ವಿವಾದದ ಸುಳಿಯಲ್ಲಿ ಲೂಸ್ ಮಾದ ಯೋಗಿ 50ನೇ ಸಿನಿಮಾ

ಇತ್ತೀಚಿಗಷ್ಟೇ ನಟ ಯೋಗಿ ಅಭಿನಯದ ರೋಜಿ ಸಿನಿಮಾ ಸೆಟ್ಟೇರಿದೆ…ಸಿನಿಮಾ ಫಸ್ಟ್ ಲುಕ್ ಸಖತ್ತಾಗಿದೆ ಅನ್ನೋ ರೆಸ್ಪಾನ್ಸ್ ಕೂಡ ಸಿಕ್ಕಿದ್ದು ಡಾಲಿ ಧನಂಜಯ ಗೆಳೆಯನ ಸಿನಿಮಾ ಫಸ್ಟ್ ಲುಕ್ ರಿವಿಲ್ ಮಾಡಿ ಆಲ್ ದ ಬೆಸ್ಟ್ ಹೇಳಿದ್ರು…ಈ ಸುದ್ದಿ ಜೋರಾಗ್ತಿದ್ದಂತೆ ಸಿನಿಮಾ ಟೈಟಲ್ ಕಾಂಟ್ರವರ್ಸಿ ಆಗ್ತಿದೆ ಅನ್ನೋ ಸುಳಿವು ಸಿಕ್ತಿದೆ….

ನಿರ್ಮಾಪಕ ರಮೇಶ್ ರೆಡ್ಡಿ ಅವ್ರ ಇತ್ತೀಚಿಗಷ್ಟೆ ಒಂದು ಪ್ರೆಸ್ ನೋಟ್ ರಿಲೀಸ್ ಮಾಡಿದ್ದಾರೆ…(Rosy 45) ಶೀರ್ಷಿಕೆ ಸೂರಜ್ ಪ್ರೊಡಕ್ಷನ್ಸ್ ಗೆ ಸೇರಿದ್ದು…ಸೂರಜ್ ಪ್ರೊಡಕ್ಷನ್ಸ್ ಲಾಂಛನದ ಮೂಲಕ “ರೋಸಿ 45″(Rosy 45) ಶೀರ್ಷಿಕೆಯನ್ನು ನೊಂದಾಯಿಸಲಾಗಿತ್ತು. ಈಗ ಡಿ.ವೈ.ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೂ “ರೋಸಿ” ಎಂದು ಶೀರ್ಷಿಕೆ ಇಡಲಾಗಿದೆ. ಈ ವಿಷಯವನ್ನು ಕರ್ನಾಟಕ ವಾಣಿಜ್ಯ ಮಂಡಳಿ ಗಮನಕ್ಕೆ ತರಲಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮೊದಲು ಶೀರ್ಷಿಕೆ ನೊಂದಾಯಿಸಿದವರು ಮಾತ್ರ ಶೀರ್ಷಿಕೆ ಬಳಸಿಕೊಳ್ಳಬಹುದು ಎಂದು ಹೇಳಿದೆ. ಹಾಗಾಗಿ ಸೂರಜ್ ಪ್ರೊಡಕ್ಷನ್ಸ್ ಗೆ “ರೋಸಿ 45″(Rosy 45) ಶೀರ್ಷಿಕೆ ಸೇರಿದೆ. ಇನ್ನು ಮುಂದೆ ಯಾರು ಕೂಡ “ರೋಸಿ” ಶೀರ್ಷಿಕೆ ಬಳಸುವ ಹಾಗಿಲ್ಲ ಹಾಗೂ ಶೀರ್ಷಿಕೆ ಪಕ್ಕದಲ್ಲಿ ಬೇರೆ ಪದ ಹಾಗೂ ನಂಬರ್ ಗಳನ್ನಾಗಲಿ ಸೇರಿಸಿಕೊಂಡು ಸಹ ಬಳಸುವ ಹಾಗಿಲ್ಲ ಎಂದು “ರೋಸಿ 45” (Rosy 45) ಚಿತ್ರದ ನಿರ್ಮಾಪಕ ರಮೇಶ್ ರೆಡ್ಡಿ ಹಾಗೂ ನಿರ್ದೇಶಕ ಅರ್ಜುನ್ ಜನ್ಯ ತಿಳಿಸಿದ್ದಾರೆ…
ಆದ್ರೆ ಈ ಟೈಟಲ್ ಇಂಗ್ಲೀಷ್ ನಲ್ಲಿ ಒಂದೇ ಸೌಂಡಿಂಗ್.. ಆದ್ರೆ ಕನ್ನಡದಲ್ಲಿ ರಮೇಶ್ ರೆಡ್ಡಿ ಅವ್ರು ರೋಸಿ ಅಂತ ಬಳಕೆ ಮಾಡಿಕೊಂಡ್ರೆ ಯೋಗಿ ಸಿನಿಮಾ ನಿರ್ಮಾಪಕರು ರೋಜಿ ಅಂತ ಬಳಸಿಕೊಂಡಿದ್ದಾರೆ ಸದ್ಯ ವಾಣಿಜ್ಯ ಮಂಡಳಿ ರಮೇಶ ರೆಡ್ಡಿ ಅವ್ರಿಗೆ ಟೈಟಲ್ ಬಳಕೆ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದೆ..ಈಗ ಯೋಗಿ ತಮ್ಮ ಸಿನಿಮಾ ಟೈಟಲ್ ಬದಲಾವಣೆ ಮಾಡ್ಕೋತಾರೆ ಕಾದು ನೋಡಬೇಕಿದೆ….