ಮಾರ್ಕ್ ಹಿಂದಿ ಟ್ರೈಲರ್ ಮ್ಯಾಜಿಕ್
ಡಿಸೆಂಬರ್ 25 ರಂದು ಸುದೀಪ್ ನಟನೆಯ ಮಾರ್ಕ್ ತೆರೆ ಮೇಲೆ ಬರಲಿದೆ.ಕನ್ನಡ,ತಮಿಳ್, ತೆಲುಗು ಭಾಷೆಗಳಲ್ಲಿ ಡಿಸೆಂಬರ್ 7 ರಂದು ಬಿಡುಗಡೆ ಮಾಡಿದ್ದರು. ಪ್ಯಾನ್ ಇಂಡಿಯಾ ಚಿತ್ರ ಆಗಿರೋ ಮಾರ್ಕ್ ಕನ್ನಡ ಟ್ರೈಲರ್ ರೆಕಾರ್ಡ್ ಗಳ ಸುರಿಮಳೆಯನ್ನೇ ಹರಿಸಿತ್ತು.
ಇದೀಗ ಇಂದು ಸಂಜೆ 4 ಗಂಟೆಗೆ ಸರಿಗಮ ಅಧಿಕೃತ ಯು ಟ್ಯೂಬ್ ಚಾನೆಲ್ ನಲ್ಲಿ ಚಿತ್ರದ ಹಿಂದಿ ಡಬ್ಡ್ ವರ್ಷನ್ ಟ್ರೈಲರ್ ರಿಲೀಸ್ ಆಗಿದೆ.ಚಿತ್ರ ಮೂಲತಃ ಕನ್ನಡದಲ್ಲಿ ಇದ್ದರು ಅದರ ಹಿಂದಿ ಟ್ರೈಲರ್ ಹಾಗೂ ಡೈಲಾಗ್ಸ್ ಸಕ್ಕತ್ ಇದೆ ಎಂದು ಅಭಿಮಾನಿಗಳು ಹೇಳಿದ್ದಾರೆ.
ಸುದೀಪ್ ಅವರು ಪಕ್ಕ ಮಾಸ್ ಆಗಿ ಮಾರ್ಕ್ನಲ್ಲಿ ಕಾಣಿಸಿ ಕೊಳ್ಳಲಿದ್ದು ಆಕ್ಷನ್, ಥ್ರಿಲರ್ ಜಾನರ್ ಸಿನಿಮಾ ಆಗಿದೆ.ಮಾರ್ಕ್ ಟ್ರೈಲರ್ ಗೆ ಸಿಕ್ಕ ವ್ಯೂಸ್, ಲೈಕ್ಸ್ ಎಲ್ಲವನ್ನು ನೋಡಿದರೆ ಚಿತ್ರವು ದೊಡ್ಡ ಪ್ರಮಾಣದ ಯಶಸ್ಸನ್ನು ಕಾಣುವ ನಿರೀಕ್ಷೆ ಮೂಡಿಸಿದೆ.