ಕರೋನಾ ನಡುವೆ ಶುರುವಾಯ್ತು ಭಟ್ಟರ ಪದವಿ ಪೂರ್ವ ಕಾಲೇಜು

ಸದ್ಯ ಸರಕಾರ ಕಾಲೇಜು ಹಾಗೂ ಶಾಲೆಗಳನ್ನ ಯಾವಾಗ ತೆರೆಯಬೇಕು ಅಂತ ಯೋಚ್ನೆ ಮಾಡ್ತಿದ್ರೆ, ಯೋಗರಾಜ ಭಟ್ಟರ ಪದವಿ ಪೂರ್ವ ಕಾಲೇಜು ಸದ್ದಿಲ್ಲದೆ ಕ್ಲಾದುಗಳನ್ನು ಶುರುಮಾಡಿಕೊಂಡಿವೆ.ಆದ್ರೆ ಇಲ್ಲಿ ನಡೆಯೋ ಪಾಠವೇ ಬೇರೆ. ಕನಫ್ಯೂಸ್ ಆಗಬೇಡಿ. ಹರಿಪ್ರಸಾದ್ ಜಯಣ್ಣ ನಿರ್ದೇಶನದಲ್ಲಿ ಯೋಗರಾಜ್ ಭಟ್ ಮತ್ತು ರವಿ ಶಾಮನೂರ್ ಅವರು ಜಂಟಿಯಾಗಿ ನಿರ್ಮಿಸುತ್ತಿರುವ “ಪದವಿಪೂರ್ವ” ಚಿತ್ರದ ಮುಹೂರ್ತವು ಕಳೆದ ಸೋಮವಾರ ರಾಜಾಜಿನಗರದ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಸರಳವಾಗಿ ನಡೆಯಿತು. ಖ್ಯಾತ ನಿರ್ದೇಶಕ ಹಾಗು ಸಾಹಿತಿ ಯೋಗರಾಜ್ ಭಟ್ಟರು ಕ್ಯಾಮೆರಾ ಚಾಲನೆ ಮಾಡಿದರೆ, ಚಿತ್ರದ ನಿರ್ಮಾಪಕರಾದ ರವಿ ಶಾಮನೂರು ಪುತ್ರಿ ಸೃಷ್ಠಿ ಶಾಮನೂರ್ ಕ್ಲಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದಾರೆ.
ಈ ಸಿನಿಮಾ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಡ್ತಿರೋನಾಯಕ ಪೃಥ್ವಿ ಶಾಮನೂರ್, ನಾಯಕಿಯರಾದ ಅಂಜಲಿ ಅನೀಶ್ ಹಾಗು ಯಶಾ ಶಿವಕುಮಾರ್ ಜೊತೆಗೆ ಚಿತ್ರದ ಪ್ರಮುಖ ಪಾತ್ರದಾರಿಗಳು ಹಾಗು ತಂತ್ರಜ್ಞರು ಮೂಹೂರ್ತದಲ್ಲಿ ಭಾಗಿಯಾಗಿದ್ರು. ನಿರ್ದೇಶಕ ಹರಿಪ್ರಸಾದ್ ಜಯಣ್ಣ ಅವರ ಚೊಚ್ಚಲ ನಿರ್ದೇಶನಕ್ಕೆ ಮುಹೂರ್ತಕ್ಕೆ ಬಂದಿದ್ದವರು ಶುಭ ಹಾರೈಸಿದರು. ಚಿತ್ರದ ಮೊದಲ ಹಂತದ ಚಿತ್ರೀಕರಣ ಈಗಾಗಲೇ ಬೆಂಗಳೂರಿನಲ್ಲಿ ಶುರುವಾಗಿದ್ದು, ಚಿತ್ರದ ಎರಡನೇ ಹಂತದ ಚಿತ್ರೀಕರಣವನ್ನು ಮಲೆನಾಡಿನ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಚಿತ್ರೀಕರಿಸಲು ಚಿತ್ರತಂಡ ಭರ್ಜರಿ ಪ್ಲಾನ್ ಮಾಡಿಕೊಂಡಿದೆ. ಚಿತ್ರಕ್ಕೆ ‘ಅರ್ಜುನ್ ಜನ್ಯ’ ಸಂಗೀತ, ‘ಮಧು ತುಂಬಕೆರೆ’ ಸಂಕಲನ ಹಾಗು ‘ಸಂತೋಷ್ ರೈ ಪತಾಜೆ’ ಅವರ ಛಾಯಾಗ್ರಹಣ ಇರಲಿದೆ.
[/et_pb_text][/et_pb_column] [/et_pb_row] [/et_pb_section]