ಹಳೇ ಮೈಸೂರು ಅಡ್ಡದಲ್ಲಿ ಮದಗಜ ವಿಜಯಯಾತ್ರೆ..!
ಮದಗಜ ಸಿನಿಮಾ ಭರ್ಜರಿ ಒಂದು ವಾರದ ಪ್ರದರ್ಶನದ ನಂತ್ರ, ಇವತ್ತು ಸಿನಿಮಾ ತಂಡ ಅಭಿಮಾನಿಗಳಿಗೆ ಸಿನಿಮಾ ಗೆಲ್ಲಿಸಿದ್ದಕ್ಕಾಗಿ, ಧನ್ಯವಾದ ತಿಳಿಸಲು ವಿಜಯ ಯಾತ್ರೆ ಕೈಗೊಂಡಿತ್ತು. ಸಿನಿಮಾದ ನಾಯಕ ರೋರಿಂಗ್ ಸ್ಟಾರ್ ಶ್ರೀಮುರಳಿ, ವಿಲನ್ ಗರುಡಾ ರಾಮ್, ನಿರ್ದೇಶಕ ಮಹೇಶ್ ಇಂದು ಬೆಳಗ್ಗೆಯಿಂದಲೇ ಚೆನ್ನಪಟ್ಟಣ, ಮಂಡ್ಯ, ಮೈಸೂರಿನಲ್ಲಿ ಸಿನಿಮಾದ ಪ್ರದರ್ಶನದ ವೇಳೆ ಥಿಯೇಟರ್‌ಗಳಿಗೆ ಭೇಟಿ ನೀಡಿ, ಸಿನಿಮಾ ನೋಡಲು ಬಂದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ರು..
ಮೊದಲಿಗೆ ಚನ್ನಪಟ್ಟಣ ತಲುಪಿದ ತಂಡಕ್ಕೆ ಅಭಿಮಾನಿಗಳು ಅದ್ಧೂರಿ ಆಹ್ವಾನ ನೀಡಿದ್ರು, ಪಟಾಕಿ ಸಿಡಿಸಿ ಸಂಭ್ರಮಿಸಿದ್ರು. ಅಭಿಮಾನಿಗಳ ವೆಲ್ಕಂ ಕಂಡು ಶ್ರೀಮುರಳಿ ಕೂಡ ದಿಲ್ ಖುಷ್ ಆಗಿದ್ರು. ನಂತ್ರ ಮಂಡ್ಯಕ್ಕೆ ಭೇಟಿ ನೀಡಿದ ಸಿನಿಮಾ ಟೀಮ್ ಅಭಿಮಾನಿಗಳ ಜೊತೆ ಸಂಭ್ರಮಾಚರಣೆಯಲ್ಲಿ ಭಾಗಿಯಾಯ್ತು. ಜೊತೆಗೆ ಫ್ಯಾನ್ಸ್ ಜೊತೆಗೆ ಶ್ರೀಮುರಳಿ ಹಾಗು ಗರುಡಾ ರಾಮ್ ನಗರದ ಗಲ್ಲಿ ಗಲ್ಲಿಗಳಲ್ಲಿ ಬೈಕ್ ರೈಡ್ ಮಾಡಿ, ಫ್ಯಾನ್ಸ್ ಮನಸಂತೋಷ ಪಡಿಸಿದ್ರು.
ಸಂಜೆ ವೇಳೆಗೆ ಮೈಸೂರು ತಲುಪಿದ ಚಿತ್ರತಂಡಕ್ಕೆ ಅಭಿಮಾನಿಗಳು ಹೂವಿನ ಆಮಂತ್ರಣ ನೀಡಿದ್ರು, ಮದಗಜನನ್ನ ತೆರೆ ಮೇಲೆ ಕಂಡು ಖುಷಿ ಪಟ್ಟಿದ್ದ ಫ್ಯಾನ್ಸ್, ಒಳ್ಳೆ ಸಿನಿಮಾ ಕೊಟ್ಟಿದಕ್ಕೆ ಮದಗಜ ತಂಡಕ್ಕೆ ವಿಶ್ ಮಾಡಿದ್ರು. ಅಭಿಮಾನಿಗಳು ಶ್ರೀಮುರಳಿಗೆ ಪುನೀತ್ ರಾಜ್‌ಕುಮಾರ್ ಫೋಟೋವನ್ನ ಗಿಫ್ಟ್ ಆಗಿ ನೀಡಿದ್ರು, ಆ ಫೋಟೋ ಹಿಡಿದು, ಅಭಿಮಾನಿಗಳ ಜೊತೆ ಕುಣಿದು ಸಂಭ್ರಮಿಸಿದ್ರು ರೋರಿಂಗ್ ಸ್ಟಾರ್.