ಪಿಚ್ಚರ್ UPDATE

ಡಿ.9ಕ್ಕೆ ಮಾನ್ಸೂನ್‌ ರಾಗ ಜೀ಼5 ನಲ್ಲಿ ʻವರ್ಲ್ಡ್‌ ಡಿಜಿಟಲ್‌ ಪ್ರಿಮಿಯರ್‌ʼ..!

ಡಿ.9ಕ್ಕೆ ಮಾನ್ಸೂನ್‌ ರಾಗ ಜೀ಼5 ನಲ್ಲಿ ʻವರ್ಲ್ಡ್‌ ಡಿಜಿಟಲ್‌ ಪ್ರಿಮಿಯರ್‌ʼ..!
  • PublishedDecember 3, 2022

ಡಾಲಿ ಧನಂಜಯ್‌ ಹಾಗೂ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಮೊದಲ ಬಾರಿಗೆ ಜೋಡಿಯಾಗಿ ನಟಿಸಿರೋ ಮ್ಯೂಸಿಕಲ್‌ ಸೂಪರ್‌ ಸಿನಿಮಾ ಮಾನ್ಸೂನ್‌ ರಾಗ. ಇದೇ ಡಿಸೆಂಬರ್‌ 9ಕ್ಕೆ ಜೀ಼5 ನಲ್ಲಿ ವರ್ಲ್ಡ್‌ ಡಿಜಿಟಲ್‌ ಪ್ರೀಮಿಯರ್‌ ಆಗ್ತಾ ಇದೆ. ಧನಂಜಯ್‌ ಹಾಗೂ ರಚಿತಾರಾಮ್‌ ಅಭಿನಯದ ಮಾನ್ಸೂನ್‌ ರಾಗ ಸೆ.16ರಂದು ಥಿಯೇಟರ್‌ನಲ್ಲಿ ರಿಲೀಸ್‌ ಆಗಿ ಜನರಿಂದ ಒಳ್ಳೆ ಪ್ರತಿಕ್ರಿಯೆ ಪಡೆದಿತ್ತು. ಇದೀಗ ಜೀ಼5 ಓಟಿಟಿಯಲ್ಲಿ ರಿಲೀಸ್‌ ಆಗ್ತಾ ಇದೆ.

ಸಿನಿಮಾ ರಿಲೀಸ್‌ ಆಗುವ ಮೊದಲೇ, ಅನೂಪ್‌ ಸೀಳಿನ್‌ ಸಂಗೀತ ನಿರ್ದೇಶನದ ಹಾಡುಗಳು ಕಮಾಲ್‌ ಮಾಡಿದ್ದವು. ಈ ಹಿಂದೆ ಪುಷ್ಪಕ ವಿಮಾನ ಸಿನಿಮಾ ಮಾಡಿದ್ದ ನಿರ್ದೇಶಕ ರವೀಂದ್ರನಾಥ್‌ ಹಾಗೂ ನಿರ್ಮಾಪಕ ವಿಖ್ಯಾತ್‌ ಕಾಂಬೋ ಈ ಸಿನಿಮಾವನ್ನ ತೆರೆಗೆ ತಂದಿತ್ತು. ಹಾಡುಗಳು, ಬ್ಯಾಕ್‌ಗ್ರೌಂಡ್‌ ಮ್ಯೂಸಿಕ್‌ ಹಾಗೂ ಕ್ಯಾಮರಾ ವರ್ಕ್‌ನಿಂದ ಎಲ್ಲರ ಗಮನ ಸೆಳೆದ ಮಾನ್ಸೂನ್‌ ರಾಗ ಈಗ ಜೀ಼5ನಲ್ಲಿ ವರ್ಲ್ಡ್‌ ಡಿಜಿಟಲ್‌ ಪ್ರೀಮಿಯರ್‌ ಆಗ್ತಾ ಇದೆ.

ಡಾಲಿ, ರಚಿತಾ ಜೊತೆಗೆ ಅಚ್ಯುತ್‌ ಕುಮಾರ್‌, ಯಶ ಶಿವಕುಮಾರ್‌ ನಟಿಸಿದ್ರು.. ಸಿನಿಮಾದ ಪ್ರಮುಖ ಪಾತ್ರದಲ್ಲಿ ಸುಹಾಸಿನಿ ಮಣಿರತ್ನಂ ನಟಿಸಿದ್ದರು. ಥಿಯೇಟರ್‌ನಲ್ಲಿ ಎಲ್ಲರ ಮೆಚ್ಚುಗೆ ಗಳಿಸಿದ್ದ ಮಾನ್ಸೂನ್‌ ರಾಗ ಈಗ ಜೀ಼5 ಓಟಿಟಿ ಮೂಲಕ ನಿಮ್ಮನ್ನು ರಂಜಿಸಲಿದೆ. ಮನೆಮಂದಿಯೆಲ್ಲಾ ಕೂತು ನೋಡಿ ಎಂಜಾಯ್‌ ಮಾಡಿ

Written By
kiranbchandra