new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಕಿಚ್ಚನ ಮಾತಲ್ಲಿ ಕೋಪ ,ಯುದ್ದಕ್ಕೆ ಸಿದ್ದ ಎಂದಿದ್ದೇಕೆ?

ಕಿಚ್ಚನ ಮಾತಲ್ಲಿ ಕೋಪ ,ಯುದ್ದಕ್ಕೆ ಸಿದ್ದ ಎಂದಿದ್ದೇಕೆ?
  • PublishedDecember 21, 2025

ಕಿಚ್ಚ ಸುದೀಪ ನಟನೆಯ ‘ಮಾರ್ಕ್‌’ ಚಿತ್ರವು ಈ ತಿಂಗಳಿನಲ್ಲಿ ಬಿಡುಗಡೆಯಾಗುತ್ತಿರುವ ಬಹು ನಿರೀಕ್ಷಣೀಯ ಸಿನಿಮಾವಾಗಿದೆ.ಚಿತ್ರವು ಇದೇ ಡಿಸೆಂಬರ್‌ 25ಕ್ಕೆ ಬಿಡುಗಡೆಯಾಗಲಿದ್ದು ಕಿಚ್ಚನ ಅಭಿಮಾನಿಗಳು ಕಾತುರತೆಯಿಂದ ಮಾರ್ಕ್‌ ಬರುವಿಕೆಗೆ ಕಾಯುತ್ತಿದ್ದಾರೆ .ಚಿತ್ರದ ಪ್ರಚಾರದ ಅಂಗವಾಗಿ ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಪ್ರೀ – ರಿಲೀಸ್‌ ಇವೆಂಟ್‌ ನಿನ್ನೆ ನಡೆಯಿತು.ಈಗ ಸುದೀಪ್‌ ಅವರು ಕಾರ್ಯಕ್ರಮದಲ್ಲಿ ಮಾತನಾಡಿದ ಮಾತುಗಳು ಸಖತ್‌ ವೈರಲ್‌ ಆಗುತ್ತಿದೆ.

“2003 ರ ನಂತರ ಆದ್ಮೇಲೆ ಇವತ್ತೇ ಹುಬ್ಬಳ್ಳಿಯಲ್ಲಿ ಕಾರ್ಯಕ್ರಮಕ್ಕೆ ಬಂದಿರೋದು”.ಬಹಳ ಸುಂದರವಾಗಿ ಸ್ವಾಗತಿಸಿದಕ್ಕೆ ಧನ್ಯವಾದ ,ಮಾತಾಡೋಕೆ ತುಂಬಾ ಆಸೆ ಇದೆ ಆದ್ರೆ ಕಂಟ್ರೋಲ್ ಮಾಡ್ಕೊಂಡು ಮಾತಾಡ್ತೀನಿ” ಎಂದು ತಮ್ಮ ಮಾತುಗಳನ್ನು ಶುರು ಮಾಡಿದರು.

“ಡಿಸೆಂಬರ್ 25 ಕ್ಕೆ ಥಿಯೇಟರ್ ನಲ್ಲಿ ಒಂದು ಸಿನಿಮಾ ಬಿಡುಗಡೆಯಾಗುತ್ತೆ.ಆದರೆ ಹೊರಗಡೆ ಒಂದು ಪಡೆ ಯುದ್ಧಕ್ಕೆ ರೆಡಿಯಾಗ್ತಿದೆ.ಈ ವೇದಿಕೆಯಿಂದ ಹೇಳ್ತಿನಿ ಯುದ್ಧಕ್ಕೆ ಸಿದ್ದ, ಯಾಕೆಂದರೆ ನಾವು ನಮ್ಮ ಮಾತಿಗೆ ಬದ್ದ ” ಎಂದು ಹೇಳಿದ್ದಾರೆ.

ಇದೀಗ ಈ ಮಾತು ಬಾರಿ ಚರ್ಚೆಗೆ ಕಾರಣವಾಗಿದೆ. ಯಾರಿಗೆ? ಯಾವ ಕಾರಣಕ್ಕೆ ಈ ಮಾತುಗಳನ್ನು ಆಡಿದ್ದಾರೆ ಎಂದು ಸುದೀಪ್ ಹೇಳಲ್ಲಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಹಲವಾರು ಊಹೆಗಳು ನಡೆಯುತ್ತಿದೆ.

ಏನೇ ಆದರೂ ಸುದೀಪ್ ಅವರ ಈ ಖಡಕ್ ಮಾತು, ಅಭಿಮಾನಿಗಳ ಮೇಲಿರುವ ಪ್ರೀತಿ, ಕಾಳಜಿ ಎಲ್ಲವನ್ನು ನೋಡಿದ ಕಿಚ್ಚ ಅಭಿಮಾನಿಗಳು ಮಾರ್ಕ್ ಸಿನಿಮಾಗೆ ಉತ್ಸುಕರಾಗಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *