ಸುದೀಪ್ ಅವರ ಕ್ಲಾರಿಟಿ ನನಗಿಷ್ಟ: ನಿಖಿಲ್ Exclusive
ಕೊರೊನಾ ನಂತರ ಸ್ಯಾಂಡಲ್ ವುಡ್ ನಲ್ಲಿ ಬೇರೆಯದ್ದೆ ಕಲ್ಚರ್ ಶುರುವಾಗಿದೆ, ಹಿಂದೆ ಇದ್ದಂತೆ ಸ್ಟಾರ್ ವಾರ್ ಆಗ್ಲಿ, ಒಬ್ಬರ ಏಳಿಗೆಯನ್ನು ಸಹಿಸದೆ ಕಾಲೆಳೆಯೋದಾಗ್ಲಿ ಸದ್ಯ ಕಾಣ್ತಿಲ್ಲಾ. ಪರಸ್ಪರ ನಟ,ನಟಿಯರ ನಡುವೆ ಕಲಾವಿದರ ನಡುವೆ ಒಂದು ಬಾಂದವ್ಯ ಬೆಳೆಯುತ್ತಿದೆ. ಪರಸ್ಪರ ಒಬ್ಬರ ಚಿತ್ರವನ್ನು ಮತ್ತೊಬ್ಬರು ಬೆಂಬಲಿಸುವ ಹಂತಕ್ಕೆ ಬಂದು ನಿಲ್ಲುವಷ್ಟು ಬದಲಾವಣೆ ಕಾಣುತ್ತಿದ್ದೇವೆ.
ಮಲೆಯಾಳಂ ಚಿತ್ರರಂಗದಲ್ಲಿ ಒಬ್ಬ ಸ್ಟಾರ್ ನಟನ ಚಿತ್ರ ಬಡುಗಡೆ ಆಗ್ತಿದೆ ಅಂದ್ರೆ ಅದಕ್ಕೆ ಮತ್ತೊಬ್ಬ ಸ್ಟಾರ್ ನಟ ಸಿನಿಮಾ ಜೊತೆ ನಿಲ್ತಾನೆ. ಬೆಂಬಲಿಸ್ತಾನೆ, ಉದಾ: ಮೋಹನ್ ಲಾಲ್ ಸಿನಿಮಾ ರಿಲೀಸ್ ಆದ್ರೆ ಮೊಮ್ಮಟಿ ಟ್ವೀಟ್ ಮಾಡುವ ಮೂಲಕ ಮತ್ತೊಬ್ಬ ನಟನ ಸಿನಿಮಾಕ್ಕೆ ಸಾಥ್ ನೀಡ್ತಾರೆ. ಮಾಲಿವುಡ್ ನಲ್ಲಿ ಈ ಕಲ್ಚರ್ ಬಹಳ ಹಿಂದಿನಿಂದ ಇದೆ. ಇಂತಹದ್ದೇ ಒಂದು ಆಶಾಕಿರಣ ಸದ್ಯ ಸ್ಯಾಂಡಲ್ ವುಡ್ ಅಂಗಳದಲ್ಲು ಕಾಣುತ್ತಿರುವುದು ಕನ್ನಡ ಇಂಡಸ್ಟ್ರಿಗೆ ನಿಜಕ್ಕೂ ಒಂದು ಬಿಗ್ ಬೂಸ್ಟ್ ಎನ್ನಬಹುದು. ಕನ್ನಡ ಚಿತ್ರರಂಗದಲ್ಲಿ ಅಂತಹದೊಂದು ಟ್ರೆಂಡ್ ಶುರುವಾಗಿದೆ. ಇಂಡಸ್ಟ್ರಿ ಎಂಬುದು ಒಂದು ಕುಟುಂಬ ಇದ್ದಂಗೆ ಅಂತ ಬಾಯಿ ಮಾತಲ್ಲಿ ಹೇಳೋದಲ್ಲಾ ಅದರಂತೆ ನಡೆದುಕೊಳ್ಳಬೇಕು ಎಂದಿದ್ದಾರೆ ಯುವರಾಜ ನಿಖಿಲ್.
ಹೊಸಬರ ಸಿನಿಮಾಗಳು ರಿಲೀಸ್ ಆಗ್ತಿವೆ ಅಂದಾಗ ಅವರಿಗೆ ಕರೆ ಮಾಡಿ ವಿಶ್ ಮಾಡ್ತೀನಿ, ರೇಮೊ ಚಿತ್ರ ಇಶಾನ್, ಕಿಸ್ ಚಿತ್ರದ ವಿರಾಟ್ ಎಲ್ಲರೂ ಕನ್ನಡ ಚಿತ್ರರಂಗಕ್ಕೆ ಭರವಸೆ ಇರುವ ನಟರು, ನನ್ನ ಸೀತಾರಾಮ ಕಲ್ಯಾಣ ಚಿತ್ರ ಬಿಡುಗಡೆ ಆದಾಗ ಸುದೀಪ್ ಅಣ್ಣ ನನಗೆ ಕಾಲ್ ಮಾಡಿ ವಿಶ್ ಮಾಡಿದ್ರು, ನನ್ನ ರೈಡರ್ ಚಿತ್ರದ ಬಗ್ಗೆಯೂ ಹೇಳಿ ಅಣ್ಣಾ ಎಂದು ಸುದೀಪ್ ಅವರನ್ನು ಕೇಳಿದ್ದೇನೆ. ಯಾಕಂದ್ರೆ ಅವರಲ್ಲಿ ಕ್ಲಾರಿಟಿ ಇದೆ ಎಂದಿದ್ದಾರೆ.
ಡಾಲಿ ಧನಂಜಯ್ ಅಭಿನಯದ ಬಡವ ರಾಸ್ಕಲ್ ಹಾಗೂ ನಿಖಿಲ್ ಅಭಿನಯದ ರೈಡರ್ ಚಿತ್ರ ನಾಳೆ (ಡಿ.24) ರಿಲೀಸ್ ಆಗ್ತಿವೆ, ಡಾಲಿ ಧನಂಜಯ್ ಗೂ ಕಾಲ್ ಮಾಡಿ ವಿಶ್ ಮಾಡಿದ್ದಾರೆ ನಿಖಿಲ್, ಹಾಗೂ ಎರಡೂ ಸಿನಿಮಾಗಳನ್ನು ಬೆಂಬಲಿಸುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
****