KGF-2 ಪವರ್ ಫುಲ್ ಟೀಸರ್: ಪವರ್ ಫುಲ್ ದಾಖಲೆಗಳು.

ಕೆಜಿಎಫ್-2 ಸಿನಿಮಾ ಟೀಸರ್ ಜನವರಿ 8ಕ್ಕೆ, ರಾಕಿ ಭಾಯ್ ಹುಟ್ಟುಹಬ್ಬಕ್ಕೆ ರಿಲೀಸ್ ಆಗಬೇಕಿತ್ತು, ಆದ್ರೆ ಅದಕ್ಕೂ ಒಂದು ದಿನ ಮೊದಲೇ ಸಿನಿಮಾ ಟೀಸರ್ ರಿಲೀಸ್ ಆಯ್ತು, ಟೀಸರ್‌ಗಾಗಿ ಜನ ಎಷ್ಟು ಕಾಯ್ತಾ ಇದ್ರು ಅನ್ನೋದಕ್ಕೆ ಸಿನಿಮಾ ಟೀಸರ್ ರಿಲೀಸ್ ಆದಗಿಂದ ಮಾಡ್ತಿರ ದಾಖಲೆಗಳೇ ಅದಕ್ಕೆ ಸಾಕ್ಷಿ. ಕಂಟೆಂಟ್ ಜೊತೆಗೆ ನಂಬರ್‌ಗಳಲ್ಲಿ ವಿಶ್ವಮಟ್ಟದಲ್ಲಿ ಕೆಜಿಎಫ್ ಮಾಡಿರೋ ದಾಖಲೆಗಳನ್ನ ನೋಡಿದ್ರೆ ವಾವ್ ಅನ್ನಿಸುತ್ತೆ. ಆ 10 ವಾವ್‌ಗಳು ಇಲ್ಲಿವೆ ನೋಡಿ.

- 15 ಕೋಟಿಗೂ ಹೆಚ್ಚು ವೀಕ್ಷಣೆ ಕಾಣ್ತಿರೋ ಮೊದಲ ಭಾರತೀಯ ಸಿನಿಮಾದ ಟೀಸರ್
- 60 ಲಕ್ಷ ಲೈಕ್ಸ್ ಪಡೆದ ಭಾರತದ ಮೊದಲ ಟೀಸರ್
- 24 ಗಂಟೆಯಲ್ಲಿ 1 ಕೋಟಿ ವೀಕ್ಷಣೆ ಪಡೆದ ಮೊದಲ ಇಂಡಿಯನ್ ಸಿನಿಮಾ ಟೀಸರ್
- 4 ದಿನವಾದ್ರೂ ಟ್ವಿಟರ್‌ನಲ್ಲಿ ಟೆಂಡಿಂಗ್ ನಲ್ಲಿರೋ ಟೀಸರ್
- 3 ದಿನ ಯೂಟ್ಯೂಬ್‌ನಲ್ಲಿ ಟೆಂಡಿಂಗ್‌ನಲ್ಲಿ ನಂ.1ನೇ ಸ್ಥಾನದಲ್ಲಿದ ಟೀಸರ್
- ವಿಶ್ವದಲ್ಲೇ ಅತಿ ಹೆಚ್ಚು ವೀಕ್ಷಣೆ ಕಂಡ ಟೀಸರ್ ಗಳಲ್ಲಿ 2ನೇ ಸ್ಥಾನದಲ್ಲಿರೋ ಟೀಸರ್
- ಅತ್ಯಂತ ವೇಗವಾಗಿ 10 ಲಕ್ಷ ಲೈಕ್ಸ್ ಪಡೆದ ವಿಶ್ವದ ಮೊದಲ ಟೀಸರ್ (76 ನಿಮಿಷಗಳಲ್ಲಿ)
- ಕನ್ನಡದಲ್ಲಿ ಅತಿ ಹೆಚ್ಚು ಲೈಕ್ಸ್ ಪಡೆದ ಸಿನಿಮಾ ಟೀಸರ್ ಇದು.
- ಟೀಸರ್ ಪ್ರಿಮಿಯರ್‌ಗೂ ಮೊದಲೇ 25 ಸಾವಿರ ಲೈಕ್ಸ್ ಪಡೆದಿದ್ದ ಟೀಸರ್
- ಭಾರತದಲ್ಲಿ ಅತಿ ಹೆಚ್ಚು ಬಾರಿ ಶೇರ್ ಆಗಿರೋ ಟೀಸರ್ ಇದು.