ಮಾರ್ನಮಿ ಫಿಲಂ ರಿಲೀಸ್ ಡೇಟ್ ಕನ್ಫರ್ಮ್
ಚೈತ್ರ ಜೆ ಆಚಾರ್ ಹಾಗೂ ಗಿಣಿರಾಮ ಖ್ಯಾತಿಯ ರಿತ್ವಿಕ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಮಾರ್ನಮಿ ಚಿತ್ರ ದ ಬಿಡುಗಡೆ ದಿನಾಂಕವನ್ನು ಚಿತ್ರ ತಂಡ ಘೋಷಿಸಿದೆ. ನಿನ್ನೆ ಮಾರ್ನಮಿ ಚಿತ್ರ ತಂಡವು ಸುದ್ದಿಗೋಷ್ಠಿ ನಡೆಸಿತ್ತು. ಈ ಸುದ್ದಿಗೋಷ್ಠಿ ಯಲ್ಲಿ ಚಿತ್ರ ತಂಡ ಮಾರ್ನಮಿ ಚಿತ್ರವು ಇದೆ ಫೆಬ್ರವರಿ 20 ರಂದು ತೆರೆ ಕಾಣುತ್ತಿದೆ ಎಂದು ಹೇಳುವುದರ ಮೂಲಕ ಜನರ ಕುತೂಹಲಕ್ಕೆ ಬ್ರೇಕ್ ಹಾಕಿದೆ.ಈಗಾಗಲೇ ಸಿನಿಮಾದ ಹಾಡು ಮಾರಾಯ ಎಂತ ಗೊತ್ತ ಭಾರಿ ಸದ್ದು ಮಾಡುತ್ತಿದೆ. ಅದರ ಜೊತೆಗೆ ಚಿತ್ರದ ಟ್ರೈಲರ್ ಕೂಡ ದೊಡ್ಡ ಮಟ್ಟದ ಆಶಯ ಮೂಡಿಸಿದೆ.