ಕಾಶಿಯಲ್ಲಿ ‘ಲಕ್ಷ್ಮೀಪುತ್ರ’ ಕ್ಲೈಮಾಕ್ಸ್ ಶೂಟ್!
‘ಲಕ್ಷ್ಮಿ ಪುತ್ರ’ ಸಿನಿಮಾದ ಕ್ಲೈಮಾಕ್ಸ್ ಚಿತ್ರೀಕರಣ ಇತ್ತೀಚಿಗಷ್ಟೇ ಕಾಶಿಯಲ್ಲಿ ನಡೆಯಿತು.ಚಿತ್ರದ ಕ್ಲೈಮಾಕ್ಸ್ ಅನ್ನು ಮೂರು ದಿನ ಶೂಟ್ ಮಾಡಿದ್ದು ಚಿಕ್ಕಣ್ಣ ಮತ್ತು ವಂದಿತಾ ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
ಇನ್ನು ಈ ಸಿನಿಮಾವನ್ನು ‘ಕಿಸ್’ ಫಿಲಂ ಖ್ಯಾತಿಯ ಎ.ಪಿ ಅರ್ಜುನ್ ನಿರ್ದೇಶಸುತ್ತಿದ್ದು, ತಮ್ಮದೇ ಎ.ಪಿ ಅರ್ಜುನ್ ಫಿಲ್ಮ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.ಈಗಾಗಲೇ ಚಿಕ್ಕಣ್ಣ ಅವರ ಫಸ್ಟ್ ಲುಕ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
ಚಿತ್ರದಲ್ಲಿ ದೊಡ್ಡ ತಾರ ಬಳಗವಿದ್ದು ಹಿರಿಯ ನಟಿ ತಾರ, ಕುರಿ ಪ್ರತಾಪ್, ಧರ್ಮಣ್ಣ ಹೀಗೆ ಅನೇಕ ಕಲಾವಿದರು ನಟಿಸುತ್ತಿದ್ದಾರೆ.ಚಿಕ್ಕಣ್ಣ ಫಸ್ಟ್ ಲುಕ್ ನೋಡಿದ ಸಿನಿಮಾ ಪ್ರಿಯರು ಚಿತ್ರದ ಮೇಲೆ ಭಾರಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.