ʼಟಾಕ್ಸಿಕ್ʼ ಅಡ್ಡಾದಲ್ಲಿ ನಾಡಿಯಾ !
ಯಶ್ ನಟನೆಯ ಸಿನಿಮಾ ʼಟಾಕ್ಸಿಕ್ʼ ಚಿತ್ರ ಇನ್ನೇನು ಕೆಲವೇ ತಿಂಗಳಲ್ಲಿ ಬರಲಿದೆ.ಕೆಜಿಎಫ್ ಹಾಗು ಕೆಜಿಎಫ್ ಚಾಪ್ಟರ್ 2 ರ ನಂತರ ಯಶ್ ಚಿತ್ರದ ಮೇಲೆ ಅಭಿಮಾನಿಗಳಿಗೆ ಬಹಳಷ್ಟು ನಿರೀಕ್ಷೆ ಹೆಚ್ಷಿದೆ.ಇನ್ನು ಇಂದು ಯಶ್ ನಟನೆಯ ಕೆಜಿಎಫ್ ಬಿಡುಗಡೆಯಾಗಿ 7 ವರ್ಷ ಪೂರ್ಣಗೊಂಡ ಸಮಯದಲ್ಲಿ ‘ಟಾಕ್ಸಿಕ್’ ಸಿನಿಮಾದ ಬಿಗ್ ಅಪ್ಡೇಟ್ ಹೊರಬಿದ್ದಿದೆ.ಸಿನಿಮಾದ ನಾಯಕಿ ಕಿಯಾರ ಅಡ್ವಾಣಿ ಅವರು ನಾಡಿಯಾ ಪಾತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ. ಈ ನಾಡಿಯಾ ಪಾತ್ರದ ಮೊದಲ ಲುಕ್ ಅನ್ನು ಚಿತ್ರ ತಂಡ ಬಿಡುಗಡೆ ಮಾಡಿದೆ.
ಭಾರತೀಯ ಸಿನಿಮಾ ರಂಗದಲ್ಲಿ ಕಿಯಾರ ಅಡ್ವಾಣಿ ಒಬ್ಬ ಅದ್ಭುತ ನಟಿ ಎಂದು ಗುರುತಿಸಿಕೊಂಡಿದ್ದಾರೆ. ಅವರ ನಟನಾ ಕೌಶಲ್ಯವನ್ನು ಈಗಾಗಲೇ ಎಂಎಸ್ ಧೋನಿ ಅನ್ ಟೋಲ್ಡ್ ಸ್ಟೋರಿ, ಶೇರ್ಷಾ, ಕಬೀರ್ ಸಿಂಗ್ ಹೀಗೆ ಅನೇಕ ಸಿನಿಮಾಗಳಲ್ಲಿ ಜನ ಮೆಚ್ಚಿದ್ದಾರೆ.ಕಿಯಾರ ಅಡ್ವಾಣಿಯ ಲುಕ್ ನೋಡಿದ ಅಭಿಮಾನಿಗಳ ಉತ್ಸಾಹ ಇನ್ನು ಜಾಸ್ತಿಯಾಗಿದೆ. ಚಿತ್ರ ತಂಡ ಪೋಸ್ಟರ್ ಬಿಡುಗಡೆ ಮಾಡಿದ ತಕ್ಷಣ ಕಿಯಾರ ಪಾತ್ರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ಶುರುವಾಗಿದೆ.
ಪೋಸ್ಟರ್ ನಲ್ಲಿ ಸರ್ಕಸ್ ಹಿನ್ನಲೆಯಲ್ಲಿ ಇದೆ. ಮೆಲ್ನೋಟಕ್ಕೆ ಕಿಯಾರ ಬ್ಯೂಟಿಫುಲ್ ಗೌನ್ ನಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದರು, ಕಿಯಾರ ಅವರ ಮುಖದಲ್ಲಿ ಒಂದು ರೀತಿಯ ದುಃಖದ ಭಾವನೆ ಕಾಣುತ್ತಿದೆ.ಹಾಗಾಗಿ ಈ ಸಿನಿಮಾದಲ್ಲಿ ಕಿಯಾರ ಅವರು ಆಳವಾದ ಭಾವನೆಗಳನೊಳಗೊಂಡ ಪಾತ್ರದಲ್ಲಿ ಸ್ಕ್ರಿನ್ ಮೇಲೆ ಮಿಂಚಲಿದ್ದಾರೆ.
ಇದಕ್ಕಿಂತ ಮುಂಚಿತವಾಗಿ ಯಶ್ ಹಾಗೂ ಕಿಯಾರ ಅವರು ಶೂಟಿಂಗ್ ಅಲ್ಲಿರುವ ಕೆಲವೊಂದು ಫೋಟೋಸ್ ಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿತ್ತು.ಇದೀಗ ಪೋಸ್ಟರ್ ನೋಡಿದ ಮೇಲೆ ಇಬ್ಬರ ಕೆಮಿಸ್ಟ್ರಿ ಬಗ್ಗೆ ಜನರಲ್ಲಿ ಕುತೂಹಲ ಮೂಡಿದೆ.