‘ಲವ್ ಯೂ ರಚ್ಚು’ ಕುತೂಹಲ ಹೆಚ್ಚಿಸಿದ ಟ್ರೇಲರ್..! ಡಿಸೆಂಬರ್ 31 ಕ್ಕೆ ತೆರೆಗೆ
ಗುರು ದೇಶಪಾಂಡೆ ನಿರ್ಮಾಣದ, ಶಂಕರ್ ಎಸ್ ರಾಜ್ ನಿರ್ದೇಶನದ, ರಚಿತಾ ರಾಮ್, ಅಜಯ್ ರಾವ್ ಅಭಿನಯದ ‘ಲವ್ ಯೂ ರಚ್ಚು’ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು ಚಿತ್ರದಲ್ಲಿ ರೊಮ್ಯಾನ್ಸ್ ಜೊತೆ ಸಸ್ಪೆನ್ಸ್ ಆಕ್ಷನ್ ಥ್ರಿಲರ್ ಕೂಡ ಹೇರಳವಾಗಿದೆ. ಒಂದು ಮರ್ಡರ್ ಮಿಸ್ಟ್ರಿಯ ಎಳೆಯಲ್ಲಿ ಚಿತ್ರಕಥೆ ಸಾಗುತ್ತದೆ. ಟೈಟಲ್ ಹಾಗೂ ಹಾಡುಗಳಿಂದಲೇ ಸಾಕಷ್ಟು ಸದ್ದು ಮಾಡಿದ್ದ ಲವ್ ಯೂ ರಚ್ಚು, ಈ ಟ್ರೈಲರ್ ನೋಡಿದ ಮೇಲಂತೂ ನಾವ್ಯಾರು ನಿರೀಕ್ಷಿಸದ ತಿರುಗಳು ಚಿತ್ರದಲ್ಲಿ ಕಾಣಿಸುತ್ತಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ.’ಲವ್ ಯೂ ರಚ್ಚು’ಇದೇ ಡಿಸೆಂಬರ್ 31 ರಂದು ಥಿಯೇಟರ್ ಗಳಿಗೆ ಎಂಟ್ರಿ ಕೊಡಲು ಸಜ್ಜಾಗಿದೆ.
ಲವ್ ಯೂ ರಚ್ಚು ಚಿತ್ರದ ಟ್ರೈಲರ್ ಅನ್ನು ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ರಿಲೀಸ್ ಮಾಡಿದ್ದು ಸಿನಿ ಪ್ರೇಕ್ಷಕರಿಂದ ಸಕತ್ ರೆಸ್ಪಾನ್ಸ್ ಸಿಕ್ಕಿದೆ. ಚಿತ್ರಕ್ಕೆ ಅಭಿಮಾನಿಗಳು ಆಲ್ ದಿ ಬೆಸ್ಟ್ ಹೇಳುತ್ತಿದ್ದಾರೆ. ಟೈಟಲ್ ಹಾಗೂ ಹಾಡುಗಳಿಂದಲೇ ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಸದ್ದು ಮಾಡಿರುವ ಚಿತ್ರ ‘ಲವ್ ಯು ರಚ್ಚು’ ಇದೇ ಮೊದಲ ಬಾರಿಗೆ ಅಜಯ್ ರಾವ್ ಮತ್ತು ರಚಿತಾ ರಾಮ್ ಒಟ್ಟಾಗಿ ಅಭಿನಯಿಸಿದ್ದು ಇಬ್ಬರನ್ನು ತೆರೆಮೇಲೆ ನೋಡಲು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ.
‘ಲವ್ ಯು ರಚ್ಚು’ ಚಿತ್ರದಲ್ಲಿ ಅಜಯ್ ರಾವ್ ಮಗಳು ಚರಿಷ್ಮಾ ಬಾಲ ನಟಿಯಾಗಿ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಸನ್ನಿವೇಶವೊಂದರಲ್ಲಿ ಪುಟ್ಟ ಮಗುವೊಂದು ಅಭಿನಯಿಸಬೇಕಾಗಿತ್ತು. ನಮ್ಮ ಚಿತ್ರದ ನಾಯಕ ಅಜಯ್ ರಾವ್ ಮಗಳು ಚರಿಷ್ಮಾ ಈ ಪಾತ್ರಕ್ಕೆ ಹೊಂದಿಕೆಯಾಗುತ್ತಾಳೆ, ಅವಳಿಂದ ಈ ಸನ್ನಿವೇಶ ಚಿತ್ರೀಕರಿಸಿದರೆ ಚೆನ್ನಾಗಿರುತ್ತದೆ ಎಂದು ಇಡೀ ಚಿತ್ರತಂಡಕ್ಕೆ ಅನಿಸಿತು. ಅದರಂತೆ ಚರಿಷ್ಮಾ ಸನ್ನಿವೇಶವನ್ನು ಚಿತ್ರೀಕರಿಸಲಾಯಿತು. ಸಿನಿಮಾದಲ್ಲಿ ಚರಿಷ್ಮಾ ತುಂಬ ಕ್ಯೂಟ್ ಆಗಿ ಕಾಣುತ್ತಾಳೆ ಎಂದು ಚಿತ್ರದ ನಿರ್ಮಾಪಕ ಗುರು ದೇಶಪಾಂಡೆ ಈ ಹಿಂದೆ ತಿಳಿಸಿದ್ದಾರೆ.
****