ಸ್ಟಾರ್ ಕಿಡ್ ಗೆ ಸ್ಟಾರ್ ಡೈರೆಕ್ಟರ್ ಆಕ್ಷನ್ ಕಟ್

ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ಗಳ ಮಕ್ಕಳು ಮತ್ತೆ ಹೀರೋಗಳು ಈ ತೆರೆಮೇಲೆ ಮಿಂಚೋದು ಹೊಸತೇನಲ್ಲ ಅದರಂತೆ ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಈಗಾಗಲೇ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ ..
ನಿರಂಜನ್ ಅಭಿನಯದ ಸೂಪರ್ ಸ್ಟಾರ್ ಸಿನಿಮಾ ಈಗಾಗಲೇ ಸೆಟ್ಟೇರಿದ್ದು..ಆ ಸಿನಿಮಾ ಬಿಡುಗಡೆ ಮುಂಚೆ ನಿರಂಜನ್ ಮತ್ತೊಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಕನ್ನಡ ಸಿನಿಮಾರಂಗದ ಸ್ಟಾರ್ ನಿರ್ದೇಶಕ ನಾಗಶೇಖರ್ ನಿರಂಜನ್ ಅವರ ಮುಂದಿನಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.. ಈಗಾಹಲೇ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು, ಚಿತ್ರಕ್ಕೆ ಸತ್ಯಹೆಗಡೆ ಕ್ಯಾಮೆರಾ ವರ್ಕ್ ಮಾಡುತ್ತಿದ್ದಾರೆ ..ಅಜನೀಶ್ ಬಿ ಲೋಕನಾಥ್ ಸಂಗೀತ ಸಂಯೋಜನೆ ಸಿನಿಮಾ ಹೇಗಿರಲಿದೆ ..
ಈಗಾಗಲೇ ಮೊದಲ ಸಿನಿಮಾದ ಮೂಲಕವೇ ಭರವಸೆ ಮೂಡಿಸಿರುವ ನಿರಂಜನ್ ಮುಂದಿನ ದಿನಗಳಲ್ಲಿ ಸ್ಯಾಂಡಲ್ ವುಡ್ ನ ಭರವಸೆಯ ನಾಯಕನಾಗುವಂತ ಎಲ್ಲಾ ಲಕ್ಷಣಗಳು ಕಾಣುತ್ತಿದೆ… ಇನ್ನು ಅದ್ಭುತ ಲವ್ ಸ್ಟೋರಿಗಳನ್ನ ತೆರೆಮೇಲೆ ತಂದು ಪ್ರೇಕ್ಷಕರ ಮನಗೆದ್ದಿರುವ ನಾಗಶೇಖರ್ ಈ ಬಾರಿ ನಿರಂಜನ್ ಗಾಗಿ ಯಾವ ರೀತಿ ಕಥೆ ಮಾಡಿಕೊಂಡಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ …ಸದ್ಯ ರಿವಿಲ್ಲಾಗಿರುವ ಪೋಸ್ಟರ್ ನಲ್ಲಿ ಸಿನಿಮಾದ ಟೈಟಲ್ ಕ್ಯೂ ಎಂದು ಇಡಲಾಗಿದೆ ..