ಪಿಚ್ಚರ್ UPDATE

ಹೊಗಳಿದ್ದಾ ? ತೆಗಳಿದ್ದಾ? ಕಿಚ್ಚನ ಟಾಂಗ್‌ ಗೆ ಶಾರುಖ್‌ ಫ್ಯಾನ್ಸ್‌ ಕನ್ಫ್ಯೂಸ್‌

ಹೊಗಳಿದ್ದಾ ? ತೆಗಳಿದ್ದಾ? ಕಿಚ್ಚನ ಟಾಂಗ್‌ ಗೆ ಶಾರುಖ್‌ ಫ್ಯಾನ್ಸ್‌ ಕನ್ಫ್ಯೂಸ್‌
  • PublishedFebruary 13, 2023

ನಟ ಕಿಚ್ಚ ಸುದೀಪ್‌ ಅವ್ರಿಗೆ ಬಾಲಿವುಡ್‌ ಸಿನಿಮಾರಂಗ ಹೊಸತೇನಲ್ಲ….ಈಗಾಗಲೇ ಬಿಗ್‌ ಬಿ ಜೊತೆ ಸಿನಿಮಾ ಮಾಡಿ ಸೈ ಎನ್ನಿಸಿಕೊಂಡು ಬಂದಿದ್ದಾರೆ ಕಿಚ್ಚ ಸುದೀಪ್‌ …ಸದ್ಯ ಕಿಚ್ಚ ಕ್ರಿಕೆಟ್‌ ನಲ್ಲಿ ಬ್ಯುಸಿ ಆಗಿದ್ದು ಕೆಸಿಸಿ ಕಪ್ ಗಾಗಿ ತಾಲೀಮು ನಡೆಸುತ್ತಿದ್ದಾರೆ..ಇತ್ತೀಚಿಗಷ್ಟೇ ಇದೇ ವಿಚಾರವಾಗಿ ಕಿಚ್ಚ ಸುದ್ದಿಗೋಷ್ಟಿ ಕರೆದಿದ್ರು ಆ ಸಮಯದಲ್ಲಿ ಕಿಚ್ಚನಿಗೆ ಹೊಸ ಸಿನಿಮಾ ಬಗ್ಗೆ ಪ್ರಶ್ನೆ ಕೇಳಲಾಯ್ತು…ಆಗ ಕಿಚ್ಚ ನಾನು ಅರ್ಜೆಂಟ್‌ ನಲ್ಲಿ ಡಬ್ಬ ತರಾ ಸಿನಿಮಾ ಮಾಡಲ್ಲ ಅಂದ್ರು…

ಅದ್ರ ಜೊತೆಗೆ ಪರೋಕ್ಷವಾಗಿ ಕಿಂಗ್‌ ಖಾನ್‌ ಶಾರುಖ್‌ ಕಾಲೆಳೆದ್ರು…2018ರಿಂದ ಸಿನಿಮಾನೇ ಮಾಡದವ್ರು ಈಗ ಎಂಥ ಸಿನಿಮಾ ಕೊಟ್ಟಿದ್ದಾರೆ ನೋಡಿದ್ರಾ….ಹಿಟ್‌ ಪ್ಲಾಪ್‌ ಸಿನಿಮಾಗಳನ್ನೇ ಕೊಡುತ್ತಾ ಬಂದಿದ್ರು ಈಗ ಇಡೀ ವಿಶ್ವನೇ ನೋಡುವಂತ ಸಿನಿಮಾ ಮಾಡಿ ಗೆದ್ದಿದ್ದಾರೆ ಎಂದಿದ್ದಾರೆ ಕಿಚ್ಚ ಸುದೀಪ್‌ …

ಸದ್ಯ ಕಿಚ್ಚ ಆಡಿದ ಮಾತುಗಳು ವೈರಲ್‌ ಆಗುತ್ತಿದ್ದು ಶಾರುಖ್‌ ಫ್ಯಾನ್ಸ್‌ ಸುದೀಪ್‌ ನಮ್‌ ಹೀರೋನಾ ಹೊಗಳಿದ್ದಾ? ಅಥವಾ ತೆಗಳಿದ್ದಾ ಅಂತ ಕನ್ಫ್ಯೂಸ್‌ ಆಗಿದ್ದಾರೆ…ಒಟ್ನಲ್ಲಿ ಈ ಮೂಲಕ ಕಿಚ್ಚನ ತಲೆಯಲ್ಲಿ ದೊಡ್ಡ ಸಿನಿಮಾ ಮಾಡ್ಬೇಕು ಅನ್ನೋದಿದೆ ಅಂತ ಮಾತ್ರ ಎಲ್ಲರಿಗೂ ಗೊತ್ತಾಗುತ್ತಿದೆ….

Written By
Kannadapichhar