new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಕಿಚ್ಚನ ಸಿನಿ ಪಯಣಕ್ಕೆ ಈಗ 30 ವರ್ಷದ ಸಂಭ್ರಮ

ಕಿಚ್ಚನ ಸಿನಿ ಪಯಣಕ್ಕೆ ಈಗ 30 ವರ್ಷದ ಸಂಭ್ರಮ
  • PublishedJanuary 31, 2026

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ನಟನೆಗೆ, ನಿರ್ದೇಶನಕ್ಕೆ, ಸಿಂಗಿಂಗ್ ಗೆ ಜೊತೆಗೆ ಹೊಸ್ಟಿಂಗ್ ಗೂ ಸೈ ಎನ್ನುವ ಪ್ರತಿಭಾನ್ವಿತ ನಟ.ಪ್ರತಿಯೊಂದು ಮಾತಿನಲ್ಲೂ ತೂಕ ಹೊಂದಿರುವ ಇವರು
ಪ್ರತಿ ಸಿನಿಮಾಗಳಲ್ಲಿಯೂ ವಿಭಿನ್ನ ಪಾತ್ರಗಳಿಗೆ ಬಣ್ಣ ಹಚ್ಚಿ ಬಣ್ಣದ ಲೋಕದಲ್ಲಿ ಸೂಪರ್ ಸ್ಟಾರ್ ಆಗಿ ಕ್ರೇಜ್ ಹೊಂದಿದ್ದಾರೆ. ಇದೀಗ ಕಿಚ್ಚನ ಈ ಸಿನಿ ಪಯಣಕ್ಕೆ 30 ವರ್ಷದ ದಾಪುಗಲ್ಲು.

‘ತಾಯವ್ವ ‘ ಸಿನಿಮಾ ಅವರ ಬಣ್ಣದ ಲೋಕದಲ್ಲಿ ಬಿಡುಗಡೆ ಕಂಡ ಮೊದಲ ಸಿನಿಮಾ ಆಗಿದ್ದರು. ಇದಕ್ಕೆ ಮುಂಚಿತವಾಗಿ 1996 ರಲ್ಲಿ ‘ಬ್ರಹ್ಮ’ ಎನ್ನುವ ಸಿನಿಮಾದ ಮೂಲಕ ಮೊದಲು ಬಣ್ಣ ಹಚ್ಚಲು ಶುರು ಮಾಡಿದರು. ಆದ್ರೆ ಕಾರಣಾಂತರಗಳಿಂದ ಸಿನಿಮಾ ಬಿಡುಗಡೆ ಆಗಲ್ಲಿಲ್ಲ.ಆದರೆ ಮೊದಲ ಬಾರಿ ಬಣ್ಣ ಹಚ್ಚಿ ಇಂದಿಗೆ 30 ವರ್ಷ ವಾಗಿದೆ. ಆರಂಭಿಕ ದಿನಗಳಲ್ಲಿ ಬ್ಯಾಕ್ ಟು ಬ್ಯಾಕ್ ಸೋಲುಗಳನ್ನು ಕಿಚ್ಚ ಅನುಭವಿಸಿದ್ದರು. ಹಾಗಾಗಿ ಅವರನ್ನು ‘ಐರನ್ ಲೆಗ್’ ಎಂದು ಕೂಡ ಕರೆಯುತ್ತಿದ್ದರು.

ಇಷ್ಟಾದರೂ ಛಲ ಬಿಡದ ಸುದೀಪ್ ಅವರಿಗೆ ಬ್ರೇಕ್ ಕೊಟ್ಟಿದ್ದು ‘ಸ್ಪರ್ಶ’ ಫಿಲಂ. ಅದಾದ ನಂತರ ಹುಚ್ಚ,ನಂದಿ, ಸ್ವಾತಿ ಮುತ್ತು ಹೀಗೆ ಹಿಟ್ ಫಿಲಂ ಗಳನ್ನು ನೀಡಿ. ಇದೀಗ ಬಹು ಭಾಷಾ ನಟನಾಗಿ ಮಿಂಚುತ್ತಿದ್ದಾರೆ.

ನಾಯಕನಾಗಿ ಇವರಿಗೆ ಇರೋ ಫ್ಯಾನ್ ಬೇಸ್ ಒಂದು ಕಡೆಯಾದರೆ. ಖಳ ನಾಯಕನಾಗಿ ನಟಿಸುವ ರೀತಿಗೆ ಇಡೀ ಇಂಡಿಯಾವೇ ಫಿದಾ ಆಗಿದೆ. ಎಲ್ಲ ರೀತಿಯ ಪಾತ್ರಗಳಿಗೆ ಫಿಟ್ ಆಗುವ ಇವರು ನಮ್ಮ ಭಾರತದ ವರ್ಸಟೈಲ್ ನಟರಲ್ಲಿ ಒಬ್ಬರು.

30 ವರ್ಷದ ಈ ಸುಧೀರ್ಘ ಪಯಣದಲ್ಲಿ ಹಲವು ಏಳು ಬೀಳುಗಳನ್ನ ಕಂಡು ಒಳ್ಳೆಯ ಸಿನಿಮಾಗಳನ್ನು ಕೊಟ್ಟು ರಂಜಿಸಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *