News

ಮಾ.17-23, ಅಪ್ಪು ವಾರ- ಜೇಮ್ಸ್‌ ಬಿಟ್ಟು ಬೇರೆ ಯಾವ ಚಿತ್ರವು ರಿಲೀಸ್‌ ಆಗಲ್ಲ..!

ಮಾ.17-23, ಅಪ್ಪು ವಾರ- ಜೇಮ್ಸ್‌ ಬಿಟ್ಟು ಬೇರೆ ಯಾವ ಚಿತ್ರವು ರಿಲೀಸ್‌ ಆಗಲ್ಲ..!
  • PublishedJanuary 25, 2022

ಇದೇ ಮಾರ್ಚ್‌ 17, ಕನ್ನಡ ರಾಜರತ್ನ ಪುನೀತ್‌ ಹುಟ್ಟುಹಬ್ಬ ಇದರ ಜೊತೆಗೆ ಕನ್ನಡ ಚಿತ್ರರಸಿಕರು ಕಾತುರದಿಂದ ಕಾಯುತ್ತಾ ಇರೋ, ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಹೀರೋ ಆಗಿ ನಟಿಸಿರೋ ಕೊನೆಯ ಸಿನಿಮಾ ಜೇಮ್ಸ್‌ ರಿಲೀಸ್‌ ಆಗ್ತಾ ಇದೆ. ಜೇಮ್ಸ್‌ ಸಿನಿಮಾ ನೋಡಲು ಅಭಿಮಾನಿಗಳಲ್ಲಿ ಕಾತುರ ಹೆಚ್ಚಿದೆ. ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಟಾಪ್‌ ಲಿಸ್ಟ್‌ ನಲ್ಲಿ ಜೇಮ್ಸ್‌ ಕೂಡ ಇದೆ. ಸಿನಿಮಾದ ಅಪ್ಪು ಲುಕ್‌, ಸಿನಿಮಾ ಬಗೆಗಿನ ಹೈಪ್‌ ಒಂದು ಕಡೆಯಾದ್ರೆ, ಅಪ್ಪು ನಮ್ಮ ಜೊತೆ ಜೀವಂತ ಇಲ್ಲ ಅನ್ನೋದು ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಾಗಲು ಕಾರಣ.

ಅಪ್ಪುಗೆ ಒಂದು ವಾರ ಮೀಸಲಿಡ್ತಿದ್ದಾರೆ ವಿತರಕರು

ಅಪ್ಪು ಹುಟ್ಟಿದ ದಿನ ಮಾ.17 ರಿಂದ ಮಾ.23ರವರೆಗೆ ರಾಜ್ಯದ್ಯಂತ ಪವರ್‌ ಸ್ಟಾರ್‌ ಅಭಿನಯದ ಜೇಮ್ಸ್‌ ಸಿನಿಮಾ ಹೊರತು ಪಡಿಸಿ, ಮತ್ಯಾವುದೇ ಸಿನಿಮಾ ರಿಲೀಸ್‌ ಮಾಡದಿರಲು ಸಿನಿಮಾ ವಿತರಕರು ನಿರ್ಧರಿಸಿದ್ದಾರೆ. ಆ ಒಂಧು ವಾರ ಜೇಮ್ಸ್‌ ಸಿನಿಮಾ ಹೊರತು ಪಡಿಸಿ ಬೇರ್ಯಾವುದೇ ಸಿನಿಮಾ ರಿಲೀಸ್‌ ಮಾಡಲು ನಿರ್ಧರಿಸಲಾಗಿದೆ. ಇದು ಕರ್ನಾಟಕ ಚಲನಚಿತ್ರ ವಿತರಕರಿಂದ ಅಪ್ಪುಗೆ ಸಲ್ಲಿಸುತ್ತಿರುವ ಗೌರವ. ಇದೇ ವಾರ ಸಾಕಷ್ಟು ಪರಭಾಷಾ ಸಿನಿಮಾಗಳು ರಿಲೀಸ್‌ ಆಗ್ತಾ ಇದ್ದು, ಇದ್ಯಾವ ಸಿನಿಮಾಗಳನ್ನು ಕರ್ನಾಟಕದಲ್ಲಿ ಪ್ರದರ್ಶನ ಮಾಡದಿರಲು ನಿರ್ಧರಿಸಲಾಗಿದೆ.

Written By
Kannadapichhar

Leave a Reply

Your email address will not be published. Required fields are marked *