new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಬಿಬಿಕೆ 12 ಅಂತ್ಯ : ಕಿಚ್ಚನ ಸ್ವೀಟ್ ಸಂದೇಶ

ಬಿಬಿಕೆ 12 ಅಂತ್ಯ : ಕಿಚ್ಚನ ಸ್ವೀಟ್ ಸಂದೇಶ
  • PublishedJanuary 18, 2026

ಬಿಗ್ ಬಾಸ್ 12 ರ ಅವೃತ್ತಿ ಇಂದು ಮುಕ್ತಾಯವಾಗಲಿದೆ.ಈ ಬಿಗ್ ಬಾಸ್ ಕನ್ನಡದ ಒಂದು ಅತೀ ದೊಡ್ಡ ಭಾಗ ಅಂದ್ರೆ ಕಿಚ್ಚ ಸುದೀಪ್ ಅವರು. 11 ಸೀಸನ್ ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿರುವ ಹೆಗ್ಗಳಿಕೆ ಸುದೀಪ್ ಅವರದ್ದು,ಇದೀಗ 12 ನೇಯ ಸೀಸನ್ ಅನ್ನು ನಡೆಸಿಕೊಡುತ್ತಿರುವ ಕಿಚ್ಚ ಅವರು ಇದೀಗ ಒಂದು ಮನ ಮಿಡಿಯುವ ಪೋಸ್ಟ್ ಒಂದನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

ಹಾಗೆಯೇ… ಇಂದಿನ ಸೂರ್ಯಾಸ್ತದೊಂದಿಗೆ #BBK12 ಗೆ ತೆರೆ ಬೀಳಲಿದೆ. ಬೆಳವಣಿಗೆ ಮತ್ತು ವೈಭವದ ಅದ್ಭುತ ಪ್ರಯಾಣವಾದ ಈ ಗಮನಾರ್ಹ ಸೀಸನ್, ಪ್ರತಿ ಸೀಸನ್‌ನಲ್ಲೂ ಬಿಗ್‌ಬಾಸ್‌ನ ಬೆಳವಣಿಗೆಗೆ ಸಾಕ್ಷಿಯಾಗಿದೆ. ಅಚಲವಾದ ಬೆಂಬಲ ನೀಡಿದ ಪ್ರತಿಯೊಬ್ಬ ನಿಷ್ಠಾವಂತ ವೀಕ್ಷಕರಿಗೆ ನನ್ನ ಆಳವಾದ ಕೃತಜ್ಞತೆಗಳು, ಎಲ್ಲಾ ಸ್ಪರ್ಧಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಈ ಸೀಸನ್‌ನ ವಿಜೇತರಿಗೆ ಪ್ರೀತಿಯ ಶುಭಾಶಯಗಳು.​ಈ ಬೃಹತ್ ಯಶಸ್ಸಿಗೆ ಕಾರಣರಾದ ಇಡೀ ತಾಂತ್ರಿಕ ತಂಡಕ್ಕೆ ಅಭಿನಂದನೆಗಳು. ನೀವಿಲ್ಲದೆ ಬಿಗ್‌ಬಾಸ್ ಇಲ್ಲವೇ ಇಲ್ಲ.​

ಹೊಸ ಸಂಚಿಕೆ #BBK13 ಆರಂಭವಾಗುವವರೆಗೆ ಬಿಗ್‌ಬಾಸ್‌ಗೆ ವಿಶ್ರಾಂತಿ ನೀಡಲು, ನಾವು ಈಗ ಗೌರವಪೂರ್ವಕವಾಗಿ ಬಾಗಿಲುಗಳನ್ನು ಮುಚ್ಚುತ್ತಿದ್ದೇವೆ.​ಪ್ರೀತಿ ಮತ್ತು ಅಪ್ಪುಗೆಯೊಂದಿಗೆ ‘ಕೆ ‘ ಎಂದು ಬರೆದು ಪೋಸ್ಟ್ ಮಾಡಿಕೊಂಡಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *