ರಾಯನ್ ರಾಜ್ ಸರ್ಜಾ ಹುಟ್ಟುಹಬ್ಬಸಂಭ್ರಮದಲ್ಲಿ ಮೇಘನಾ ರಾಜ್ ಕುಟುಂಬ

ಚಿರಂಜೀವಿ ಸರ್ಜಾ-ಮೇಘನಾ ದಂಪತಿ ಪುತ್ರ ರಾಯನ್ ರಾಜ್ ಸರ್ಜಾಗೆ ಇಂದು ವರ್ಷ ತುಂಬಿದ ಸಂಭ್ರಮ. ಮುದ್ದು ಮಗುವಿನ ಹುಟ್ಟುಹಬ್ಬವನ್ನು ಮೇಘನಾ ಸಂಭ್ರಮದಿಂದಲೇ ಆಚರಿಸಿಕೊಳ್ಳುತ್ತಿದ್ದಾರೆ.
ಮಗನ ಜೊತೆಗಿನ ಮುದ್ದಾದ ಕ್ಷಣದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಮೇಘನಾ ರಾಯನ್ ಗೆ ಮೊದಲ ವರ್ಷದ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಇನ್ನು, ರಾಯನ್ ಗೆ ಮೇಘನಾ-ಚಿರು ಸ್ನೇಹಿತರೂ ವಿಶೇಷ ಉಡುಗೊರೆಗಳ ಮೂಲಕ ಶುಭ ಕೋರಿದ್ದಾರೆ. ಮೊನ್ನೆಯಷ್ಟೇ ಚಿರು ಸರ್ಜಾ ಬರ್ತ್ ಡೇ ಇತ್ತು. ಇಂದು ಮಗನ ಬರ್ತ್ ಡೇ. ಮಗನ ಮೊದಲ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸುತಿದ್ದಾರೆ ಮೇಘನಾ.
https://www.instagram.com/p/CVTUu-DB-tG/
ನಮ್ಮ ಮಗು, ನಮ್ಮ ಪ್ರಪಂಚ, ನಮ್ಮ ಜಗತ್ತು, ನಮ್ಮ ಸರ್ವಸ್ವ! ಚಿರು.. ನಮ್ಮ ಪುಟಾಣಿ ರಾಜಕುಮಾರನಿಗೆ ಈಗ ಒಂದು ವರ್ಷ’ ಎಂಬ ಕ್ಯಾಪ್ಷನ್ನೊಂದಿಗೆ ಮಗನ ಹುಟ್ಟುಹಬ್ಬದ ಸಂದೇಶವನ್ನು ಚಿರು ಜೊತೆ ಮೇಘನಾ ಹಂಚಿಕೊಂಡಿದ್ದಾರೆ. ಪನ್ನಗ ಭರಣ, ಕೃಷಿ ತಾಪಂಡ, ಅದ್ವಿತಿ ಶೆಟ್ಟಿ, ಸೋನು ಗೌಡ, ಆಶಿತಾ ಚಂದ್ರಪ್ಪ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಈ ಪೋಸ್ಟ್ಗೆ ಕಮೆಂಟ್ ಮಾಡುವ ಮೂಲಕ ಚಿರು ಪುತ್ರನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.
****