new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಲ್ಯಾಂಡ್ ಲಾರ್ಡ್ ಟ್ರೈಲರ್ ಬಿಡುಗಡೆ.

ಲ್ಯಾಂಡ್ ಲಾರ್ಡ್ ಟ್ರೈಲರ್ ಬಿಡುಗಡೆ.
  • PublishedJanuary 18, 2026

ಸಲಗ ವಿಜಯ್, ರಾಜ್ ಬಿ ಶೆಟ್ಟಿ, ರಚಿತಾ ರಾಮ್, ಶಿಶಿರ್, ರಿತನ್ಯ ಹೀಗೆ ಅನೇಕ ಕಲಾವಿದರು ನಟಿಸಿರುವ ಸಿನಿಮಾ ಲ್ಯಾಂಡ್ ಲಾರ್ಡ್. ನಿರ್ದೇಶಕ ಜಡೇಶ್ ಅವರ ಸಾರಥ್ಯದಲ್ಲಿ ಬಂದಿರುವ ಈ ಸಿನಿಮಾದ ಟ್ರೈಲರ್ ಲಾಂಚ್ ಇಂದು ನಡೆಯಿತು.ಟ್ರೈಲರ್ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಸಿನಿ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆಗಳು ಲಭಿಸಿದೆ. ಚಿತ್ರದಂಡವು ಸಿನಿಮಾವು ಪಕ್ಕ ಹಳ್ಳಿ ಸೊಗಡಿನ ಕಥೆಯನ್ನು ಹೊಂದಿದೆ ಎಂದು ತಿಳಿಸಿದ್ದರು. ಟ್ರೇಲರ್ ನೋಡಿದಾಗ ಆ ಫೀಲ್ ಸಿಗುತ್ತದೆ. ಹಳ್ಳಿ ಭಾಷೆ,ಅಲ್ಲಿನ ಜೀವನವನ್ನು ಚೆನ್ನಾಗಿ ಫ್ರೇಮ್ ನಲ್ಲಿ ತೋರಿಸಿದ್ದಾರೆ.

ಈ ಸಿನಿಮಾ ಅಧಿಕಾರ ಮತ್ತು ಶೋಷಣೆ ನಡುವಿನ ಸಂಘರ್ಷದ ಕಥೆಯನ್ನು ಹೇಳಲಿದೆ ಎನ್ನುವುದನ್ನು ನಾವು ಟ್ರೈಲರ್ ನಲ್ಲೆ ತಿಳಿಯಬಹುದು. ಲ್ಯಾಂಡ್ ಲಾರ್ಡ್ ಹಾಗೂ ಸಾಮಾನ್ಯ ಜನರ ನಡುವಿನ ಹೋರಾಟವೇನಿದೆ ಇದು ಸಿನಿಮಾದ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ.ಸಲಗ ವಿಜಯ್ ಅವರ ರಗಡ್ ಲುಕ್, ರಾಜ್ ಶೆಟ್ಟಿ ಅವರ ವಿಲನ್ ಲುಕ್, ರಚಿತಾ ರಾಮ್ ಅವರ ಪವರ್ ಫುಲ್ ಪಾತ್ರ ಇವೆಲ್ಲವೂ ಸಿನಿಮಾದ ಮೇಲೆ ನಿರೀಕ್ಷೆಯನ್ನು ಹೆಚ್ಚಿಸಿದೆ.

ಇನ್ನು ಪ್ರತಿಯೊಂದು ಪಾತ್ರಗಳಿಗೆ ನೀಡಿರುವ ಗೆಟಪ್, ಹಳ್ಳಿ ಪರಿಸರವನ್ನು ಸೂಚಿಸುವ ಮೇಕಪ್, ಜೊತೆಗೆ ಸಿನಿಮಾದ ಹಿನ್ನೆಲೆ ಸಂಗೀತ ವಿಭಿನ್ನ ವೈಬ್ ಅನ್ನು ನೀಡುತ್ತಿದೆ. ಇದನ್ನು ನೋಡಿರುವ ಅಭಿಮಾನಿಗಳು ಟ್ರೈಲರ್ ಹೀಗಿರಬೇಕಾದರೆ ಇನ್ನು ಮೂವಿ ಹೇಗಿರಬೇಡ ! ಎಂದು ಹೇಳುತ್ತಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *