ಕಿಚ್ಚನ ಚಪ್ಪಾಳೆ:ಗಿಲ್ಲಿಗೆ ಅನ್ಯಾಯ?
ಬಿಗ್ ಬಾಸ್ ಕಿಚ್ಚನ ಪಂಚಾಯಿತಿ ಅಂದ್ರೆ ಎಲ್ಲರು ಎದುರು ನೋಡುವ ಎಪಿಸೋಡ್ .ಸ್ಪರ್ಧಿಗಳು ಎಲ್ಲಿ ಎಡವುತ್ತಿದ್ದಾರೆ,ಎಲ್ಲಿ ತಪ್ಪು ನಡೆದಿದೆ ಹೀಗೆ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಿ ವೀಕ್ ಅಲ್ಲಿ ಯಾರು ಉತ್ತಮವಾಗಿ ಆಡಿದ್ದಾರೆ ? ಎಂದು ಹೇಳಿ ಅವರಿಗೆ ಪ್ರಶಂಸೆ ನೀಡುವ ವಾರ.ಆದ್ರೆ ಇದೇ ಎಪಿಸೋಡ್ ಗಳ ಬಗ್ಗೆ ಅನೇಕ ಅಸಮಧಾನಗಳು ಕಾಣ ಸಿಕ್ಕವು.ಅದು ಅಶ್ವಿನಿ ಹಾಗು ಜಾನ್ವಿ ಯವರು ಗೆಜ್ಜೆ ವಿಚಾರದಲ್ಲಿ ರಕ್ಷಿತಾ ಅವರನ್ನು ಕುಗ್ಗುವಂತೆ ಮಾಡಿದ ಪ್ಲ್ಯಾನ್ ಬಗ್ಗೆ ಕಿಚ್ಚ ಸರಿಯಾದ ರೀತಿ ಕ್ಲಾಸ್ ತೆಗೆದುಕೊಂಡಿಲ್ಲವೆನ್ನುವ ವಿಚಾರದಿಂದ ಹಿಡಿದು ಕೆಲವೊಂದು ಸನ್ನಿವೇಶಗಳನ್ನು ಸುದೀಪ್ ಅವರು ಅಂದು ಕೊಂಡ ಹಾಗೆ ಹ್ಯಾಂಡಲ್ ಮಾಡಲಿಲ್ಲ ಎನ್ನುವ ವಿಚಾರದವರೆಗೂ ಆಕ್ಷೇಪಗಳು ,ಅಸಮಾಧಾನಗಳು ಕಂಡವು.
ಆದರೆ ಮೊನ್ನೆ ನದೆದ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ ಜನಗಳಲ್ಲಿ ಹಲವಾರು ಪ್ರಶ್ನೆಗಳನ್ನು ಮೂಡಿಸಿದೆ.ಹಾಗಾದರೆ ಸೋಷಿಯಲ್ ಮೀಡಿಯಾದಲ್ಲಿ ಅಷ್ಟು ಡಿಸ್ಕಶನ್ ಗೆ ಗುರಿಯಾದ ವಿಷಯ ಯಾವುದು ಎಂದು ನೋಡಿದರೆ.ಅದು ಇಡೀ ಸೀಸನ್ ನ ಕಿಚ್ಚನ ಚಪ್ಪಾಳೆ.ಹೌದು.ಇಡೀ ವಾರದ ಕಿಚ್ಚನ ಚಪ್ಪಾಳೆ ಅಂದ್ರೆನೆ ಅದಕ್ಕಿರುವ ಘನತೆ,ಗೌರವವೇ ಬೇರೆ. ಸ್ಪರ್ಧಿಗಳು ವಾರ ಪೂರ್ತಿ ತಮ್ಮ ಎಲ್ಲಾ ಎನರ್ಜಿನೂ ಹಾಕಿ ಸುದೀಪ್ ಸರ್ ಇಂದ ಭೇಷ್ ಅನ್ನಿಸ್ಕೋ ಬೇಕು ಅಂದುಕೊಂಡು ಇರ್ತಾರೆ.ಅದೇ ವಾರದ ಕಿಚ್ಚನ ಚಪ್ಪಾಳೆ ಇಷ್ಟು ಕ್ರೇಜ್ ಇರ್ಬೇಕಾದ್ರೆ ಇನ್ನು ಇಡೀ ಸೀಸನ್ ಚಪ್ಪಾಳೆ ಅಂದ್ರೆ ಅದಕ್ಕೆ ಇರುವ ಗೌರವ,ಘನತೆ ಎಲ್ಲವೂ ಹೈ ಲೆವೆಲ್ ಅಲ್ಲಿ ಇರುತ್ತೆ.
ಈ ಸೀಸನ್ ಕೂಡ ಜನರ ಎಕ್ಸ್ಪೆಕ್ಟೇಷನ್ ಬೇರೆ ರೇಂಜ್ಗೆ ಇತ್ತು.ಸುದೀಪ್ ಅವರು ಈ ಬಾರಿ ಆ ಚಪ್ಪಾಳೆನ ಧೃವಂತ್ ಅವ್ರಿಗೆ ನೀಡಿದ್ರು.ಆದ್ರೆ ನೆಟ್ಟಿಗರ ಪ್ರಕಾರ “ಧೃವಂತ್ ಅವ್ರು ಯಾವ ಕಡೆಯಿಂದ ಜನರಿಗೆ ಮನೋರಂಜನೆ ನೀಡಿದ್ದಾರೆ?” ಎನ್ನುವ ಪ್ರಶ್ನೆಯನ್ನು ಕೇಳಿದ್ದಾರೆ.ಜತೆಗೆ “ಕಿಚ್ಚನ ಚಪ್ಪಾಳೆ ಮೇಲೆ ಇದ್ದಿದ್ದ ಗೌರವವು ಹೋಗಿದೆ” “ಇಡೀ ಸೀಸನ್ ನೋಡಿದ್ರೆ ಜನರನ್ನು ನಗಿಸಿದ್ದು ಗಿಲ್ಲಿ,ಧೃವಂತ್ ಅವ್ರು ಯಾವ ರೀತಿ ಜನಗಳಿಗೆ ಮನೋರಂಜನೆ ಕೊಟ್ಟಿದ್ದಾರೆ?” ಎಂದು ಪ್ರಶ್ನಿಸಿದ್ದಾರೆ.”ನೂರು ದಿನ ನಗಿಸೋರಿಗೆ ಬೆಲೆ ಇಲ್ಲ,ನಾಟಕ ಮಾಡೋರಿಗೆ ಬೆಲೆ” ಎಂದೆಲ್ಲಾ ಕಾಮೆಂಟ್ಸ್ ಮಾಡಿದ್ದಾರೆ.
ಒಟ್ನಲ್ಲಿ ಸಾಮಾನ್ಯವಾಗಿ ಬಿಗ್ ಮನೆಯಲ್ಲಿ ಸುದೀಪ್ ಅವರ ಮಾತಿಗೆ ಹೆಚ್ಚಿನ ಬೆಲೆ ಇದೆ ಅದು ಸ್ಪರ್ಧಿಗಳಾಗಲಿ ,ವೀಕ್ಷಕರಾಗಲಿ ಕಿಚ್ಚನ ತೀರ್ಪು,ಮಾತು ಎಲ್ಲವನ್ನು ಪ್ರಶಂಸಿಸುತ್ತಾ ಬಂದಿದ್ದಾರೆ.ಈ ಸಲ ಕಿಚ್ಚ ನೀಡುತ್ತಿರುವ ತೀರ್ಪಿನ ಮೇಲೆಯೇ ಜನರು ಸಂಶಯ ವ್ಯಕ್ತ ಪಡಿಸಿದ್ದಾರೆ.