ಕುಚಿಕು ಡೆವಿಲ್ ಸಿನಿಮಾಗೆ ಬಿಗ್ ಬಾಸ್ ವೇದಿಕೆಯಲ್ಲೆ ವಿಶ್ ಮಾಡಿದ್ರಾ ಕಿಚ್ಚ..? ವೈರಲ್ ಆಯ್ತು ಪೋಸ್ಟ್!
Pallavi N Raj
ಕುಚಿಕು ಡೆವಿಲ್ ಸಿನಿಮಾಗೆ ಬಿಗ್ ಬಾಸ್ ವೇದಿಕೆಯಲ್ಲೆ ವಿಶ್ ಮಾಡಿದ್ರಾ ಕಿಚ್ಚ..? ವೈರಲ್ ಆಯ್ತು ಪೋಸ್ಟ್!
ಕನ್ನಡದ ನಂಬರ್ 1 ರಿಯಾಲಿಟಿ ಶೋ ಬಿಗ್ ಬಾಸ್ ವೇದಿಕೆಯಲ್ಲೇ ಕುಚಿಕು ಗೆಳೆಯ ದಚ್ಚು ಡೆವಿಲ್ ಗೆ ವಿಶ್ ಮಾಡಿದ್ದಾರೆ ಸುದೀಪ್ ಅನ್ನೊ ಪೋಸ್ಟ್ ಸಧ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಾಯಿದೆ..
ಹೌದು.. ನಟ ದರ್ಶನ್ ನಟನೆಯ ಡೆವಿಲ್ ಸಿನಿಮಾ ಇದೇ ಡಿಸೆಂಬರ್ 11ನೇ ತಾರೀಖು ಪ್ರಪಂಚದಾದ್ಯಂತ ರೀಲಿಸ್ ಆಗ್ತಾಯಿದೆ.. ಫ್ಯಾನ್ಸ್ ಗಳು ಹಬ್ಬದ ವಾತಾವರಣವನ್ನೇ ಸೃಷ್ಟಿ ಮಾಡಿದ್ದಾರೆ.. ಟ್ರೈಲರ್ ಬಂದಿದ್ದೇ ಬಂದಿದ್ದು ದಚ್ಚು ಸೆಲೆಬ್ರಿಟಿಸ್ ಗಳಿಗೆ ಕುತೂಹಲ ಡೇ ಬೈ ಡೇ ಹೆಚ್ಚಾಗ್ತಿದೆ.. ಡೆವಿಲ್ ಮತ್ತೊಂದು ಸ್ಪೆಷಾಲಿಟಿ ಏನಂದ್ರೆ ನಮ್ಮ ಕನ್ನಡದ ತಾರಾಂಗಣವಿರೋದು..
ಯೆಸ್.. ಬಿಗ್ ಬಾಸ್ ಸ್ಪರ್ಧಿಗಳು ಕೂಡ ಡೆವಿಲ್ ನಲ್ಲಿ ಮುಖ್ಯವಾದ ಪಾತ್ರದಲ್ಲಿ ಅಭಿನಯಿಸಿದ್ದಾರೆ.. ಬಿಗ್ ಬಾಸ್ ಸೀಸನ್ 12 ಗಿಲ್ಲಿ ನಟ, ಸೀಸನ್ 10 ವಿನಯ್ ಕೂಡ ಇದ್ದಾರೆ ಹೀಗಿರುವಾಗಲೇ ಕಿಚ್ಚ ಸುದೀಪ್ ಸೂಪರ್ ಸಂಡೇ ವೇದಿಕೆಯಲ್ಲಿ ಡೆವಿಲ್ ಗೆ ವಿಶ್ ಮಾಡಿದ್ದಾರೆ ಅನ್ನೊ ಪೋಸ್ಟ್ ಎಲ್ಲೆಡೆ ವೈರಲ್ ಆಗಿದೆ..
ಅಂದಹಾಗೆ.. ದರ್ಶನ್ ಸುದೀಪ್ ಸ್ನೇಹದ ಬಗ್ಗೆ ನಮ್ಮೆಲ್ಲರಿಗೂ ಗೊತ್ತೆ ಇದೆ.. ಅಭಿಮಾನಿಗಳ ಬಹುಕಾಲದ ಆಸೆ ಸ್ಯಾಂಡಲ್ ವುಡ್ ನ ಕುಚಿಕು ಗೆಳೆಯರು ಒಂದಾಗಬೇಕು ಅನ್ನೊದು ಬಟ್ ಅದು ಆಗುತ್ತೊ ಇಲ್ವೋ ಅನ್ನೊದೆ ಪ್ರಶ್ನಾರ್ಥಕವಾಗಿ ಉಳಿದು ಬಿಟ್ಟಿದೆ..
ಇನ್ನು.. ಇವರಿಬ್ಬರು ಒಂದಾದ್ರೆ ಅಭಿಮಾನಿಗಳಿಗೆ ಹಬ್ಬವೋ ಹಬ್ಬ.. ಬಿಗ್ ಬಾಸ್ ವೇದಿಕೆಯಲ್ಲಿ ಕಿಚ್ಚ ಸುದೀಪ ಡೆವಿಲ್ ನಲ್ಲಿ ಗಿಲ್ಲಿ ನಟನ ನಟನೆಯ ಬಗ್ಗೆ ಹಾಗೂ ಡೆವಿಲ್ ಗೆ ವಿಶ್ ಮಾಡ್ಬೇಕು ಅನ್ನೋದು ಗಿಲ್ಲಿನಟನ ಅಭಿಮಾನಿಗಳ ಆಸೆ ಆಗಿತ್ತು.. ಅದರಂತೆ ಕಿಚ್ಚ ವಿಶ್ ಮಾಡಿದ್ದಾರಂತೆ.. ತನ್ನ ಕುಚಿಕು ಸ್ನೇಹಿತನ ಡೆವಿಲ್ ಸಿನಿಮಾಕ್ಕೆ ಹಾರ್ಟಿ ವಿಶ್ ಮಾಡಿದ್ದಾರೆ ಎನ್ನಲಾಗ್ತಿದೆ..
ಒಟ್ನಲ್ಲಿ.. ಕಿಚ್ಚ ಸುದೀಪ್ ವಿಶ್ ಮಾಡಿದ್ದಾರೋ ಇಲ್ವೋ ಅನ್ನೊದು ನಮ್ಗೆ ಇವತ್ತೀನ ಸಂಚಿಕೆ ನೋಡಿದ್ರೆನೆ ತಿಳಿಯುತ್ತೆ.. ಏನಿ ವೇ ಕಿಚ್ಚ ವಿಶ್ ಮಾಡ್ಲಿ ಚಂದನವನದ ಕುಚಿಕು ಜೋಡಿಗಳು ಒಂದಾಗ್ಲೀ ಅನ್ನೋದೆ ನಮ್ಮೆಲ್ಲರ ಹಾರೈಕೆಯಾಗಿದೆ..