ಪದವಿ ಪೂರ್ವ ಸಾಂಗ್ ಲಾಂಚ್ ಮಾಡಿ, ಭಟ್ಟರ ಕಾಲೆಳೆದ ಕಿಚ್ಚ..!

ಬಾದಷಾ ಕಿಚ್ಚ ಸುದೀಪ್ ಪದವಿ ಪೂರ್ವ ಸಿನಿಮಾದ ಮೆಲೋಡಿಯಸ್ ಹಾಡು ʼಯಾಕೆ ಸಿಕ್ಕೆ…ʼ ರಿಲೀಸ್ ಮಾಡಿದ್ರು. ಸಿನಿಮಾದ ರೊಮ್ಯಂಟಿಕ್ ಮೆಲೋಡಿಯಸ್ ವಿಡಿಯೋ ಸಾಂಗ್ನ ಬಿಡುಗಡಿ ಮಾಡಿ ಶುಭಹಾರೈಸಿದ್ರು. ಯೋಗರಾಜ್ ಭಟ್ ನಿರ್ಮಾಣ ಮಾಡ್ತಿರೋ ಸಿನಿಮಾದ ಈ ಹಾಡಿಗೆ ಲಿರಿಕ್ಸ್ ಕೂಡ ಭಟ್ಟರೇ ಬರೆದಿದ್ದಾರೆ.
ಕಿಚ್ಚ ಸುದೀಪ್, ತಮ್ಮ ನೆಚ್ಚಿನ ನಿರ್ದೇಶಕ ಯೋಗರಾಜ್ ಭಟ್ ರವಿಶ್ಯಾಮನೂರು ನಿರ್ಮಾಣದ ಹದಿಹರೆಯದ ಕಾಲೇಜು, ಫ್ರೆಂಡ್ ಶಿಫ್ ,ಪ್ರೇಮ ಕಾವ್ಯ ಪದವಿ ಪೂರ್ವ ಚಿತ್ರದ ರೊಮ್ಯಾಂಟಿಕ್ ಸಾಂಗ್ ನ ರಿಲೀಸ್ ಮಾಡಿ, ಭಟ್ರು ಸುಮ್ಮನಿದ್ರು, ಅವ್ರ ಬೆರಳು ಸುಮ್ಮನಿರಕಲ್ಲ ಅಂತ ತಮಾಷೆ ಮಾಡಿದ್ರು.
ಕಿಚ್ಚ ಸುದೀಪ್ ಅವರ ನಿವಾಸದಲ್ಲಿ ಸಾಂಗ್ ರಿಲೀಸ್ ಮಾಡಿದ ಸಂದರ್ಭದಲ್ಲಿ ಯೋಗರಾಜ್ ಭಟ್, ನಿರ್ದೇಶಕ ಹರಿಪ್ರಸಾದ್ ಜಯಣ್ಣ, ನಾಯಕಿ ಪೃಥ್ವಿ ಶ್ಯಾಮನೂರು ,ನಾಯಕಿ ಅಂಜಲಿ ಅನೀಶ್ ಭಾಗವಹಿಸಿದ್ದರು.ಅಂದ್ಹಾಗೆ ಪದವಿ ಪೂರ್ವ ಚಿತ್ರದ ಪ್ರಮೋಷನ್ಸ್ ಜೋರಾಗೇ ನಡೀತಿದ್ದು, ಸಿನಿಮಾ ಇದೇ ಡಿ.30ನೇ ತಾರೀಖು ರಿಲೀಸ್ ಆಗ್ತಿದೆ.