new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

‘ಮಾರ್ಕ್’ ನಲ್ಲಿ ಕಿಚ್ಚ ಮಾಸ್ ಮಹಾರಾಜ..!

‘ಮಾರ್ಕ್’ ನಲ್ಲಿ ಕಿಚ್ಚ ಮಾಸ್ ಮಹಾರಾಜ..!
  • PublishedDecember 7, 2025

‘ಮಾರ್ಕ್’ ಫಿಲಂ ನಲ್ಲಿ ಯಾವ ರೀತಿಯ ಪಾತ್ರ ಮಾಡ್ತಿದ್ದಾರೆ? ಲುಕ್ ಯಾವ್ ತರ ಇರ್ಬೋದು ಎಂದೆಲ್ಲಾ ಪ್ರಶ್ನೆಗಳು ಅಭಿಮಾನಿಗಳಲ್ಲಿ ಮೂಡಿದ್ದವು. ಇದೀಗ ಆ ಪ್ರಶ್ನೆಗೆ ಉತ್ತರಿಸಿರುವ ಕಿಚ್ಚ ತಮ್ಮ ಪಾತ್ರದ ಬಗ್ಗೆ ಏನ್ ಹೇಳಿದ್ದಾರೆ ಅನ್ನೋದರ ಸ್ಟೋರಿ ಇಲ್ಲಿದೆ.

ಸುದೀಪ್ ನಟನೆಯ ಬಹು ನಿರೀಕ್ಷಿತ ಫಿಲಂ ‘ಮಾರ್ಕ್ ‘ ತೆರೆ ಮೇಲೆ ಡಿಸೆಂಬರ್ 25 ರಂದು ಅಪ್ಪಳಿಸಲಿದ್ದು, ಇಂದು ಚಿತ್ರ ತಂಡವು ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿದೆ.ಈ ಬಾರಿ ಸಿನಿಮಾದಲ್ಲಿ ಪಾತ್ರದ ಬಗ್ಗೆ ಮಾತನಾಡಿದ ಕಿಚ್ಚ “ನನ್ನ ಕ್ಯಾರೆಕ್ಟರ್ ಸೈಕೋ ಸೈತಾನ್ ರೀತಿಯೇ ಇದೆ. ವಿಭಿನ್ನ ಪಾತ್ರದ ಜೊತೆಗೆ ವಿಭಿನ್ನ ಲುಕ್. ನಾನು ಇದುವರೆಗೂ ಮಾಡದೆ ಇರೋ ಒಂದು ಪಾತ್ರ” ಎಂದು ಹೇಳಿದ್ದಾರೆ.

ಇದನ್ನು ಕೇಳಿದ ಅಭಿಮಾನಿಗಳು ಸಿನಿಮಾ ಯಾವಾಗ ಬರುತ್ತಪ್ಪ ಅಂತ ಕಾಯ್ತಿದ್ದಾರೆ. ಸುದೀಪ್ ಅವರು ವರ್ಸಟೈಲ್ ನಟ. ಅದಕ್ಕಾಗಿಯೇ ಅವರು ಫೇಮಸ್. ಹಾಗಾಗಿ ಈ ಚಿತ್ರದಲ್ಲಿ ಅವರ ಪಾತ್ರ ಯಾವ ರೀತಿ ಇದೆ ಎಂದು ಡಿಸೆಂಬರ್ 25 ರಂದೇ ತಿಳಿಯಲು ಸಾಧ್ಯ.

Written By
Kannada Picchar

Leave a Reply

Your email address will not be published. Required fields are marked *