ಮತ್ತೆ ಕಿಚ್ಚ ಸರ್ಪ್ರೈಸ್ ‘ಮಾರ್ಕ್’ Trailer ನಾಳೆ ರಿಲೀಸ್
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಈ ಬಾರಿಯ ಮತ್ತೊಂದು ಬಹು ನೀರೀಕ್ಷಿತ ಚಿತ್ರವೆಂದರೆ ಮಾರ್ಕ್ ‘. ವಿಜಯ್ ಕಾರ್ತಿಕೆಯ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರ ಇದಾಗಿದ್ದು, ಕಿಚ್ಚನ ಅಭಿಮಾನಿಗಳು ಸಿನಿಮಾ ಅಪ್ಡೇಟ್ ಗಾಗಿ ಕಾಯುತ್ತಿದ್ದರು.
ಇದೀಗ ಚಿತ್ರ ತಂಡ ‘ಮಾರ್ಕ್‘ ಚಿತ್ರದ ಟ್ರೈಲರ್ ಬಿಡುಗಡೆಯ ದಿನಾಂಕವನ್ನು ಪ್ರಸ್ತಾಪಿಸಿದ್ದಾರೆ.ಮಾರ್ಕ್ ಚಿತ್ರ ತಂಡವು ಡಿಸೆಂಬರ್ 7 ರಂದು ಅಂದರೆ ನಾಳೆ ಬೆಳ್ಳಗೆ 11.58 ಕ್ಕೆ ತಮ್ಮ ಅಧಿಕೃತ ಯುಟ್ಯೂಬ್ ಚಾನೆಲ್ ನಲ್ಲಿ ಚಿತ್ರದ ಟ್ರೈಲರ್ ಬಿಡುಗಡೆಯಾಗುವ ವಿಚಾರವನ್ನು ಹೇಳಿದ್ದಾರೆ.
ವಿಷಯ ಕೇಳಿದ ಕಿಚ್ಚನ ಕಿಚ್ಚಿನ ಅಭಿಮಾನಿಗಳು “ನಾಳೆ ಟ್ರೈಲರ್ಗೆ ಸಿದ್ದ ಆಗಿ, ದಾಖಲೆಗಳ ದಾದ ಬರ್ತಿದ್ದಾರೆ”, “ನಾಳೆ ಸೋಶಿಯಲ್ ಮೀಡಿಯಾ ಫುಲ್ ಬೆಂಕಿ” ಎಂದೆಲ್ಲ ಕಾಮೆಂಟ್ಸ್ ಮಾಡುತ್ತಾ ತಮ್ಮ ಖುಷಿಯನ್ನು ಹಂಚಿಕೊಳ್ಳುತ್ತಿದ್ದಾರೆ.