ಟಾಕ್ಸಿಕ್’ ಫಸ್ಟ್ ಲುಕ್ ಬೆನ್ನಲ್ಲೇ ಕಿಯಾರಾ ಭಾವುಕ ಪೋಸ್ಟ್
ನಿನ್ನೆ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ನಾಯಕಿ ಕಿಯಾರ ಅಡ್ವಾಣಿ ಅವರ ಪಾತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದರು.ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಬರುತ್ತಿರುವ ಈ ಸಿನಿಮಾದಲ್ಲಿ ದೊಡ್ಡ ತಾರಾ ಬಳಗವೇ ಇದೆ.ಇದೀಗ ಬಾಲಿವುಡ್ ಬೆಡಗಿ ಕಿಯಾರ ತಮ್ಮ ಪಾತ್ರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಸಂದೇಶವನ್ನು ಹಂಚಿಕೊಂಡಿದ್ದಾರೆ.
ಕಿಯಾರ ಅಡ್ವಾಣಿ
ಬಾಲಿವುಡ್ ನ ಬಹು ಬೇಡಿಕೆಯ ನಟಿಯರಲ್ಲಿ ಕಿಯಾರ ಅವರು ಒಬ್ಬರು.ತಮ್ಮ ನಟನೆಯಿಂದಾನೆ ಹೆಸರುವಾಸಿಯಾಗಿರುವ ಇವರ ಕೆರಿಯರ್ ನ ದೊಡ್ಡ ಬ್ರೇಕ್ ಕ್ಯಾಪ್ಟನ್ ಕೂಲ್ ಧೋನಿಯವರ ಜೀವನಾಧರಿತ ಎಂ.ಎಸ್.ಧೋನಿ : ದಿ ಅನ್ ಟೋಲ್ಡ್ ಸ್ಟೋರಿ ಯಲ್ಲಿ ಸಾಕ್ಷಿ ಪಾತ್ರದಿಂದ .ಇದೀಗ ದೊಡ್ಡ ದೊಡ್ಡ ಸ್ಟಾರ್ ನಟರಿಗೆ ಜೋಡಿಯಾಗಿ ನಟಿಸುತ್ತಾರೆ.
ಕಿಯಾರ ಭಾವನಾತ್ಮಕ ಇನ್ಸ್ಟಾ ಸ್ಟೋರಿ:
ತಮ್ಮ ಟಾಕ್ಸಿಕ್ ಸಿನಿಮಾದ ಮೊದಲ ಪೋಸ್ಟರ್ ಗೆ ಸಿಕ್ಕ ಪ್ರೀತಿ ನೋಡಿದ ಅವರು ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ “ದೈಹಿಕವಾಗಿ,ಮಾನಸಿಕವಾಗಿ,ಭಾವನಾತ್ಮಕವಾಗಿ ನನ್ನನ್ನು ಪೂರ್ತಿಯಾಗಿ ತೊಡಗಿಸಿಕೊಂಡ ಪಾತ್ರವಿದು. ನನ್ನಲ್ಲಿ ಹೊಸ ರೂಪಾಂತರವನ್ನೇ ತಂದಿದೆ. ನನ್ನ ವೃತ್ತಿಜೀವನದಲ್ಲೇ ಇದು ಅತ್ಯಂತ ಕಠಿಣವಾದ ಸವಾಲು . ತಿಂಗಳುಗಳ ಕಠಿಣ ಶ್ರಮ ಮತ್ತು ಒಂದು ದಿಟ್ಟ ಹೆಜ್ಜೆ, ಈ ಪ್ರಯತ್ನದ ಹಿಂದಿದೆ. ಇಂದು ಈ ‘ಫಸ್ಟ್ ಲುಕ್’ಗೆ ನೀವು ನೀಡುತ್ತಿರುವ ಪ್ರೀತಿಯನ್ನು ಕಂಡು ಮನಸ್ಸು ತುಂಬಿ ಬಂದಿದೆ. ನಿಮ್ಮ ಈ ಬೆಂಬಲಕ್ಕೆ ನಾನು ಸದಾ ಋಣಿ.” ಎಂದು ಬರೆದುಕೊಂಡಿದ್ದಾರೆ.
ಇನ್ನೇನು ಕೆಲವೇ ಕೆಲವು ತಿಂಗಳಲ್ಲಿ ಚಿತ್ರ ಬಿಡುಗಡೆಗೊಳ್ಳಲ್ಲಿದ್ದು, ಕಿಯಾರ ಅವರು ಚಿತ್ರದಲ್ಲಿ ನಾಡಿಯಾ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಪೋಸ್ಟರ್ ನೋಡಿದ ಜನರ ಕುತೂಹಲ ಸಿನಿಮಾದ ಮೇಲೆ ಇನ್ನು ಹೆಚ್ಚಾಗಿದೆ.ಇನ್ನು ಸಿನಿಮಾದಲ್ಲಿ ನಟಿಸಿರುವ ಅನೇಕ ಕಲಾವಿದರ ಪೋಸ್ಟರ್ ಬಿಡುಗಡೆಯಾಗುವ ಸಾಧ್ಯತೆ ಇದೆ.