News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

‘ಮಾರ್ಕ್’ ಗೆ ಸ್ಯಾಂಡಲ್ ವುಡ್ ದಿಗ್ಗಜರ ಸಾಥ್!

‘ಮಾರ್ಕ್’ ಗೆ ಸ್ಯಾಂಡಲ್ ವುಡ್ ದಿಗ್ಗಜರ ಸಾಥ್!
  • PublishedDecember 7, 2025

ಮಾರ್ಕ್’ ಚಿತ್ರದ ಬೆಂಬಲಕ್ಕೆ ಸ್ಯಾಂಡಲ್ ವುಡ್ ನ ದಿಗ್ಗಜರು.ಯಾರು ಆ ದಿಗ್ಗಜರು? ಅವರು ಚಿತ್ರದ ಟ್ರೈಲರ್ ನೋಡಿ ಏನಂದ್ರು ಅನ್ನೋದಕ್ಕೆ ಉತ್ತರ ಇಲ್ಲಿದೆ

ವಿಜಯ ಕಾರ್ತಿಕೆಯ ನಿರ್ದೇಶಿಸಿರುವ ಸುದೀಪ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಮಾರ್ಕ್’ ಚಿತ್ರದ ಟ್ರೈಲರ್ ರಿಲೀಸ್ ಹಾಗೂ ಸುದ್ದಿಗೋಷ್ಠಿ ಇಂದು ನಡೆಯಿತು.

ಈ ಕಾರ್ಯಕ್ರಮಕ್ಕೆ ಕನ್ನಡ ಸಿನಿಮಾ ಕ್ಷೇತ್ರಕ್ಕೆ ದೊಡ್ಡ ಕೊಡುಗೆಯನ್ನು ಕೊಟ್ಟಿರುವ ನಟ, ನಿರ್ದೇಶಕರಾದಂತಹ ರಾಕ್ ಲೈನ್ ವೆಂಕಟೇಶ್ ಹಾಗೂ ಜೋಗಿ ಪ್ರೇಮ್ ಅವರು ಆಗಮಿಸಿ ಚಿತ್ರ ತಂಡಕ್ಕೆ ಶುಭಕೋರಿದರು.

ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ರಾಕ್ ಲೈನ್ ಅವರು “ಮಾರ್ಕ್ ಸಿನಿಮಾ ದೊಡ್ಡ ಹಿಟ್ ಆಗಿ ಹೊರ ಹೊಮ್ಮತ್ತೆ. ಆ ವಿಚಾರದಲ್ಲಿ ದೂಸ್ರಾ ಮಾತಿಲ್ಲ“. ಅದರ ಜೊತೆಗೆ ಕನ್ನಡ ಚಿತ್ರ ರಂಗದ ಬಗ್ಗೆ ಮಾತನಾಡಿದ ಅವರು “ಸಿನಿಮಾ ಕ್ಷೇತ್ರದಲ್ಲಿ ಬಹಳ ಬದಲಾವಣೆಗಳು ಆಗಿದೆ, ಓಟಿಟಿ ಬಂದ ಮೇಲೆ ಇನ್ನಷ್ಟು ಬದಲಾವಣೆಗಳು ಕಂಡವು” ಎಂದು ಹೇಳಿದರು

ಜೋಗಿ ಪ್ರೇಮ್ ಚಿತ್ರದ ಟ್ರೈಲರ್ ವೀಕ್ಷಿಸಿ “ಚಿತ್ರದಲ್ಲಿ ಫೈಟಿಂಗ್ ಸೀನ್ ಸಕ್ಕತ್ತಾಗಿ ಮೂಡಿದೆ ಮಾರ್ಕ್ ಜೊತೆ 45 ಕೂಡ ಬರ್ತಿದೆ ಒಂದು ರೀತಿಲಿ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹಬ್ಬ ನಡೀತಿದೆ ಅನ್ನಬಹುದು “ ಎಂದು ಅಭಿಪ್ರಾಯಪಟ್ಟರು.

Written By
Kannada Picchar

Leave a Reply

Your email address will not be published. Required fields are marked *