡ ನಟರಾಜ್ ನಮ್ಮ ಸಿನಿಮಾ ಜರ್ನಿ ಬಹಳ ಚನ್ನಾಗಿತ್ತು, ತುಂಬಾ ಕಷ್ಟಪಟ್ಟು ಇಷ್ಟ ಪಟ್ಟು ಸಿನಿಮಾ ಮಾಡಿದ್ದೀವಿತುಂಬಾ ಒಳ್ಳೋಳ್ಳೆ ಹಾಡುಗಳು ಸಹ ಇದೆ. ಸಿಂಗಲ್ ಸ್ಕ್ರೀನ್ ಮಲ್ಟಿಫ್ಲೇಕ್ಸ್ ನೋಡ್ತಾಯಿದ್ದೀವಿ ಪ್ರಮೋಷನ್ ಮಾಡ್ತಿದ್ದೀವಿ..

ನಮಗೆ ಕಂಟೆಂಟ್ ಮೇಲೆ ನಂಬಿಕೆ ಇದೆ ಜನರ ಮೇಲೂ ನಂಬಿಕೆ ಇದೆ ನೀವೆಲ್ಲ ಥಿಯೇಟರ್ ಗೆ ಬಂದು ಸಿನಿಮಾ ನೋಡ್ಬೇಕು ಎಂದ್ರು.. ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲು ಕರಿಕಾಡ ಸಜ್ಜಾಗಿದೆ. ಚಿತ್ರದಲ್ಲಿ ಬಹುತಾರಾಂಗಣವಿದ್ದು ತಾಂತ್ರಿಕವಾಗಿಯೂ ಸಿನಿಮಾ ಉತ್ತಮವಾಗಿದ್ದು ಟ್ರೈಲರ್ ಮೂಲಕ ಸದ್ದು ಮಾಡ್ತಿದೆ..

Written By
Kannada Picchar

Leave a Reply

Your email address will not be published. Required fields are marked *