‘ಲೈಫ್ today’ ಸಿನ್ಮಾದ ಎರಡನೇ ಸಾಂಗ್ ರಿಲೀಸ್
ನಿರ್ದೇಶಕರಾದ ಕಾಂತ ಕನ್ನಲ್ಲಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ, ಕಿರಣ್ ಆದಿತ್ಯ ಹಾಗೂ ಲೇಖ ಚಂದ್ರ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಹೊಸ ಸಿನಿಮಾ ‘ಲೈಫ್ today’ ಚಿತ್ರದ ಎರಡನೇ ಹಾಡು ‘ನೀನೆ ನೀನೆ ನೋಡಲ್ಲಿ’ ನಿನ್ನೆ ಲಹರಿ ಮ್ಯೂಸಿಕ್ ಯೌಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಕಾಣಿದೆ.ಈ ಹಾಡನ್ನು ಕವಿ ರಾಜ್ ಅವರು ಬರೆದಿದ್ದು, ಅನೇಕ ಸೂಪರ್ ಹಿಟ್ ಹಾಡುಗಳಿಗೆ ಸಂಗೀತ ನೀಡಿರುವ ಶ್ರೀಧರ್ ವಿ ಸಂಭ್ರಮ್ ಅವರು ಹಾಡಿಗೆ ಸಂಗೀತ ನೀಡಿದ್ದಾರೆ. ಜತೆಗೆ ಶ್ವೇತಾ ಮೋಹನ್ ಅವರು ಹಾಡಿಗೆ ಧನಿಯಾಗಿದ್ದಾರೆ.