new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ʼಮಾರ್ಕ್ʼ ಮೊದಲ ವಾರಾಂತ್ಯದ ಗಳಿಕೆ ಎಷ್ಟು?

ʼಮಾರ್ಕ್ʼ ಮೊದಲ ವಾರಾಂತ್ಯದ ಗಳಿಕೆ ಎಷ್ಟು?
  • PublishedDecember 29, 2025

ಮಾರ್ಕ್ ಈ ವರ್ಷ ಬಿಡುಗಡೆಯಾದ ಮೋಸ್ಟ್ ಅವಯ್ಟೆಡ್ ಸಿನಿಮಾಗಳಲ್ಲಿ ಒಂದು. ಕಿಚ್ಚ ಸುದೀಪ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ ಈ ಸಿನಿಮಾವು ಕ್ರಿಸ್ಮಸ್ ಹಬ್ಬದಂದು ಥೀಯೇಟರ್ ನಲ್ಲಿ ಬಿಡುಗಡೆಗೊಂಡಿತು.ಇದೀಗ ಸಿನಿಮಾವು ಕ್ರಿಸ್ಮಸ್ ಬ್ಲಾಕ್ ಬಸ್ಟರ್ ಗಳಲ್ಲಿ ಒಂದಾಗಿದೆ. ಬಾಕ್ಸ್ ಆಫೀಸ್ ನಲ್ಲಿ ಸಖತ್ ಕಲೆಕ್ಷನ್ ಮಾಡುತ್ತಿರುವ ಮಾರ್ಕ್ ಮೊದಲ ವಾರಾಂತ್ಯದಲ್ಲಿ ಎಷ್ಟು ಗಳಿಕೆ ಮಾಡಿದೆ ಎನ್ನುವುದರ ಅಪ್ಡೇಟ್ ಇಲ್ಲಿದೆ.

ವಿಜಯ್ ಕಾರ್ತಿಕೇಯ ಅವರು ನಿರ್ದೇಶಿಸಿರುವ ಈ ಸಿನಿಮಾವನ್ನು ಕಿಚ್ಚ ಕ್ರಿಯೇಷನ್ಸ್ ಮತ್ತು ಸತ್ಯ‌ ಜ್ಯೋತಿ ಫಿಲ್ಮ್ಸ್‌ ಜೊತೆಗೂಡಿ ನಿರ್ಮಾಣ ಮಾಡಿದೆ.ಈ ಚಿತ್ರ ಪಕ್ಕ ಮಾಸ್ ಚಿತ್ರವಾಗಿ ಜನರ ಪ್ರೀತಿಗೆ ಪಾತ್ರವಾಗುತ್ತಿದೆ. ಚಿತ್ರದಲ್ಲಿ ಕಿಚ್ಚನ ಸ್ವಾಗ್, ಸ್ಟೈಲ್ ಎಲ್ಲವನ್ನು ಕಂಡ ಸಿನಿ ಪ್ರಿಯರು ಸುದೀಪ್ ಅವರ ನಟನೆಗೆ ಫುಲ್ ಫಿದಾ ಆಗಿದ್ದಾರೆ.

ಮ್ಯಾಕ್ಸ್‌ ಚಿತ್ರ 2024 ರಲ್ಲಿ ರಿಲೀಸ್‌ ಆದ ನಂತರ ಕಿಚ್ಚನನ್ನು ಬೆಳ್ಳಿ ತೆರೆ ಮೇಲೆ ನೋಡಿದ ಅಭಿಮಾನಿಗಳು ಸಂಭ್ರಮದಿಂದ ಸಿನಿಮಾವನ್ನು ಬರ ಮಾಡಿಕೊಂಡಿದ್ದರು.ಇದೀಗ ಸೋರ್ಸ್‌ ಒಂದರ ಪ್ರಕಾರ ಚಿತ್ರವು ವಾರಾಂತ್ಯದಲ್ಲಿ 35 ಕೋಟಿ ಗಳಿಕೆ ಮಾಡಿದೆ ಎಂಬ ಮಾಹಿತಿ ಹೊರಬಿದ್ದಿದೆ. ರಿಲೀಸ್ ಆಗಿ ಇಂದಿಗೆ 5 ದಿನಗಳಾಗಿದೆಯಷ್ಟೇ ಆಗಲೇ ಇಷ್ಟು ಪ್ರೀತಿಯನ್ನು ಜನ ಕಿಚ್ಚನ ಮಾರ್ಕ್ ಗೆ ನೀಡುತ್ತಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *