new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಕೊರಿಯನ್ ಸಂಸ್ಕೃತಿ ಸ್ಪೂರ್ತಿ ಯನ್ನಾಗಿಸಿಕೊಂಡು ‘ಕೆ -ಪಾಪ್’ ಸಿನಿಮಾ

ಕೊರಿಯನ್ ಸಂಸ್ಕೃತಿ ಸ್ಪೂರ್ತಿ ಯನ್ನಾಗಿಸಿಕೊಂಡು ‘ಕೆ -ಪಾಪ್’  ಸಿನಿಮಾ
  • PublishedDecember 29, 2025

ಕೆ ಪಾಪ್, ಇದು ಪ್ರಪಂಚದಲ್ಲೇ ಒಂದು ಹೊಸ ಅಲೆಯನ್ನು ಸೃಷ್ಟಿಸಿರುವ ಇಂಡಸ್ಟ್ರಿ. ಹಾಡು, ಡಾನ್ಸ್, ಈ ಎರಡನ್ನು ಒಟ್ಟಿಗೆ ಪ್ರದರ್ಶಿಸುವ ಕಲೆ.ಈಗಾಗಲೇ ಬಿಟಿಎಸ್, ಬ್ಲಾಕ್ ಪಿಂಕ್, ಸೆವೆಂಟೀನ್ ಹೀಗೆ ಅನೇಕ ಗ್ರೂಪ್ ಜೊತೆಗೆ psy, ಎನ್ನುವಂತ ಸೋಲೋಇಸ್ಟ್ ಗಳು ಜಗತ್ತಿನಾದ್ಯಂತ ತಮ್ಮ ಸಂಗೀತಗಳ ಮೂಲಕ ಸದ್ದು ಮಾಡುತ್ತಿದ್ದಾರೆ.

ಇದೀಗ ಈ ಕೊರಿಯನ್ ಸಂಸ್ಕೃತಿ ಯನ್ನು ಸ್ಪೂರ್ತಿ ಯನ್ನಾಗಿಸಿಕೊಂಡು ಕೆ ಪಾಪ್ ಮೂಲಕ ಚಿತ್ರರಂಗದಲ್ಲಿ ನೂತನ ಅಲೆಯನ್ನು ಹೊತ್ತು ತರಲು ಹೊಸ ತಂಡ ರೆಡಿಯಾಗಿದೆ.

ಈಗಾಗಲೇ ಹೇಳಿದಂತೆ ಕೆ ಪಾಪ್ ಪ್ರಪಂಚದಲ್ಲಿ ಬಹಳ ಪ್ರಖ್ಯಾತಿ ಹೊಂದಿರುವ ರಂಗ. ಈ ಇಂಡಸ್ಟ್ರಿ ಹೇಗೆ ಪ್ರಭಾವ ಬೀರುತ್ತಿದೆ ಎನ್ನುವುದನ್ನು ತಿಳಿಸುವ ಒಂದು ಪ್ರಯತ್ನವನ್ನು ಈ ಚಿತ್ರ ತಂಡ ಮಾಡುತ್ತಿದೆ. ಕೆವಿನ್ ಲೂಕ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ ಇದಾಗಿದ್ದು ಲಾವಣ್ಯ ಅವರು ಕಥೆಯನ್ನು ಬರೆದಿದ್ದಾರೆ.

ಇದೀಗ ಚಿತ್ರ ತಂಡ ಟೈಟಲ್ ಅನಾವರಣ ಮಾಡಿ ಪ್ರೋಮೊವೊಂದನ್ನು ಬಿಡುಗಡೆ ಮಾಡಿದೆ.ಕೆ ಪಾಪ್ ಇಂಪಾಕ್ಟ್ ಜೊತೆಗೆ ಶನಿ ಮಹಾತ್ಮ, ಯಮ ರಾಜ ಎನ್ನುವ ಪಾತ್ರಗಳು ಇರುವುದರಿಂದ ಈ ಪಾತ್ರಗಳು ಸಿನಿಮಾದಲ್ಲಿ ಯಾಕೆ, ಹೇಗೆ ಬರ್ತಾರೆ ಎನ್ನುವುದೇ ಕುತೂಹಲದ ವಿಷಯ.

ಚಿತ್ರದಲ್ಲಿ ಗರುಡ ರಾಮ್, ವಿಷ್ಣು ಸೇರಿದಂತೆ ಹಲವು ನಟರು ಇದ್ದು ಹೊಸ ಕಲಾವಿದರ ದೊಡ್ಡ ಬಳಗವೇ ಇದೆ. ಇನ್ನು ಇದೊಂದು ಕನಸಿನಲ್ಲಿ ನಡೆಯುವ ಕಥೆಯಾಗಿದೆ. ಚಿತ್ರೀಕರಣ ಇನ್ನು ಶುರು ಮಾಡುವ ಕಾರಣ ಸುಮಾರು 60 ರಿಂದ 65 ದಿನಗಳ ಕಾಲ ಶೂಟಿಂಗ್ ಮಾಡಲಾಗುವುದು, ಇದರ ಜೊತೆಗೆ ಚಿತ್ರದಲ್ಲಿ 5-6 ಹಾಡುಗಳು ಇದೆ ಎನ್ನುವ ಮಾಹಿತಿಯನ್ನು ನಿರ್ದೇಶಕ ಕೆವಿನ್ ಲೂಕ್ ತಿಳಿಸಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *