ಇಂದು ಬಿಡುಗಡೆ ಕಂಡ ʼಲ್ಯಾಂಡ್ ಲಾರ್ಡ್ʼ ಸಿನಿಮಾ
ದುನಿಯಾ ವಿಜಯ್ (ಸಲಗ ವಿಜಯ್ ), ರಾಜ್ ಬಿ.ಶೆಟ್ಟಿ ಹಾಗು ರಚಿತಾ ರಾಮ್ ಅವರಂತಹ ಅದ್ಭುತ ತಾರಾಗಣ ಹೊಂದಿರುವ ಲ್ಯಾಂಡ್ ಲಾರ್ಡ್ ಚಿತ್ರದ ಟ್ರೈಲರ್ ಇದೀಗಾಗಲೇ ಬಿಡುಡೆಯಾಗಿದ್ದು ಬಾರಿ ಸಂಚಲನವನ್ನು ಮೂಡಿಸಿತ್ತು.ನಿರ್ದೇಶಕ ಜಡೇಶ್ ಕುಮಾರ್ ಹಂಪಿ ಅವರ ಸಾರಥ್ಯದಲ್ಲಿ ಮೂಡಿಬಂದಿರುವ ಈ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಾಗಿತ್ತು.
ಜಡೇಶ್ ಕುಮಾರ್ ಅವರು ಈ ಹಿಂದೆ ʼಗುರು ಶಿಷ್ಯರುʼ, ʼಕಾಣೆಯಾದವರ ಬಗ್ಗೆ ಪ್ರಕಟಣೆʼ ಯಂತಹ ವಿಭಿನ್ನ ಸಿನಿಮಾಗಳನ್ನು ನೀಡಿದವರು.ಹಾಗಾಗಿ ಲ್ಯಾಂಡ್ ಲಾರ್ಡ್ ಕೂಡ ಒಂದು ಭರವಸೆ ಮೂಡಿಸಿರುವ ಚಿತ್ರ.ಈ ಸಿನಿಮಾ ಇಂದು ರಾಜ್ಯದಾದ್ಯಂತ ಬಿಡುಗಡೆ ಹೊಂದಿದೆ.