‘ಲವ್ ಮಾಕ್ಟೇಲ್ 3’ ಬಿಡುಗಡೆ ದಿನಾಂಕ ಘೋಷಣೆ
ಡಾರ್ಲಿಂಗ್ ಕೃಷ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಲವ್ ಮಾಕ್ಟೇಲ್ 3 ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ.ಈ ಸಿನಿಮಾವನ್ನು ಡಾರ್ಲಿಂಗ್ ಕೃಷ್ಣಅವರು ಸ್ವತಃ ನಿರ್ದೇಶನ ಮಾಡಿದ್ದು ಕೃಷ್ಣ ಟಾಕೀಸ್ ನಿರ್ಮಾಣದಲ್ಲಿ ಮೂಡಿಬರುತ್ತಿದೆ.ಕೃಷ್ಣ ಟಾಕೀಸ್ ಕೂಡ ಡಾರ್ಲಿಂಗ್ ಕೃಷ್ಣಹಾಗು ಮಿಲನ ನಾಗರಾಜ್ ಅವರ ನಿರ್ಮಾಣ ಸಂಸ್ಥೆಯಾಗಿದೆ.
ಏಪ್ರಿಲ್ 10 ರಂದು ರಾಜ್ಯದಾದ್ಯಂತ ಸಿನಿಮಾ ಬಿಡುಗಡೆಯಾಗಲಿದ್ದು ,ಈ ಬಾರಿ ಚಿತ್ರವು ತಂದೆ ಮಗಳ ಬಾಂಧವ್ಯವನ್ನು ಕೇಂದ್ರಿಕೃತವನ್ನಾಗಿರಿಸಿಕೊಂಡಿರುವ ಸಿನಿಮಾ ಆಗಿದೆ.