‘ಮುಗಿಲ್ ಪೇಟೆ’ Meets ‘ಪ್ರೇಮ ಲೋಕ’

ಮೂರು ದಶಕಗಳ ಹಿಂದೆ ತೆರೆ ಮೇಲೆ ಬಂದಿದ್ದ ನಟ ರವಿಚಂದ್ರನ್ ನಟಿಸಿ, ನಿರ್ದೇಶಿಸಿದ್ದ ‘ಪ್ರೇಮಲೋಕ’ ಸಿನಿಮಾ ಹೊಸ ಪ್ರೇಮಲೋಕವನ್ನೇ ಸೃಷ್ಟಿಸಿತ್ತು. ಇದೇ ಸಿನಿಮಾದ ದೃಶ್ಯವೊಂದಕ್ಕೆ ಇದೀಗ ರವಿಚಂದ್ರನ್ ಅವರ ಮಗ ಮನೋರಂಜನ್ ಮತ್ತೆ ಜೀವತುಂಬಿದ್ದಾರೆ.
‘ಪ್ರೇಮಲೋಕ’ದಲ್ಲಿ ರವಿಚಂದ್ರನ್ ಹಾಗೂ ಜೂಹಿ ಚಾವ್ಲಾ ಜೋಡಿ ತೆರೆಯ ಮೇಲೆ ಮೋಡಿ ಮಾಡಿತ್ತು. ತಮ್ಮ ಹೊಸ ಚಿತ್ರ ‘ಮುಗಿಲ್‌ಪೇಟೆ’ಯಲ್ಲಿ ‘ಪ್ರೇಮಲೋಕ’ದ ದೃಶ್ಯವೊಂದನ್ನು ಮನೋರಂಜನ್ ಮರುಸೃಷ್ಟಿಸಿದ್ದು, ಇದರ ತುಣುಕನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ‘ದಶಕಗಳ ಹಿಂದೆ ಅಪ್ಪ ನಟಿಸಿದ್ದ ದೃಶ್ಯವನ್ನು ಮರುಸೃಷ್ಟಿಸುವ ಪ್ರಯತ್ನ ಹೆಮ್ಮೆ ತಂದಿದೆ. ಸಿನಿಮಾ ಬಿಡುಗಡೆಯಾದ ಸಂದರ್ಭದಲ್ಲಿ ಇದನ್ನು ಪ್ರೇಕ್ಷಕರು ಯಾವ ರೀತಿ ಸ್ವೀಕರಿಸಲಿದ್ದಾರೆ ಎನ್ನುವುದನ್ನು ಕಾಣಲು ಕಾತುರದಿಂದಿದ್ದೇನೆ’ ಎಂದಿದ್ದಾರೆ ಮನೋರಂಜನ್.
****