ಪಿಚ್ಚರ್ EXCLUSIVE ಪಿಚ್ಚರ್ UPDATE

ಲೋಹಿತಾಶ್ವ ಸ್ಥಿತಿ ಕ್ರಿಟಿಕಲ್ -ವೈದ್ಯರು ಹೇಳೋದೇನು ?

ಲೋಹಿತಾಶ್ವ ಸ್ಥಿತಿ ಕ್ರಿಟಿಕಲ್ -ವೈದ್ಯರು ಹೇಳೋದೇನು ?
  • PublishedOctober 12, 2022

ಹಿರಿಯ ನಟ ಲೋಹಿತಾಶ್ವ ಸ್ಥಿತಿ ಗಂಭೀರವಾಗಿದ್ದು ಕಳೆದ ಎರಡು ದಿನದಿಂದ ಸಾಗರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ..ಈಗಾಗಲೇ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿರೋ ಲೋಹಿತಾಶ್ವ ಅವ್ರ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ ..

ಸಾಗರ್ ಆಸ್ಪತ್ರೆ ವೈದ್ಯರಾದ ನಾರಾಯಣ ಮೂರ್ತಿ, ನ್ಯೋರೊಲಾಜಿಸ್ಟ್ ಕಲ್ಯಾಣಿ ಹಾಗೂ ಆಸ್ಪತ್ರೆಯ ಡೈರೆಕ್ಟರ್ ವೆಂಕಟೇಶ್, ಲೋಹಿತಾಶ್ವ ಅವ್ರ ಆರೋಗ್ಯ ಸ್ಥಿತಿ ಬಗ್ಗೆ ಮಾತನಾಡಿದ್ದಾರೆ …ಲೋಹಿತಾಶ್ವ ಅವ್ರ ಸ್ಥಿತಿ ಗಂಭೀರವಾಗಿದೆ.. ಅವ್ರಿಂದ ಮೀನಿಂಗ್ ಫುಲ್ ರೆಸ್ಪಾನ್ಸ್ ಇಲ್ಲ..ಎಮ್ ಆರ್ ಐ ನೋಡಿದ್ರೆ ಡಿಫಿಕಲ್ಟ್ ಇದೇ ಅನ್ನೋದು ಗೊತ್ತಾಗ್ತಿದೆ…ಮಿರಾಕಲ್ ಆದ್ರೆ ಮೆಡಿಷನ್ಗೆ ಸರಿ‌ಹೋಗ್ತಾರೆ ಅಷ್ಟೇ….

95 ಪರ್ಸೆಂಟ್ ಬ್ರೈನ್ ವರ್ಕ್ ಆಗ್ತಿಲ್ಲ… ಚಾನ್ಸಸ್ ತುಂಬಾ ಲೆಸ್ ಇದೆ ಅನ್ನೋದನ್ನ ವೈದ್ಯರು ತಿಳಿಸಿದ್ದಾರೆ ..ಕಳೆದ 24 ಗಂಟೆಯಿಂದ 48 ಗಂಟೆ ಅಬ್ಸರ್ವೆಷನ್ ಅಲ್ಲಿ ಇಟ್ಟಿದ್ದೀವಿ..ತುಂಬಾ ಲೆಸ್ ಪಾಸಿಬಲ್ ಇದೇ
ಈ‌ ರೀತಿ ವಿಚಾರದಲ್ಲಿ ಒಮ್ಮೊಮ್ಮೆ ಪೇಶೆಂಟ್ ರಿಕವರ್ ಆಗೋ ಚಾನ್ಸಸ್ ಇರುತ್ತೆ.. ಹೀಗಾಗಿ ನಾಡಿದ್ದು ಡಿಸಿಷನ್ ತೆಗೆದುಕೊಳ್ತಿವಿ ಎಂದಿದ್ದಾರೆ ಡಾ ಕಲ್ಯಾಣಿ…

ಇನ್ನು ಡಾ.ವೆಂಕಟೇಶ್ ವಿಕ್ರಮ್ ಈ ಬಗ್ಗೆ ಮಾತಾನಾಡಿದ್ದು ಪಿಟ್ಸ್ ಬಂದ್ಹಾಗ ಔಷಧಿ ಕೊಟ್ಟಿದ್ವಿ,
24 ಗಂಟೆಯಲ್ಲಿ ರಿಕವರ್ ಆಗ್ತಾರ ಇಲ್ವಾ ಅನ್ನೋದು ಗೊತ್ತಾಗುತ್ತೆ…ಅದರೊಟ್ಟಿಗೆ ಹೃದಯಾಘಾತ ಅವ್ರಿಗೆ ಯಾಕೆ ಆಯ್ತು ಅಂತ ಗೊತ್ತಾಗಲಿಲ್ಲ..ಆಸ್ಪತ್ರೆ ಆಗಿದ್ರಿಂದ ಸಡನ್‌ ಆಗಿ‌ ಅಲ್ಲಿಯೇ ಚಿಕಿತ್ಸೆ ನೀಡಿದ್ವಿ ಐಸಿಯು ನಲ್ಲಿಟ್ಟು ಚಿಕಿತ್ಸೆ ಕೊಟ್ವಿ..ಈಗ ಸದ್ಯಕ್ಕೆ ಮೆಡಿಷನ್ ಸ್ವಲ್ಪ ಕಡಿಮೆ ಮಾಡ್ತ ಬಂದಿದ್ದೀವಿ.. ಹೃದಯ ಬಡಿತ , ಬಿಪಿ, ಯುರಿನ್ ಔಟ್ ಪುಟ್ ಎಲ್ಲಾ ಕರೆಕ್ಟ್ ಆಗಿದೆ ಹೀಗಾಗಿ ಅಬ್ಸರ್ವೆಷನ್ ಅಲ್ಲಿ ಇಟ್ಟಿದ್ದೀವಿ
ಅವ್ರು ಆಸ್ಪತ್ರೆಗೆ ಬಂದ್ಹಾಗ ಚಳಿ, ಕೆಮ್ಮು ಇತ್ತು ಯುರಿನ್ ಇನ್ ಫೆಕ್ಷನ್ ಇತ್ತು.. ಆ್ಯಂಟಿ ಬಯಾಟಿಕ್ ಕೊಡ್ತಿದ್ವಿ ಅದ್ರಿಂದ ತೊಂದ್ರೆ ಆಗಲ್ಲ .. ಅದಾದ ನಂತ್ರ ಕಾರ್ಡಿಯಕ್ ಅರೆಸ್ಟ್‌ ಆಯ್ತು…

ಕಾರ್ಡಿಯಕ್ ಅರೆಸ್ಟ್ ಯಾಕಾಯ್ತು ಅಂತಾ ನಮಗೂ ಪ್ರಶ್ನೆಯಾಗಿದೆ…ಅವ್ರು ಮೊದಲೇ ಹಾರ್ಟ್ ಪೇಸೆಂಟ್ ಇದ್ರಿಂದಾನೇ ಹೃದಯಾಘಾತ ಆಯ್ತು ಅಂತ ಹೇಳೋಕೆ ಆಗಲ್ಲ..ಒಟ್ನಲ್ಲಿ ಲೋಹಿತಾಶ್ವ ಅವ್ರ ಸ್ಥಿತಿ ತೀರ ಗಂಭೀರವಾಗಿರೋದಂತು ಸತ್ಯ ಅನ್ನೋದು ವೈದ್ಯರ ಹೇಳಿಕೆಯಿಂದ ಗೊತ್ತಾಗುತ್ತಿದೆ….

ಲೋಕೇಶ್ ಪ್ರಕಾಶ್

Written By
Kannadapichhar