ಕನ್ನಡ ನಿರ್ದೇಶಕನ ಮಗನ ದಾರುಣ ಸಾವು
ಕೆಜಿಎಫ್ ಚಾಪ್ಟರ್ 2 ಚಿತ್ರದ ಸಹ ನಿರ್ದೇಶಕರಾಗಿರುವ ಕೀರ್ತನ್ ಗೌಡ ಅವರ ಪುತ್ರ ಸಾವನಪ್ಪಿದ್ದಾನೆ.ನಾಲ್ಕು ವರ್ಷದ ಮಗನ ದಾರುಣ ಸಾವಿನ ವಿಚಾರವನ್ನು ಕೀರ್ತನ್ ಗೌಡ ಅವರು ಹಂಚಿ ಕೊಂಡಿದ್ದಾರೆ.
ಈ ಘಟನೆ ಹೈದರಾಬಾದ್ ನಲ್ಲಿ ನಡೆದಿದ್ದು, ಕೀರ್ತನ್ ಗೌಡ ತಮ್ಮ ಕುಟುಂಬ ಸಮೇತ ಮೂರು ದಿನಗಳ ಹಿಂದೆ ಹೈದರಾಬಾದ್ ಗೆ ಹೋಗಿದ್ದರು. ಈ ಸಂಧರ್ಭದಲ್ಲಿ ಮಗ ಸೋನಾರ್ಷ್ ಆಕಸ್ಮಿಕವಾಗಿ ಲಿಫ್ಟ್ ನಲ್ಲಿ ಸಿಲುಕಿ ಸಾವನಪ್ಪಿದ್ದಾನೆ.
ಪವನ್ ಕಲ್ಯಾಣ್ ಸಂತಾಪ
ಈ ವಿಷಯ ತಿಳಿದ ಕೂಡಲೇ ನಟ ಹಾಗೂ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಹಾಗೂ ಅನೇಕರು ತಮ್ಮ ಸಂತಾಪವನ್ನು ಸೂಚಿಸಿದ್ದಾರೆ.